ಒಂದೇ ದಿನ 100 ಪುರುಷರೊಂದಿಗೆ ಸೆಕ್ಸ್; ಲಿಲಿ ಫಿಲಿಪ್ಸ್ ಗೆ ಸಂಕಷ್ಟ, ನಿಷೇಧ ಭೀತಿ

OnlyFans Model
Spread the love

ಹೊಸ ವರ್ಷಾಚರಣೆಯ ಅಂಗವಾಗಿ ಒಂದೇ ದಿನ ಬರೊಬ್ಬರಿ 100 ಜನರೊಂದಿಗೆ ಸೆಕ್ಸ್ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ OnlyFans Model ಖ್ಯಾತಿಯ ಮಾಡೆಲ್ ಲಿಲಿ ಫಿಲಿಪ್ಸ್ ಗೆ ಸಂಕಷ್ಟ ಎದುರಾಗಿದ್ದು, ನಿಷೇಧದ ಭೀತಿ ಎದಿರುಸುವಂತಾಗಿದೆ.

ಹೌದು.. ಲಿಲಿ ಫಿಲಿಪ್ಸ್ ವಾಸವಿದ್ದ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಮಾಲೀಕರ ಒಪ್ಪಿಗೆ ಇಲ್ಲದೇ ಒಂದೇ ದಿನ 100 ಪುರುಷರೊಂದಿಗೆ ಸೆಕ್ಸ್ ಕಾರ್ಯಕ್ರಮ ಆಯೋಜನೆ ಮಾಡಿದ ಆರೋಪದ ಮೇರೆಗೆ ಮಾಡೆಲ್ ಲಿಲಿ ಫಿಲಿಪ್ಸ್ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಅವರ ಈ ಕಾರ್ಯಕ್ಕೆ ಅವರ ಮೇಲೆ ನಿಷೇಧದ ತೂಗುಗತ್ತಿ ತೂಗುತ್ತಿದೆ.

ಲಂಡನ್ ನ Airbnb ಲಿಲಿ ಫಿಲಿಪ್ಸ್ ಮೇಲೆ ನಿಷೇಧ ಹೇರಲು ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ. Airbnb ಎನ್ನುವುದು ಆನ್‌ಲೈನ್ ಮಾರುಕಟ್ಟೆಯಾಗಿದ್ದು ಅದು ಜನರಿಗೆ ಅಲ್ಪಾವಧಿಗೆ ಬಾಡಿಗೆಗೆ ಆಸ್ತಿಯನ್ನು ಲಭ್ಯವಾಗುವಂತೆ ಮಾಡುತ್ತದೆ. ಆಸ್ತಿ ಮಾಲೀಕರು ಮತ್ತು Airbnb ಮೂಲಕ ಆಸ್ತಿಯನ್ನು ಬಾಡಿಗೆಗೆ ಪಡೆಯಲು ಆಸಕ್ತಿ ಹೊಂದಿರುವ ಜನರು ಈ ಪ್ಲಾಟ್ ಫಾರ್ಮ್ ಮೂಲಕ ಸಂಪರ್ಕದಲ್ಲಿರಬಹುದು.

ಇದೀಗ ಮಾಡಲ್ ಲಿಲಿ ಫಿಲಿಪ್ಸ್ ತನ್ನ ಅಪಾರ್ಟ್ ಮೆಂಟ್ ನಲ್ಲಿ ಮಾಲೀಕರ ಒಪ್ಪಿಗೆ ಇಲ್ಲದೇ ಸೆಕ್ಸ್ ಪಾರ್ಟಿ ಆಯೋಜನೆ ಮಾಡಿದ್ದರಿಂದ ಆಕೆಯನ್ನು Airbnb ನಿಷೇಧಿಸಲು ಮುಂದಾಗಿದೆ.

ಇನ್ನು ಓನ್ಲಿ ಫ್ಯಾನ್ಸ್‌ನ ಮಾಡೆಲ್ ಲಿಲಿ ಫಿಲಿಪ್ಸ್ ಈ ಹಿಂದೆ ಹೊಸ ವರ್ಷಾಚರಣೆ ಸಂಬಂಧ ಪೋಸ್ಟ್ ವೊಂದನ್ನು ಹಾಕಿದ್ದರು. ಅದರಲ್ಲಿ ಸೆಕ್ಸ್ ಮ್ಯಾರಥಾನ್ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಘೋಷಿಸಿದ್ದರು. ಅದರಂತೆ ಆಕೆ 1 ಸಾವಿರ ಮಂದಿ ಜೊತೆ ಮ್ಯಾರಥಾನ್ ಸೆಕ್ಸ್ ನಡೆಸುವುದಾಗಿ ಘೋಷಣೆ ಮಾಡಿದ್ದರು.

ಅಲ್ಲದೆ ಜನವರಿ 1ರಂದು ಅಂದರೆ ಹೊಸ ವರ್ಷಾಚರಣೆ ದಿನ ಆಕೆ AirBnB ಅಪ್ಲಿಕೇಶನ್ ಮೂಲಕ ಬಾಡಿಗೆಗೆ ಪಡೆದಿದ್ದ ಫ್ಲಾಟ್ ನಲ್ಲೇ 100 ಜನರೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದರು. ಈ ವಿಚಾರವನ್ನೂ ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಇದೇ ಪೋಸ್ಟ್ ಅವರ ವಿರುದ್ಧ AirBnB ಕ್ರಮಕ್ಕೆ ಮುಂದಾಗುವಂತೆ ಮಾಡಿದೆ.

ಇದೇ ವಿಡಿಯೋದಲ್ಲಿ ಲಿಲಿ ಫಿಲಿಪ್ಸ್ ತಾನು ಭವಿಷ್ಯದಲ್ಲಿಯೂ ಇದೇ ಸಾಹಸವನ್ನು ಮುಂದುವರೆಸಲು ಬಯಸುತ್ತೇನೆ. ನನ್ನ ಈ ಕೃತ್ಯದಿಂದ ನನಗೆ ಪಾಶ್ಚಾತ್ತಾಪವೇನೂ ಇಲ್ಲ.. ಅಲ್ಲದೆ ಮುಂದಿನ ಬಾರಿ ಈ ಪ್ರಮಾಣ 10 ಪಟ್ಟು ಹೆಚ್ಚಾಗಲಿದೆ ಎಂದು ಹೇಳಿದ್ದರು. ಅವರ ಈ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.

ಇನ್ನು ಲಿಲಿ ಫಿಲಿಪ್ಸ್ AirBnB ಆ್ಯಪ್ ಮೂಲಕ ಬಾಡಿಗೆಗೆ ಫ್ಲಾಟ್ ಪಡೆದಿದ್ದು, ಆದಾಗ್ಯೂ ಅವರು ಸೆಕ್ಸ್ ಪಾರ್ಟಿ ಆಯೋಜನೆ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ AirBnB ಪ್ಲಾಟ್ ಫಾರ್ಮ್ ನಲ್ಲಿ ಆಕೆಯನ್ನು ನಿಷೇಧಕ್ಕೊಳಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!