ಭೂಮಿ ತಿರುಗುವ ವೇಗವನ್ನೇ ಕಡಿಮೆ ಮಾಡಿದೆ ಈ ಅಣೆಕಟ್ಟು; ನಾಸಾ ನೀಡಿದ ಶಾಕಿಂಗ್ ಮಾಹಿತಿ
ನ್ಯೂಸ್ ಆ್ಯರೋ: ಚೀನಾದ ತ್ರಿ ಗೋರ್ಜಸ್ ಅಣೆಕಟ್ಟನ್ನು ಸುಮಾರು 40,000 ಕಾರ್ಮಿಕರು ನಿರ್ಮಿಸಿದ್ದಾರೆ. ಈ ಬೃಹತ್ ಯೋಜನೆಯ ಕಾಮಗಾರಿಯನ್ನು 1994ರಲ್ಲಿ ಆರಂಭಿಸಲಾಗಿತ್ತು. ವಿಶ್ವದ ಅತಿದೊಡ್ಡ ಅಣೆಕಟ್ಟನ್ನು ಚೀನಾ 2011 ರಲ್ಲಿ ಸುಮಾರು 31 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಿದೆ.
2005 ರಲ್ಲಿ, ಅಮೇರಿಕನ್ ಸಂಶೋಧನಾ ಸಂಸ್ಥೆ NASA ತ್ರಿ ಗೋರ್ಜಸ್ ಅಣೆಕಟ್ಟಿನ ಪ್ರಚಂಡ ನೀರಿನ ಒತ್ತಡದಿಂದಾಗಿ ಪ್ರಪಂಚವು ಮೊದಲಿಗಿಂತ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳಿತು. ಇದಲ್ಲದೆ, ಅಣೆಕಟ್ಟಿನಲ್ಲಿನ ಅಗಾಧವಾದ ನೀರಿನ ಒತ್ತಡವು ಭೂಮಿಯ ಚಲನೆಯ ವೇಗವನ್ನು ಬದಲಾಯಿಸಿದೆ. ಇದರಿಂದಾಗಿ ದಿನದ ಅವಧಿಯೂ ಹೆಚ್ಚಿದೆ ಎಂದು ವರದಿ ಮಾಡಿದೆ.
ಈ ಅಣೆಕಟ್ಟನ್ನು ಚೀನಾದ ಆರ್ಥಿಕ ಅಭಿವೃದ್ಧಿಯ ಮಾನದಂಡಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಅಣೆಕಟ್ಟಿನ ನಿರ್ಮಾಣವು ಅಂತಾರಾಷ್ಟ್ರೀಯ ರಾಜಕೀಯ ಮತ್ತು ವಿಶ್ವ ಆರ್ಥಿಕತೆಯ ಮೇಲೆ ಪ್ರಭಾವ ಬೀರಲು ಮತ್ತು ಮುನ್ನಡೆಸಲು ಚೀನಾ ಕೈಗೊಂಡ ಹಲವಾರು ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ತ್ರಿ ಗೋರ್ಜಸ್ ಅಣೆಕಟ್ಟು ಭೂಮಿಯ ಹರಿವು ಮತ್ತು ಆಕಾರವನ್ನು ಬದಲಾಯಿಸಿದೆ ಎಂದು ಹೇಳಲಾಗುತ್ತದೆ.
ಇದನ್ನು ಏಷ್ಯಾದ ಅತಿದೊಡ್ಡ ನದಿ ಎನ್ನಲಾಗಿದೆ. ಚೀನಾದ ಪಶ್ಚಿಮ ಭಾಗದಲ್ಲಿ ಪರ್ವತಗಳಿಂದ ಆವೃತವಾಗಿರುವ ಈ ನದಿಯು ಬಹುತೇಕ ಚೀನಾದಲ್ಲಿಯೇ ಹರಿದು ಅಂತಿಮವಾಗಿ ದಕ್ಷಿಣ ಚೀನಾ ಸಮುದ್ರಕ್ಕೆ ಸೇರುತ್ತದೆ. 1911 ರಲ್ಲಿ ಭಾರೀ ಮಳೆಯಿಂದಾಗಿ ಯಾಂಗ್ಟ್ಜಿ ನದಿ ನೀರಿನ ಮಟ್ಟ ಏರಿಕೆಯಾಗಿ ವಿನಾಶ ಸಂಭವಿಸಿತು. ಈ ದುರಂತದಲ್ಲಿ ಕನಿಷ್ಠ 200,000 ಜನರು ಮರಣ ಹೊಂದಿದ್ದರು. ಮಾತ್ರವಲ್ಲ ಲಕ್ಷಾಂತರ ಜನರು ಮನೆ ಮಠ ಕಳೆದುಕೊಂಡಿದ್ದರು.
