
ಮೋಸ್ಟ್ ವಾಂಟೆಡ್ ಉಗ್ರನಿಗೆ ಗುಂಡಿಕ್ಕಿ ಹತ್ಯೆ – ರಾಜೌರಿ ಧಂಗ್ರಿ ದಾಳಿಯ ವೇಳೆ ಏಳು ಮಂದಿ ಸಾವಿಗೆ ಕಾರಣವಾಗಿದ್ದ ಉಗ್ರ ಮಟಾಷ್
- ರಾಷ್ಟ್ರೀಯ ಸುದ್ದಿ
- September 9, 2023
- No Comment
- 81
ನ್ಯೂಸ್ ಆ್ಯರೋ : ಮೋಸ್ಟ್ ವಾಂಟೆಡ್ ಭಯೋತ್ಪಾದಕ ರಿಯಾಜ್ ಅಹ್ಮದ್ ಅಲಿಯಾಸ್ ಅಬು ಖಾಸಿಮ್ ನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಸೀದಿಯೊಂದರಲ್ಲಿದ್ದ ರಿಯಾಜ್ ನನ್ನು ಅಪರಿಚಿತ ಬಂದೂಕುಧಾರಿಗಳು ಶುಕ್ರವಾರ ಹತ್ಯೆ ಮಾಡಿದ್ದಾರೆ. ಜಮ್ಮು ಪ್ರದೇಶದವನಾಗಿದ್ದ ರಿಯಾಜ್ ನನ್ನು 1999ರಲ್ಲಿ ಗಡಿಪಾರು ಮಾಡಲಾಗಿತ್ತು.
ಕಳೆದ ಜನವರಿ 1 ರಂದು ನಡೆದ ಧಂಗ್ರಿ ಭಯೋತ್ಪಾದಕ ದಾಳಿಯ ಹಿಂದಿನ ಪ್ರಮುಖ ಸಂಚುಕೋರರಲ್ಲಿ ರಿಯಾಜ್ ಅಹ್ಮದ್ ಕೂಡ ಒಬ್ಬ. ರಾಜೌರಿ ಜಿಲ್ಲೆಯ ಧಂಗ್ರಿ ಗ್ರಾಮದಲ್ಲಿ ಭಯೋತ್ಪಾದಕರು ನಡೆಸಿದ ಮನಬಂದಂತೆ ಗುಂಡಿನ ದಾಳಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದರು. ಜಮ್ಮು ಪ್ರದೇಶದ ಮೂಲದ ಅಹ್ಮದ್ 1999ರಲ್ಲಿ ತಲೆಮರೆಸಿಕೊಂಡಿದ್ದ.
ಲಷ್ಕರ್-ಎ-ತೊಯ್ಬಾದ ಸಂಸ್ಥಾಪಕ ಮತ್ತು ಜಮಾತ್-ಉದ್-ದವಾ (JuD) ಮುಖ್ಯಸ್ಥ ಹಫೀಜ್ ಸಯೀದ್, ಹತ್ಯೆಗೀಡಾದ ಭಯೋತ್ಪಾದಕ ಅಬು ಖಾಸಿಂನನ್ನು ಅತ್ಯಂತ ನಂಬಲರ್ಹ ಎಂದು ಪರಿಗಣಿಸಿದ್ದ ಎನ್ನಲಾಗಿದೆ.
ಈ ಇಬ್ಬರ ನಿಕಟ ಸಂಬಂಧವು ಪಾಕಿಸ್ತಾನದೊಳಗೆ ಭಯೋತ್ಪಾದಕರ ನೇಮಕಾತಿಯನ್ನು ವೇಗಗೊಳಿಸಿದೆ. ಹಫೀಜ್ ಸಯೀದ್ ಆಗಾಗ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿ ಭಯೋತ್ಪಾದಕ ದಾಳಿಯ ಯೋಜನೆಯನ್ನು ಅಬು ಖಾಸಿಮ್‌ಗೆ ಹಸ್ತಾಂತರಿಸುತ್ತಿದ್ದ. ಅಬು ಖಾಸಿಮ್ ಪಾಕಿಸ್ತಾನದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ವಾಸಿಸುತ್ತಿದ್ದ, ಆದ್ದರಿಂದ ಅವನನ್ನು ಯಾರೂ ಗುರುತಿಸಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ, ದಾಳಿಕೋರರು ಹಲವಾರು ದಿನಗಳವರೆಗೆ ಅಬು ಖಾಸಿಮ್ ಅವರನ್ನು ಹಿಂಬಾಲಿಸಿದ್ದರು ಎನ್ನಲಾಗಿದೆ.