
ಅಮೆರಿಕದ ಒತ್ತಡಕ್ಕೆ ಮಣಿಯಿತಾ ಇಸ್ರೇಲ್? – ಯುದ್ಧದ ಅಲ್ಪ ವಿರಾಮಕ್ಕೆ ಒಪ್ಪಿಗೆ ನೀಡಿದ್ಯಾಕೆ ಇಸ್ರೇಲ್?
- ಅಂತಾರಾಷ್ಟ್ರೀಯ ಸುದ್ದಿ
- November 7, 2023
- No Comment
- 68
ನ್ಯೂಸ್ ಆ್ಯರೋ : ಕಳೆದ ಹಲವು ದಿನಗಳಿಂದ ಇಸ್ರೇಲಿನಲ್ಲಿ ಎಲ್ಲಿ ನೋಡಿದರು ಮದ್ದು ಗುಂಡುಗಳ ಮೊರೆತ, ರಕ್ತ ಸಿಕ್ತ ದೇಹಗಳು, ನಾಮವಶೇಷಗೊಂಡ ಕಟ್ಟಡಗಳೇ ಕಾಣುತ್ತಿದ್ದವು. ಆದರೆ ಇದೀಗ ಅಮೆರಿಕಾದ ಆರ್ಭಟಕ್ಕೆ ಇಸ್ರೇಲ್ ಬಾಲ ಮುದುಡಿಕೊಂಡಿದೆ. ಹೌದು, ಅಮೆರಿಕಾರ ಒತ್ತಡಕ್ಕೆ ಮಣಿದು ಹಮಾಸ್ ಮೇಲಿನ ದಾಳಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನತನ್ಯಾಹು ಅಲ್ಪ ವಿರಾಮ ಘೋಷಿಸಿದ್ದಾರೆ. ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್ ಕದನ ವಿರಾಮ ಘೋಷಿಸುವಂತೆ ಇಸ್ರೇಲನ್ನು ಒತ್ತಾಯಿಸಿದ್ದರು. ಸತತ ಇತ್ತಡಕ್ಕೆ ಮಣಿದಿರುವ ಇಸ್ರೇಲ್ ಇದೀಗ ಯುದ್ಧಕ್ಕೆ ಅಲ್ಪ ವಿರಾಮ ಘೋಷಿಸಿದೆ.
ಮಸಣವಾಯ್ತು ಗಾಜಾ
ಸದ್ಯ, ಗಾಜಾ ಅಕ್ಷರಶಃ ಮಸಣವಾಗಿದೆ ಸಾವಿನ ಸಂಖ್ಯೆ ಬರೋಬ್ಬರಿ 10,000ಕ್ಕೆ ಏರಿಕೆಯಾಗಿದೆ. ಪರಿಸ್ಥಿತಿ ಹೀಗಿದ್ದರೂ ಗಾಜಾದ ಮೇಲಿನ ಹಮಾಸ್ ನಿಯಂತ್ರಣವನ್ನು ಕೊನೆಗೊಳಿಸುವ ಇಸ್ರೇಲ್ ಹಾಗೂ ನೆತನ್ಯಾಹು ಅವರು ಗುರಿ ಮುಂದುವರೆಯುವುದು ಶತಸಿದ್ಧ ಎಂದು ಪ್ಯಾಲೆಸ್ತೀನ್ ಆರೋಪಿಸಿದೆ.ಈ ಬಗ್ಗೆ ಮಾತನಾಡಿರುವ ನೆತನ್ಯಾಹು, ‘ನಮ್ಮ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸದೆ ಗಾಜಾದಲ್ಲಿ ಯಾವುದೇ ಕದನ ವಿರಾಮ, ಸಾಮಾನ್ಯ ಕದನ ವಿರಾಮಕ್ಕೆ ನಾವು ಒಪ್ಪುವುದಿಲ್ಲ’ ಎಂದಿದ್ದಾರೆ.
ಮಾತು ಮುಂದುವರೆಸಿದ ನೆತನ್ಯಾಹು, ‘ತಂತ್ರದ ಸಣ್ಣ ವಿರಾಮಗಳವರೆಗೆ ಇಲ್ಲಿ ಒಂದು ಗಂಟೆ, ಅಲ್ಲಿ ಒಂದು ಗಂಟೆ ಯುದ್ಧ ನಡೆಯುತ್ತಿದೆ. ಸರಕುಗಳು, ಮಾನವೀಯ ಸರಕುಗಳು ಬರಲು ಅಥವಾ ನಮ್ಮ ಒತ್ತೆಯಾಳುಗಳು, ವೈಯಕ್ತಿಕ ಒತ್ತೆಯಾಳುಗಳನ್ನು ಬಿಡಲು ಅನುವು ಮಾಡಿಕೊಡಲು ನಾವು ಸಂದರ್ಭವನ್ನು ನೋಡುತ್ತೇವೆ. ಆದರೆ ಈ ಸಾಮಾನ್ಯ ಕದನ ವಿರಾಮ ಶಾಶ್ವತ ಎಂದು ಭಾವಿಸಬೇಡಿ’ ಎಂದು ಅವರು ಎಚ್ಚರಿಸಿದ್ದಾರೆ.