
ಜನವರಿ 22ರಂದು ಹಿಂದೂಗಳ ಕನಸಿನ ರಾಮ ಮಂದಿರ ಲೋಕಾರ್ಪಣೆ – ಪ್ರಧಾನಿ ಮೋದಿಯಿಂದ ಉದ್ಘಾಟನೆ
- ರಾಷ್ಟ್ರೀಯ ಸುದ್ದಿ
- September 9, 2023
- No Comment
- 41
ನ್ಯೂಸ್ ಆ್ಯರೋ : ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆ ಮತ್ತು ಗರ್ಭಗುಡಿಯಲ್ಲಿ ರಾಮ್ ಲಲ್ಲಾ ನ ಮೂರ್ತಿ ಪ್ರತಿಷ್ಠಾಪನೆ 2024ರ ಜನವರಿ 22ರಂದು ನಡೆಯಲಿದೆ.
ಅಯೋಧ್ಯೆಯಲ್ಲಿ ಭಗವಾನ್ ರಾಮನ ಪ್ರಾಣಪ್ರತಿಷ್ಠೆ ಮಹೋತ್ಸವಕ್ಕೆ ಸಂಬಂಧಿಸಿ ನಡೆಯುತ್ತಿರುವ ಮ್ಯಾರಥಾನ್ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ರಾಮನ ಪ್ರಾಣ ಪ್ರತಿಷ್ಠೆ ಸೇರಿದಂತೆ ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಪ್ರಾಣ ಪ್ರತಿಷ್ಠೆ ಮಹೋತ್ಸವ ನಿರ್ವಹಣಾ ಸಮಿತಿ ಉಸ್ತುವಾರಿಯನ್ನು ಆರ್ ಎಸ್ ಎಸ್ ನಾಯಕ ಭಯ್ಯಾಜಿ ಜೋಶಿ ವಹಿಸಲಿದ್ದಾರೆ.
ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ದೇವಾಲಯದ ಮೊದಲ ಮಹಡಿ ಬಹುತೇಕ ಸಿದ್ಧವಾಗಿದೆ. ದೇವಾಲಯ ಉದ್ಘಾಟನೆಯ ಅನಂತರ ಎಲ್ಲ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಶಾಶ್ವತವಾಗಿ ತೆರೆಯಲಾಗುತ್ತದೆ. ದೇವಾಲಯದಲ್ಲಿ 42 ಬಾಗಿಲು ಸ್ಥಾಪಿಸಲಾಗುವುದು ಎಂದು ಮುಖ್ಯ ಅರ್ಚಕ ಸತೇಂದ್ರ ದಾಸ್ ತಿಳಿಸಿದ್ದಾರೆ.