
ಗೋ ಮಾಂಸ ತಿಂದು ವಿವಾದಕ್ಕೆ ಕಾರಣರಾದ ಟೀಮ್ ಇಂಡಿಯಾದ ಆಟಗಾರರು – ಯಾರೆಲ್ಲ ಬೀಫ್ ತಿಂದವರು ಗೊತ್ತೆ?
- ಕ್ರೀಡಾ ಸುದ್ದಿ
- September 4, 2023
- No Comment
- 165
ನ್ಯೂಸ್ ಆ್ಯರೋ : ಕ್ರಿಕೆಟ್ ಜಗತ್ತಿನಲ್ಲಿ ಟೀಮ್ ಇಂಡಿಯಾ ಅದ್ವಿತೀಯ ಸಾಧನೆ ಮಾಡಿ ಮೆರೆಯುತ್ತಿದೆ. ಬಹುತೇಕ ಆಟಗಾರರು ತಮ್ಮ ಪ್ರತಿಭೆ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆಟದ ಜೊತೆಗೆ ಜೀವನಶೈಲಿಯೂ ಆಗಾಗ ಚರ್ಚೆಗೆ ಗ್ರಾಸವಾಗುತ್ತದೆ. ಅಚ್ಚರಿ ಎಂದರೆ ಟೀಮ್ ಇಂಡಿಯಾದ ಮೂವರು ಹಿಂದೂ ಧರ್ಮದ ಆಟಗಾರರು ಗೋಮಾಂಸ ತಿಂದಿದ್ದಾರೆ ಎನ್ನುವ ಸಂಗತಿ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಲವರು ಇದಕ್ಕೆ ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಯಾರು ಆ ಮೂವರು ಆಟಗಾರರು ಎನ್ನುವುದರ ಮಾಹಿತಿ ಇಲ್ಲಿದೆ.
ರೋಹಿತ್ ಶರ್ಮಾ

ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ ರೋಹಿತ್ ಶರ್ಮಾ. ತಮ್ಮ ಆಟದ ಶೈಲಿ, ನಾಯಕತ್ವದಿಂದ ಗಮನ ಸೆಳೆಯುವ ಅವರು 2021ರಲ್ಲಿ ಗೋಮಾಂಸ ತಿಂದಿದ್ದಾರೆ ಎನ್ನುವ ವಿಚಾರವೇ ತೀವ್ರ ಚರ್ಚೆ ಹುಟ್ಟು ಹಾಕಿತ್ತು. ಆದರೆ ಈ ಬಗ್ಗೆ ಹಿಟ್ ಮ್ಯಾನ್ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.
ನವದೀಪ್ ಸೈನಿ

ವೇಗದ ಬೌಲರ್ ನವದೀಪ್ ಸೈನಿ ಕೂಡ ಇದೇ ಕಾರಣಕ್ಕೆ ನೆಟ್ಟಿಗರಿಂದ ಟ್ರೋಲಿಗೆ ಗುರಿಯಾಗಿದ್ದಾರೆ. ಅವರು ಕೂಡ ಗೋ ಮಾಂಸ ಸೇವಿಸಿದ್ದರು ಎನ್ನುವ ವಿಚಾರ ಬಹಿರಂಗವಾಗಿದ್ದು, ನೆಟ್ಟಿಗರು ಗರಂ ಆಗಿದ್ದರು. ರೋಹಿತ್ ಶರ್ಮಾ ಜೊತೆಗೆ ಅಂದು ಸೈನಿ ಇದ್ದರು ಎನ್ನಲಾಗಿದೆ.
ಪೃಥ್ವಿ ಶಾ

ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರನೀತ. 2021ರಲ್ಲಿ ರೋಹಿತ್ ಶರ್ಮಾ, ನವದೀಪ್ ಸೈನಿ ಜೊತೆಗೆ ಪೃಥ್ವಿ ಶಾ ಕೂಡ ಬೀಫ್ ತಿಂದಿದ್ದರು ಎನ್ನುವ ಸುದ್ದಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.
ಗೊತ್ತಾಗಿದ್ದು ಹೇಗೆ?
ಈ ಮೂವರು ಆಟಗಾರರು ಆಹಾರ ಸೇವಿಸಿದ ಹೋಟೆಲ್ ಬಿಲ್ ಬಹಿರಂಗವಾಗುವುದರೊಂದಿಗೆ ಈ ವಿಷಯ ಹೊರ ಜಗತ್ತಿಗೆ ತಿಳಿಯಿತು. ಬಿಲ್ ನಲ್ಲಿ ಬೀಫ್ ಎಂದು ಉಲ್ಲೇಖವಾಗಿದ್ದು ಈ ಫೋಟೋ ವೈರಲ್ ಆಗಿದೆ. ‘ನೀವೇ ಹೀಗೆ ಮಾಡಿದರೆ ಇತರರಿಗೆ ಹೇಗೆ ಮಾದರಿಯಾಗುತ್ತೀರಿ?’ ಎನ್ನುವುದು ನೆಟ್ಟಿಗರ ಪ್ರಶ್ನೆ.