
ಇಂಟರ್ನೆಟ್ ಸೇವೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ ಜಿಯೋ – ಭಾರತಕ್ಕೆ ಇದೇ ಮೊದಲ ಬಾರಿಗೆ ಸ್ಪೇಸ್ ಫೈಬರ್ ಪರಿಚಯ
- ರಾಷ್ಟ್ರೀಯ ಸುದ್ದಿ
- November 7, 2023
- No Comment
- 108
ನ್ಯೂಸ್ ಆ್ಯರೋ : ಅಂತರ್ಜಾಲ ಎನ್ನುವುದು ಇವತ್ತು ವಿಶ್ವವನ್ನೇ ಒಂದು ಮಾಡಿದೆ. ನಗರದಿಂದ ಹಳ್ಳಿ ಹಳ್ಳಿಗಳನ್ನೂ ತಲುಪಿದೆ. ಅದರಲ್ಲೂ ಭಾರತದಲ್ಲಿ ಕೆಲವು ದಶಕಗಳ ಹಿಂದೆಯಷ್ಟೇ ಆರಂಭವಾದ ಅಂತರ್ಜಾಲದ ವ್ಯಾಪ್ತಿ ಹೆಚ್ಚು ವೇಗವಾಗಿ ದೇಶದ ಮೂಲೆಮೂಲೆಯನ್ನೂ ಇಂದು ತಲುಪುತ್ತಿದೆ. ಇದರಲ್ಲಿ ಹಲವಾರು ಟೆಲಿಕಾಂ ಕಂಪೆನಿಗಳು ಕೊಡುಗೆಗಳಿವೆ.
ಭಾರತದಲ್ಲಿ ಮೊದಲು ಸಾರ್ವಜನಿಕರಿಗಾಗಿ ಅಂತರ್ಜಾಲದ ವ್ಯವಸ್ಥೆಯನ್ನು ಪರಿಚಯಿಸಿದ್ದು 1995ರ ಆಗಸ್ಟ್ 15ರಂದು ವಿಎಸ್ ಎನ್ ಎಲ್ ಕಂಪೆನಿ. ನಡುವೆ ಹಲವು ಟೆಲಿಕಾಂ ಕಂಪೆನಿಗಳು ಬಂದರೂ ಭಾರತದ ಅಂತಾರ್ಜಾಲ ವ್ಯವಸ್ಥೆಗೆ ಹೊಸ ದಿಕ್ಕನ್ನು ತೋರಿದ್ದು ರಿಲಯನ್ಸ್ ಜಿಯೋ.
ಜಿಯೋ ಇದೀಗ ಅತ್ಯಂತ ವೇಗದ ಅಂತರ್ಜಾಲ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸ್ಪೇಸ್ ಫೈಬರ್ ಅನ್ನು ಪರಿಚಯಿಸಿದೆ. ಭಾರತದ ಮೊದಲ ಸ್ಯಾಟಲೈಟ್ ಆಧಾರಿತ ಗಿಗಾ ಫೈಬರ್ ಸೇವೆಯನ್ನು ಜಿಯೋ ಇತ್ತೀಚಿಗೆ ದೆಹಲಿಯಲ್ಲಿ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ – 2023ರ ಕಾರ್ಯಕ್ರಮದಲ್ಲಿ ಯಶಸ್ವಿಯಾಗಿ ಪರಿಚಯಿಸಿದೆ.
ಸ್ಯಾಟಲೈಟ್ ಆಧಾರಿತ ಅಂತರ್ಜಾಲವನ್ನು ಭಾರತದಲ್ಲಿ ಆರಂಭಿಸಲು ಜಿಯೋ ಸಂಸ್ಥೆ ಲಕ್ಸೆಂಬರ್ಗ್ ಮೂಲದ ಎಸ್ ಇಎಸ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇದು ಆಧುನಿಕ ತಂತ್ರಜ್ಞಾನ ಗಳನ್ನು ಬಳಸಿಕೊಂಡು ಬಾಹ್ಯಾಕಾಶದಿಂದ ಸೇವೆಗಳನ್ನು ಒದಗಿಸಬಲ್ಲ ವಿಶ್ವದ ಅಂತರ್ಜಾಲ ವ್ಯವಸ್ಥೆಯಾಗಿದೆ.
ಭಾರತದಲ್ಲಿ ಅತ್ಯಂತ ವೇಗವಾಗಿ ಅಂತರ್ಜಾಲ ಸಂಪರ್ಕವನ್ನು ಬೆಳೆಸುಲು ಶ್ರಮಿಸುತ್ತಿರುವ ರಿಲಯನ್ಸ್ ಜಿಯೋ, ಉದ್ಯಮ ಬಲವರ್ಧನೆ, ಶಿಕ್ಷಣ, ಆರೋಗ್ಯ, ಮನೋರಂಜನೆ, ಸರ್ಕಾರದ ಸೇವೆಗಳು ಗ್ರಾಮೀಣ ಪ್ರದೇಶದ ಜನರಿಗೂ ಸುಲಭ ಮತ್ತು ವೇಗವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಈಗಾಗಲೇ ದೇಶದ 45 ಕೋಟಿಗೂ ಹೆಚ್ಚು ಜನರನ್ನು ತಲುಪಿರುವ ಜಿಯೋ ಸೇವೆಗಳು ಕೈಗೆಟಕುವ ದರದಲ್ಲಿ ಲಭ್ಯವಾಗುತ್ತಿದೆ. ಇತ್ತೀಚೆಗಷ್ಟೇ 5G ಸೇವೆಯನ್ನು ಪರಿಚಯಿಸಿ ಜನರಿಗೆ ಮತ್ತಷ್ಟು ಹತ್ತಿರವಾಗಲು ಪ್ರಯತ್ನಿಸುತ್ತಿದೆ.
ಈಗಾಗಲೇ ಗುಜರಾತ್ , ಛತ್ತೀಸ್ ಗಢ, ಒಡಿಶಾ, ಅಸ್ಸಾಂನ ನಾಲ್ಕು ಸ್ಥಳಗಳು ಜಿಯೋ ಸ್ಪೇಸ್ ಫೈಬರ್ ಸಂಪರ್ಕವನ್ನು ಹೊಂದಿದ್ದು, ದೇಶದ ಹೆಚ್ಚಿನ ಗ್ರಾಮೀಣ ಭಾಗಗಳಿಗೆ ಡಿಜಿಟಲ್ ವ್ಯವಸ್ಥೆಯನ್ನು ತಲುಪಿಸುವ ಉದ್ದೇಶ ಹೊಂದಿದೆ ಎಂದು ಎಸ್ ಇ ಎಸ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಾನ್-ಪಾಲ್ ಹೆಮಿಂಗ್ ವೇ ತಿಳಿಸಿದ್ದಾರೆ.