2024ರ ನೊಬೆಲ್ ಪ್ರಶಸ್ತಿ ಘೋಷಣೆ: ದ.ಕೊರಿಯಾದ ಬರಹಗಾರ್ತಿಗೆ ಸಾಹಿತ್ಯ ಕ್ಷೇತ್ರದ ಪ್ರಶಸ್ತಿ
ನ್ಯೂಸ್ ಆ್ಯರೋ: 2024ರ ನೊಬೆಲ್ ಪ್ರಶಸ್ತಿಗಳ ಘೋಷಣೆ ಸೋಮವಾರದಿಂದ (ಅ.7) ಆರಂಭವಾಗಿದ್ದು, ಈಗಾಗಲೇ ವೈದ್ಯಕೀಯ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ. ಈ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿಯನ್ನು ಗುರುವಾರ (ಅ. 10) ನೀಡಲಾಗಿದೆ.
ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ಪ್ರಕಾರ, ಈ ವರ್ಷ “ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ದಕ್ಷಿಣ ಕೊರಿಯಾದ ಬರಹಗಾರ್ತಿ ಹಾನ್ ಕಾಂಗ್” ಅವರಿಗೆ ನೀಡಲಾಗಿದೆ. ಅವರ ಆಳವಾದ ಕಾವ್ಯಾತ್ಮಕ ಗದ್ಯಕ್ಕಾಗಿ ಅವರಿಗೆ ಈ ಗೌರವವನ್ನು ನೀಡಲಾಯಿತು. ಹಾನ್ ಕಾಂಗ್ ಅವರ ಗದ್ಯವು ಮಾನವ ಜೀವನದ ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದೆ. ಅವರ ಪುಸ್ತಕಗಳಲ್ಲಿ ದಿ ವೆಜಿಟೇರಿಯನ್, ದಿ ವೈಟ್ ಬುಕ್, ಹ್ಯೂಮನ್ ಆಕ್ಟ್ಸ್ ಮತ್ತು ಗ್ರೀಕ್ ಲೆಸನ್ಸ್ ಸೇರಿವೆ.
ಹಾನ್ ಕಾಂಗ್ 1970ರಲ್ಲಿ ದಕ್ಷಿಣ ಕೊರಿಯಾದ ಗ್ವಾಂಗ್ಜು ನಗರದಲ್ಲಿ ಜನಿಸಿದರು. ಆದರೆ 9ನೇ ವಯಸ್ಸಿನಲ್ಲಿ ತನ್ನ ಕುಟುಂಬದೊಂದಿಗೆ ಸಿಯೋಲ್‌ಗೆ ತೆರಳಿದರು. ಹಾನ್ ಕಾಂಗ್ ಸಾಹಿತ್ಯ ಕುಟುಂಬಕ್ಕೆ ಸೇರಿದವರು. ಅವರ ತಂದೆಯೂ ಹೆಸರಾಂತ ಕಾದಂಬರಿಕಾರರಾಗಿದ್ದಾರೆ.
ಈ ವರ್ಷ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ ನೀಡಲಾಯಿತು. ಭೌತಶಾಸ್ತ್ರ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಜಾನ್ ಹಾಪ್‌ಫೀಲ್ಡ್ ಮತ್ತು ಜೆಫ್ರಿ ಹಿಂಟನ್ ಅವರಿಗೆ ನೀಡಲಾಗಿದೆ. ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್ ಮೂವರಿಗೆ ನೀಡಲಾಯಿತು.
Leave a Comment