1931 ರಲ್ಲಿ, ಚೀನಾದಲ್ಲಿ ಮತ್ತೊಂದು ವಿನಾಶಕಾರಿ ಪ್ರವಾಹ ಸಂಭವಿಸಿತು. ಈ ಪ್ರವಾಹದ ಪರಿಣಾಮಗಳು ಇನ್ನೂ ಕೆಟ್ಟದಾಗಿತ್ತು. ಈ ಪ್ರವಾಹದಲ್ಲಿ ಸುಮಾರು 3 ಮಿಲಿಯನ್ ಜನರು ನಿಧನ ಹೊಂದುತ್ತಾರೆ. ಇದಾದ ಬಳಿಕ ಚೀನಾ ಸರ್ಕಾರವು ದೇಶವನ್ನು ಮತ್ತು ಅದರ ಜನರನ್ನು ಪ್ರವಾಹದಿಂದ ರಕ್ಷಿಸಲು ಈ ದುಬಾರಿ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿತು.
ಈ ಅಣೆಕಟ್ಟು ನಿರ್ಮಾಣಕ್ಕೆ 2 ಕೋಟಿ 80 ಲಕ್ಷ ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಅನ್ನು ಬಳಸಲಾಗಿದೆ. ಸ್ವಿಡ್ಜರ್ಲೆಂಡ್‌ನಂತಹ ದೇಶದಲ್ಲಿ ಒಮ್ಮೆ ಇಷ್ಟು ಕಾಂಕ್ರೀಟ್ ಸುರಿದರೆ ಇಡೀ ಸ್ವಿಡ್ಜರ್ಲೆಂಡ್ ಎರಡು ಅಡಿ ಕಾಂಕ್ರೀಟ್‌ನಡಿಯಲ್ಲಿ ಮುಳುಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಈ ಅಣೆಕಟ್ಟಿನಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹವಾಗಿರುವ ಕಾರಣ ಭೂಮಿ ತಿರುಗವ ವೇಗ ನಿಧಾನವಾಗಿದೆ. 0.06 ಮೈಕ್ರೋಸೆಕೆಂಡ್‌ಗಳು ಭೂಮಿ ತಿರುಗವ ವೇಗ ಕಡಿಮೆಯಾಗಿದೆ. ಜಾಗತಿಕವಾಗಿ ದಿನದ ಸಮಯದಲ್ಲಿ 0.06 ಮೈಕ್ರೋಸೆಕೆಂಡ್‌ಗಳಷ್ಟು ಹೆಚ್ಚಾಗಿದೆ.
ಪರಿಣಾಮವಾಗಿ, ಚೀನಾ ನೈಸರ್ಗಿಕ ವಿಪತ್ತು ಪ್ರವಾಹವನ್ನು ನಿಭಾಯಿಸಬಲ್ಲದು. ಅದೇ ಸಮಯದಲ್ಲಿ, ಈ ಅಣೆಕಟ್ಟಿನ ಮೂಲಕ ಸಾಕಷ್ಟು ವಿದ್ಯುತ್ ಉತ್ಪಾದಿಸುತ್ತಿದೆ. ಬರವನ್ನು ಎದುರಿಸಲು ಅಗತ್ಯವಿದ್ದಾಗ ಚೀನಾ ಈ ಅಣೆಕಟ್ಟಿನ ಮೂರು ಗೇಟ್‌ಗಳನ್ನು ತೆರೆಯುತ್ತದೆ.
Leave a Comment