“ಭಾರತವನ್ನು ನಂಬರ್ 1 ಮಾಡುವುದರೆಡೆಗೆ ಕೆಲಸ ಮಾಡಬೇಕು”; ವಾರಕ್ಕೆ 70 ಗಂಟೆ ದುಡಿಮೆ ಬಗ್ಗೆ ಮತ್ತೆ ನಾರಾಯಣ ಮೂರ್ತಿ ಹೇಳಿಕೆ
ನ್ಯೂಸ್ ಆ್ಯರೋ: ಇನ್ಫೋಸಿಸ್ ನ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವ ಬಗ್ಗೆ ಮತ್ತೆ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ಕೋಲ್ಕತಾಗೆ ಭೇಟಿ ನೀಡಿದ ಅವರು ಕೋಲ್ಕತ್ತಾ ನಗರ ದೇಶದಲ್ಲೇ ಅತ್ಯಂತ ಸುಸಂಸ್ಕೃತ ನಗರ ಎಂದು ಹೇಳಿದ್ದಾರೆ. ಇದೇ ವೇಳೆ ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡುವ ಮಾಡುವ ಬಗ್ಗೆ ಮತ್ತೆ ಹೇಳಿಕೆ ನೀಡಿರುವ ನಾರಾಯಣ ಮೂರ್ತಿ, ಯುವಕರು ಶ್ರಮಿಸಬೇಕು, ಭಾರತವನ್ನು ನಂಬರ್ 1 ಮಾಡುವುದರೆಡೆಗೆ ಕೆಲಸ ಮಾಡಬೇಕು ಎಂಬುದನ್ನು ಅರಿತುಕೊಳ್ಳಬೇಕೆಂದು ಹೇಳಿದ್ದಾರೆ.
“ಇನ್ಫೋಸಿಸ್‌ನಲ್ಲಿ, ನಾವು ಅತ್ಯುತ್ತಮವಾದವುಗಳಿಗೆ ಹೋಗುತ್ತೇವೆ ಮತ್ತು ಅತ್ಯುತ್ತಮ ಜಾಗತಿಕ ಕಂಪನಿಗಳೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುತ್ತೇವೆ ಎಂದು ನಾನು ಹೇಳಿದ್ದೇನೆ. ಒಮ್ಮೆ ನಾವು ಅತ್ಯುತ್ತಮ ಜಾಗತಿಕ ಕಂಪನಿಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡರೆ, ನಾವು ಭಾರತೀಯರು ಬಹಳಷ್ಟು ಕೆಲಸ ಮಾಡಬೇಕಾಗಿದೆ. 800 ಮಿಲಿಯನ್ ಭಾರತೀಯರು ಉಚಿತ ಪಡಿತರ ಪಡೆಯುವುದರಿಂದ ನಾವು ಉನ್ನತ ಮಟ್ಟದ ಆಕಾಂಕ್ಷೆಗಳನ್ನು ಹೊಂದಬೇಕಾಗುತ್ತದೆ.
ಉಚಿತ ಪಡಿತರ ಪಡೆಯುವ 800 ಮಿಲಿಯನ್ ಭಾರತೀಯರು ಬಡತನದಲ್ಲಿದ್ದಾರೆ. ನಾವು ಕಷ್ಟಪಟ್ಟು ಕೆಲಸ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ, ಯಾರು ಕಷ್ಟಪಡುತ್ತಾರೆ? ಎಂದು ನಾರಾಯಣ ಮೂರ್ತಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ನಾರಾಯಣ ಮೂರ್ತಿ RPSG ಗ್ರೂಪ್ ಅಧ್ಯಕ್ಷ ಸಂಜೀವ್ ಗೋಯೆಂಕಾ ಅವರೊಂದಿಗೆ ಸಂವಾದ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಈ ಹೇಳಿಯನ್ನು ನೀಡಿದ್ದಾರೆ.
Leave a Comment