68ನೇ ವಯಸ್ಸಿನಲ್ಲಿ ಮೂರನೇ ಮದುವೆಯಾದ ಖ್ಯಾತ ವಕೀಲ ಹರೀಶ್ ಸಾಳ್ವೆ – ನೀತಾ ಅಂಬಾನಿ, ಗೋಪಿ ಹಿಂದುಜಾ, ಲಲಿತ್ ಮೋದಿ ಭಾಗಿ

68ನೇ ವಯಸ್ಸಿನಲ್ಲಿ ಮೂರನೇ ಮದುವೆಯಾದ ಖ್ಯಾತ ವಕೀಲ ಹರೀಶ್ ಸಾಳ್ವೆ – ನೀತಾ ಅಂಬಾನಿ, ಗೋಪಿ ಹಿಂದುಜಾ, ಲಲಿತ್ ಮೋದಿ ಭಾಗಿ

ನ್ಯೂಸ್ ಆ್ಯರೋ : ಭಾರತದ ಪ್ರಖ್ಯಾತ ವಕೀಲ, ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಅವರು ತಮ್ಮ 68ನೇ ವಯಸ್ಸಿನಲ್ಲಿ ಲಂಡನ್‌ನ ಟ್ರಿನಾ ಎಂಬಾಕೆಯ ಜತೆ 3ನೇ ಮದುವೆಯಾಗಿದ್ದಾರೆ.

ಸಾಳ್ವೆ ಹಾಗೂ ಟ್ರಿನಾ ಅವರ ಮದುವೆ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಮದುವೆ ಸಮಾರಂಭದಲ್ಲಿ ಉದ್ಯಮಿ ನೀತಾ ಅಂಬಾನಿ, ಗೋಪಿ ಹಿಂದುಜಾ, ಲಲಿತ್ ಮೋದಿ, ಉಜ್ವಲ್ ರಾವತ್ ಸೇರಿ ಹಲವರು ಭಾಗಿಯಾಗಿರುವ ಫೋಟೋಗಳಿವೆ.

ಮೂಲಗಳ ಪ್ರಕಾರ, ಸಾಳ್ವೆ ಅವರು 1982ರಲ್ಲಿ ಮೀನಾಕ್ಷಿ ಎಂಬವರನ್ನು ಮದುವೆಯಾಗಿ 2020ರಲ್ಲಿ ವಿಚ್ಛೇದನ ನೀಡಿದ್ದರು. ಇವರಿಗೆ ಸಾಕ್ಷಿ ಹಾಗೂ ಸಾನಿಯಾ ಎಂಬ ಇಬ್ಬರು ಮಕ್ಕಳಿದ್ದಾರೆ. 2020ರಲ್ಲಿ ಕಾರೋಲಿನ್ ಬ್ರೊಸಾರ್ಡ್ ಎಂಬಾಕೆಯನ್ನು ವರಿಸಿದ್ದರು. ಇದೀಗ ಟ್ರಿನಾ ಎಂಬಾಕೆಯನ್ನು ವರಿಸುವ ಮೂಲಕ ಮೂರನೇ ಬಾರಿಗೆ ಮದುವೆಯಾಗಿದ್ದಾರೆ.

ನವೆಂಬರ್ 1999 ರಿಂದ ನವೆಂಬರ್ 2002 ರವರೆಗೆ ಭಾರತದ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿರುವ ಇವರು ಕುಲಭೂಷಣ್ ಜಾಧವ್ ಪ್ರಕರಣ ಸೇರಿ ಹಲವು ಉನ್ನತ ಮಟ್ಟದ ಪ್ರಕರಣಗಳಲ್ಲಿ ವಕೀಲರಾಗಿದ್ದರು.

ಜಾಧವ್ ಪ್ರಕರಣದಲ್ಲಿ ₹1 ಶುಲ್ಕ ಹಣ ಪಡೆದು ಸುದ್ದಿಯಾಗಿದ್ದರು. 2015ರಲ್ಲಿ ಹರಿಶ್ ಸಾಳ್ವೆ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *