ರಹಸ್ಯ ಹಣ ಪ್ರಕರಣ; ಡೊನಾಲ್ಡ್ ಟ್ರಂಪ್ ಗೆ ಶಿಕ್ಷೆ ಪ್ರಕಟ

Trump
Spread the love

ನ್ಯೂಸ್ ಆ್ಯರೋ: ಮಹತ್ವದ ಬೆಳವಣಿಗೆಯಲ್ಲಿ, ಅಮೆರಿಕಾದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಮಾಣವಚನಕ್ಕೂ ಮುನ್ನ ಸಂಕಷ್ಟ ಎದುರಾಗಿದೆ. ರಹಸ್ಯ ಹಣ ಪ್ರಕರಣದಲ್ಲಿ ವಿಚಾರಣೆ ನಡೆಸಿರುವ ನ್ಯಾಯಾಧೀಶರು ಜನವರಿ 10 ಕ್ಕೆ ಶಿಕ್ಷೆ ಪ್ರಮಾಣ ನಿಗದಿಪಡಿಸಲಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿ 20 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಳೆದ ವರ್ಷ ಚುನಾವಣೆಯಲ್ಲಿ ಗೆದ್ದ ಅವರು ಜನವರಿಯಲ್ಲಿ ಶ್ವೇತಭವನವನ್ನು ಪ್ರವೇಶಿಸಲಿದ್ದಾರೆ. ಆದರೆ ಅದಕ್ಕೂ ಮುನ್ನ ಅವರಿಗೆ ದೊಡ್ಡ ಬಿಕ್ಕಟ್ಟು ಎದುರಾಗಿದೆ. ಅವರ ರಿಪಬ್ಲಿಕನ್ ಪಕ್ಷವು ಆಘಾತಕ್ಕೊಳಗಾಗಿದೆ.

ನ್ಯೂಯಾರ್ಕ್‌ನಲ್ಲಿ ಹಣ ವಂಚನೆ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್‌ಗೆ ಜನವರಿ 10 ರಂದು ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಎರಡು ವಾರಕ್ಕೂ ಮುನ್ನ ಈ ಆದೇಶ ಹೊರಬಿದ್ದಿದೆ.

ಟ್ರಂಪ್‌ರ ವಿಚಾರಣೆಯ ಅಧ್ಯಕ್ಷತೆ ವಹಿಸಿದ್ದ ಮ್ಯಾನ್‌ಹ್ಯಾಟನ್ ನ್ಯಾಯಾಧೀಶ ಜುವಾನ್ ಎಂ. ಮರ್ಚನ್ ಅವರು ಲಿಖಿತ ಆದೇಶದಲ್ಲಿ, ಮಾಜಿ ಮತ್ತು ಭವಿಷ್ಯದ ಅಧ್ಯಕ್ಷರಿಗೆ ಬೇಷರತ್ತಾದ ಖುಲಾಸೆ ಎಂದು ಕರೆಯಲ್ಪಡುವ ಶಿಕ್ಷೆಯನ್ನು ವಿಧಿಸುವುದಾಗಿ ಸೂಚಿಸಿದರು. ಆದರೂ, ಜೈಲು ಶಿಕ್ಷೆ, ದಂಡ ಪ್ರಕರಣವನ್ನು ಮುಚ್ಚಿಹಾಕಲಾಗಿದೆ. ಟ್ರಂಪ್ ಅವರು ಜನವರಿ 10ರಂದು ವರ್ಚುವಲ್ ಮೂಲಕ ವಿಚಾರಣೆಗೆ ಹಾಜರಾಗಲಿದ್ದಾರೆ.

ಏನಿದು ಪ್ರಕರಣ:

ಮೇ ತಿಂಗಳಲ್ಲಿ ನೀಲಿ ಚಿತ್ರತಾರೆ ಸ್ಟಾರ್ಮಿ ಡೇನಿಯಲ್ಸ್‌ಗೆ 130,000 ಡಾಲರ್ ಪಾವತಿಸಿದ ವ್ಯವಹಾರಿಕ ದಾಖಲೆಗಳಲ್ಲಿ ಫೌಲ್​ ಪ್ಲೇ 34 ಗಂಭೀರ ಅಪರಾಧಗಳಲ್ಲಿ ಟ್ರಂಪ್​ ಅವರನ್ನು ದೋಷಿ ಎಂದು ಘೋಷಿಸಲಾಗಿತ್ತು. ಈ ಆರೋಪವನ್ನು ಅವರ ಮಾಜಿ ವಕೀಲ ಮೈಕೆಲ್ ಕೋಹೆನ್‌ಗೆ ಮರುಪಾವತಿಯನ್ನು ಮರೆಮಾಡುವ ಪ್ರಯತ್ನಗಳಿಗೆ ಸಂಬಂಧಿಸಿದ್ದಾಗಿತ್ತು. 2016 ರ ಚುನಾವಣಾ ಪ್ರಚಾರದ ಅಂತಿಮ ದಿನಗಳಲ್ಲಿ ಟ್ರಂಪ್ ಅವರೊಂದಿಗಿನ ಲೈಂಗಿಕ ಸಂಬಂಧದ ಬಗ್ಗೆ ಮೌನವಾಗಿರಲು ನೀಲಿ ಚಿತ್ರ ತಾರೆಗೆ ಹಣ ನೀಡಲಾಗಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!