ಈ 5 ಪಾಸ್‌‌ವರ್ಡ್‌‌ಗಳನ್ನು‌ ನಿಮ್ಮ ಮೊಬೈಲ್‌ಗೆ ಹಾಕ್ಬೇಡಿ; ಪಕ್ಕಾ ನಿಮ್ಮ ಫೋನ್ ಹ್ಯಾಕ್‌ ಆಗುತ್ತೆ

Passwords
Spread the love

ನ್ಯೂಸ್ ಆ್ಯರೋ: ಇತ್ತೀಚೆಗೆ ಸೈಬರ್ ವಂಚನೆಗಳು ಮತ್ತು ಹ್ಯಾಕಿಂಗ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸ್ಟ್ರಾಂಗ್ ಪಾಸ್‌ವರ್ಡ್‌ಗಳನ್ನು ಇಟ್ಟುಕೊಳ್ಳಬೇಕು. ಇದನ್ನೇ ಟೆಕ್ ಕಂಪನಿಗಳು ಹಲವು ಬಾರಿ ಬಳಕೆದಾರರಿಗೂ ಎಚ್ಚರಿಕೆ ನೀಡಿದೆ. ಆದರೆ ಬಳಕೆದಾರರಿಗೆ ಮಾತ್ರ ಇನ್ನೂ ಈ ಬಗ್ಗೆ ಬಿಸಿ ಮುಟ್ಟಿಲ್ಲ. ಇದೀಗ ಸಮೀಕ್ಷೆಯೊಂದರಲ್ಲಿ ಶಾಕ್ ಆಗುವಂತಹ ವರದಿಯೊಂದು ಬಯಲಾಗಿದೆ.

ಹೌದು, ಸ್ಮಾರ್ಟ್‌ಫೋನ್, ಸಿಸ್ಟಮ್‌ ಅಂದಾಗ ಪಾಸ್‌‌ವರ್ಡ್‌‌ಗಳು ಇದ್ದೇ ಇದೆ. ಆದ್ರೆ ಇಂದಿಗೂ ಹೆಚ್ಚಿನವರು ಬಳಸೋ ಪಾಸ್‌ವರ್ಡ್‌‌ 123456 ಅಂತೆ. ಇತ್ತೀಚೆಗೆ ಕಾರ್ಯನಿರ್ವಹಿಸುತ್ತಿರುವ ಸಾಫ್ಟ್‌ವೇರ್ ಕಂಪನಿ ನಾರ್ಡ್‌ಪಾಸ್ ಕೂಡ ಇದೇ ಮಾತನ್ನು ಹೇಳಿದೆ. ಇಂತಹ ಪಾಸ್‌‌ವರ್ಡ್‌‌ಗಳನ್ನು ಹ್ಯಾಕ್‌‌ ಮಾಡಲು ಕೇವಲ ಒಂದು ಸೆಕೆಂಡ್‌ ಸಾಕು. ಇದೇ ಕಾರಣಕ್ಕೆ ದೇಶದಲ್ಲಿ ಸೈಬರ್‌ ವಂಚಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಇನ್ನೂ ಹೆಚ್ಚಿನ ಬಳಕೆದಾರರು 987654321, 123123, 0987, 654321 ಈ ರೀತಿಯ ಪಾಸ್‌‌ವರ್ಡ್‌‌ಗಳನ್ನು ಸೆಟ್‌ ಮಾಡಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ನಿಮ್ಮ ಮೊಬೈಲ್‌ಗೂ ಸ್ಟ್ರಾಂಗ್ ಪಾಸ್‌‌ವರ್ಡ್‌ ಸೆಟ್‌ ಮಾಡ್ಬೇಕಾ? ಹಾಗಿದ್ರೆ ಇಲ್ಲಿದೆ ನೋಡಿ ಟ್ರಿಕ್ಸ್‌. ಈ ಟ್ರಿಕ್ಸ್ ಯೂಸ್‌ ಮಾಡಿದ್ರೆ ಸೈಬರ್ ಕ್ರೈಮ್, ಹ್ಯಾಕ್‌ ಆಗುತ್ತೆ ಅನ್ನೋ ಭಯನೇ ಇರಲ್ಲ.

ಮುಖ್ಯವಾಗಿ ನೀವು ಈ ರೀತಿಯ ಸರಳ ಪಾಸ್‌ವರ್ಡ್‌ಗಳನ್ನು ಬಳಸುತ್ತಿದ್ದರೆ, ಈಗಲೇ ಅವುಗಳನ್ನು ಬದಲಾಯಿಸಿ. ಇಲ್ಲವಾದರೆ ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ ಅಂತಾರೇ ತಾಂತ್ರಿಕ ತಜ್ಞರು. ಇನ್ನು ಹ್ಯಾಕರ್ಸ್‌‌ಗಳು ಊಹೆಯೂ ಮಾಡದೇ ಇರದ ಪಾಸ್‌ವರ್ಡ್‌‌ಗಳನ್ನು ಸೆಟ್‌ ಮಾಡ್ಭೇಕು ಅಂತಾರೆ ತಜ್ಙರು.

ನಿಮ್ಮ ಎಲ್ಲಾ ಫೋನ್, ಪೇಮೆಂಟ್ ಆ್ಯಪ್‌ಗಳು, ಅಪ್ಲಿಕೇಶನ್‌ಗಳು, ಫೈಲ್‌ಗಳಿಗೆ ಒಂದೇ ಪಾಸ್‌ವರ್ಡ್ ಅನ್ನು ಯಾವತ್ತೂ ಬಳಸಬೇಡಿ. ಸ್ಟ್ರಾಂಗ್ ಪಾಸ್ ವರ್ಡ್ ಆಗಿದ್ದರೂ ಬೇರೆಯದನ್ನು ಬಳಸುವುದು ಉತ್ತಮ ಎನ್ನುತ್ತಾರೆ ಟೆಕ್ ತಜ್ಞರು. ಏಕೆಂದರೆ ಒಂದೇ ಪಾಸ್‌ವರ್ಡ್‌‌ನಿಂದ ನಿಮ್ಮೆಲ್ಲಾ ಡಾಕ್ಯುಮೆಂಟ್‌ಗಳು ಹ್ಯಾಕರ್ಸ್‌ ಕೈ ಸೇರಬಹುದು. ಹಾಗಾಗಿ ಇಂದೇ ಎಚ್ಚೆತ್ತುಕೊಳ್ಳಿ. ನಿಮ್ಮ ಪಾಸ್‌‌ವರ್ಡ್‌‌ಗಳನ್ನು ಯಾವತ್ತೂ ವಿಭಿನ್ನವಾಗಿ ಬಳಸಿ.

Leave a Comment

Leave a Reply

Your email address will not be published. Required fields are marked *

error: Content is protected !!