ದೇಶದ ಕೃಷಿಕರಿಗೆ ಶಾಕಿಂಗ್ ನ್ಯೂಸ್!! – ರಸಗೊಬ್ಬರ ಮೇಲಿನ ರಿಯಾಯಿತಿ ರದ್ದು ಪಡಿಸಿದ ರಷ್ಯಾ : ಭಾರತದಲ್ಲಿ ದರ ಏರಿಕೆ ಆತಂಕ

ದೇಶದ ಕೃಷಿಕರಿಗೆ ಶಾಕಿಂಗ್ ನ್ಯೂಸ್!! – ರಸಗೊಬ್ಬರ ಮೇಲಿನ ರಿಯಾಯಿತಿ ರದ್ದು ಪಡಿಸಿದ ರಷ್ಯಾ : ಭಾರತದಲ್ಲಿ ದರ ಏರಿಕೆ ಆತಂಕ

ನ್ಯೂಸ್ ಆ್ಯರೋ‌ : ಭಾರತದಲ್ಲಿ ರಸಗೊಬ್ಬರದ ದರ ಏರಿಕೆಯಾಗಲಿದೆಯೇ? ಹೀಗೊಂದು ಆತಂಕ ರೈತರಲ್ಲಿ ಕಾಡುತ್ತಿದೆ. ಯಾಕೆಂದರೆ ರಷ್ಯಾದ ರಸಗೊಬ್ಬರ ಕಂಪೆನಿಗಳು ಇದುವರೆಗೆ ಭಾರತಕ್ಕೆ ನಿಡುತ್ತಿದ್ದ ರಿಯಾಯಿತಿಯನ್ನು ರದ್ದುಪಡಿಸಿವೆ. ಇದು ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಬೇಡಿಕೆ ಹೆಚ್ಚಳ

ಜಾಗತಿಕ ಮಾರುಕಟ್ಟೆಯಲ್ಲಿ ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ರಷ್ಯಾದ ಕಂಪೆನಿಗಳು ಡೈ ಅಮೋನಿಯಂ ಪಾಸ್ಪೇಟ್ (ಡಿಎಪಿ) ಸೇರಿ ವಿವಿಧ ರಸಗೊಬ್ಬರಗಳಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಹಿಂಪಡೆದಿವೆ. ಇದರಿಂದ ಭಾರತಕ್ಕೆ ಆಮದು ವೆಚ್ಚ ಅಧಿಕವಾಗಲಿದೆ.

ಸದ್ಯ ಭಾರತದಲ್ಲಿ ಯೂರಿಯಾ ಪ್ರತಿ ಚೀಲಕ್ಕೆ 266 ರೂ., ಡಿಎಪಿ 1,350 ರೂ. ಮತ್ತು ಪೊಟ್ಯಾಶಿಯಂ 1,700 ರೂ. ಸರಕಾರಿ ಸಬ್ಸಿಡಿ ಸಹಿತ ಮಾರಾಟವಾಗುತ್ತಿದೆ. 2022-23ರ ಹಣಕಾಸು ವರ್ಷದಲ್ಲಿ ಭಾರತ ರಷ್ಯಾದಿಂದ ಆಮದು ಮಾಡಿಕೊಂಡ ರಸಗೊಬ್ಬರ ಪ್ರಮಾಣದಲ್ಲಿ ಶೇ. 246ರಷ್ಟು ಹೆಚ್ಚಳವಾಗಿತ್ತು.

ರಷ್ಯಾದ ಕಂಪೆನಿಗಳು ಡಿಎಪಿ, ಯೂರಿಯಾ ಮತ್ತು ಎನ್‍ಪಿಕೆ ಗೊಬ್ಬರಗಳಿಗೆ ಭಾರೀ ರಿಯಾಯಿತಿ ಘೋಷಿಸಿ ಭಾರತಕ್ಕೆ ಮಾರಾಟ ಮಾಡುತ್ತಿದ್ದವು. ಆ ಮೂಲಕ ಚೀನಾ, ಈಜಿಪ್ಟ್, ಜೋರ್ಡಾನ್ ಮತ್ತು ಯುಎಇ ಗೊಬ್ಬರ ಕಂಪೆನಿಗಳನ್ನು ಮೀರಿ ರಷ್ಯಾ ಪಾರಮ್ಯ ಮೆರೆದುಕೊಂಡಿತ್ತು.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *