ಎಲ್ಲರನ್ನು ಬೆಚ್ಚಿ ಬೀಳಿಸಿದ ಶಾಕಿಂಗ್‌ ಸುದ್ದಿ; ಅಪ್ರಾಪ್ತೆ ಹುಚ್ಚಾಟಕ್ಕೆ 20 ಮಂದಿಗೆ ಎಚ್‌ ಐವಿ

spread hiv
Spread the love

ನ್ಯೂಸ್ ಆ್ಯರೋ: ದೈಹಿಕ ದ್ರವದ ವಿನಿಮಯದ ಮೂಲಕ ಹರಡುವ ರೋಗ ಎಚ್ಐವಿ. ಅಪರಿಚಿತರ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಎಚ್ಚರಿಕೆ ತೆಗೆದುಕೊಳ್ದೆ ಹೋದ್ರೆ ಈ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಎಚ್ ಐವಿಗೆ ಸಂಬಂಧಿಸಿದಂತೆ ಉತ್ತರಾಖಂಡದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಹದಿಹರೆಯದ ಹುಡುಗಿಯೊಬ್ಬಳ ಹುಚ್ಚಾಟಕ್ಕೆ ಒಂದಲ್ಲ ಎರಡಲ್ಲ 20 ಮಂದಿ ಎಚ್ ಐವಿ ಸೋಂಕಿಗೆ ಒಳಗಾಗಿದ್ದಾರೆ.

ಹೌದು. . ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಿಂದಲ್ಲಿ ಈ ಘಟನೆ ನಡೆದಿದೆ. ಕೇವಲ ಐದು ತಿಂಗಳಲ್ಲಿ 19 ಮಂದಿಗೆ ಎಚ್ ಐವಿ ಪಾಸಿಟಿವ್ ಆಗಿದ್ದಾರೆ. ಇದರ ಹಿಂದೆ ಒಬ್ಬ 17 ವರ್ಷದ ಹುಡುಗಿ ಕೈವಾಡವಿದೆ ಅಂದ್ರೆ ನಂಬೋದು ಕಷ್ಟ. ಈ ಹುಡುಗಿ ಸಂಪರ್ಕಕ್ಕೆ ಬಂದ ಎಲ್ಲರಿಗೂ ಎಚ್ ಐವಿ ಸೋಂಕು ಕಾಣಿಸಿಕೊಂಡಿದೆ.

ಈ ಹುಡುಗಿ ಡ್ರಗ್ಸ್ ಚಟಕ್ಕೆ ದಾಸಳಾಗಿದ್ದಳು. ಡ್ರಗ್ಸ್ ಖರೀದಿಗೆ ಹಣವಿಲ್ಲ ಎಂದಾಗ ಪುರುಷರನ್ನು ತನ್ನ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದಳು. ಆಕೆ ಆಮಿಷಕ್ಕೆ ಮರುಳಾಗುವ ಹುಡುಗರು ಈಗ ಪರಿತಪಿಸುವಂತಾಗಿದೆ. ಹುಡುಗಿ ಐದು ತಿಂಗಳಲ್ಲಿ ಅನೇಕ ಪುರುಷರ ಸಂಪರ್ಕಕ್ಕೆ ಬಂದಿದ್ದಾಳೆ.

ಅದರಲ್ಲಿ ಕೆಲವರು ವಿವಾಹಿತರು. ಹಾಗಾಗಿ ಅವರ ಪತ್ನಿಯರಿಗೂ ಎಚ್ ಐವಿ ಸೋಂಕು ತಗುಲಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಎಚ್ಚರದಿಂದಿರುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಇನ್ನು ಆಕೆ ಬಡ ಕುಟುಂಬಕ್ಕೆ ಸೇರಿದ ಹುಡುಗಿ ಎಂಬುದು ಪತ್ತೆಯಾಗಿದೆ. ಹಣಕ್ಕಾಗಿ ಆಕೆ ಮಾಡ್ತಿದ್ದ ಕೆಲಸವನ್ನು ಸಮಾಲೋಚಕರ ಮುಂದೆ ಹೇಳಿದ್ದಾಳೆ.

ಹುಡುಗಿಗೆ ಆರೋಗ್ಯ ಸರಿಯಿಲ್ಲ ಎಂಬುದು ಆಕೆ ಸಂಪರ್ಕಕ್ಕೆ ಬಂದ ಜನರಿಗೆ ತಿಳಿದಿರಲಿಲ್ಲ. ಆದ್ರೆ ಆಕೆ ಹೆಸರು ಬಹಿರಂಗವಾಗ್ತಿದ್ದಂತೆ ಸಂಪರ್ಕಕ್ಕೆ ಬಂದವರು ಆಘಾತಕ್ಕೊಳಗಾಗಿದ್ದರು. ಪರೀಕ್ಷೆಗೆ ಮುಂದಾದಾಗ ಎಚ್ ಐವಿ ಪಾಸಿಟಿವ್ ಆಗಿರೋದು ಅವರಿಗೆ ತಿಳಿದಿದೆ. ನೈನಿತಾಲ್ ಜಿಲ್ಲೆಯಲ್ಲಿ ಎಚ್‌ಐವಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದೆ. ರಾಮನಗರ ಅಗ್ರಸ್ಥಾನದಲ್ಲಿದೆ. ರಾಮನಗರದಲ್ಲಿ 17 ತಿಂಗಳಲ್ಲಿ 45 ಮಂದಿಗೆ ಎಚ್‌ಐವಿ ಸೋಂಕು ಪತ್ತೆಯಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!