ಮುಂಜಾನೆ ಈ ಕೆಲಸ ಮಾಡಿದರೆ ಅದೃಷ್ಟ ಒಲಿದು ಬರುತ್ತೆ; ಮುಖ್ಯವಾಗಿ ಈ ಐದು ಕೆಲಸ ಮಿಸ್ ಮಾಡಲೇ ಬೇಡಿ

ನ್ಯೂಸ್ ಆ್ಯರೋ: ಪ್ರತಿಯೊಬ್ಬ ವ್ಯಕ್ತಿಯು ಲಕ್ಷ್ಮಿ ದೇವಿಯ ಆಶೀರ್ವಾದ ತನ್ನ ಮೇಲೆ ಇರಬೇಕೆಂದು ಬಯಸುತ್ತಾನೆ. ತಾಯಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದೂ ಕರೆಯುತ್ತಾರೆ. ಲಕ್ಷ್ಮಿ ದೇವಿ ನೆಲೆಸಿರುವ ಮನೆಗಳಲ್ಲಿ ವಾಸಿಸುವ ಜನರ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಾಗುವುದಿಲ್ಲ ಎನ್ನುವ ನಂಬಿಕೆಯಿದೆ. ಆದರೆ ಕೆಲವೊಮ್ಮೆ ನಾವೆಷ್ಟೇ ಪ್ರಯತ್ನಿಸಿದರೂ ಅದೃಷ್ಟವೆಂಬುದು ನಮ್ಮ ಪಾಲಿಗೆ ಇರುವುದಿಲ್ಲ. ಹಾಗಾಗಿ ಈ ಎಲ್ಲಾ ಕೆಲಸಗಳಿಗೆ ಬೆಳಗಿನ ಸಮಯವನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ.
ಹಣೆಗೆ ಶ್ರೀಗಂಧದ ತಿಲಕವನ್ನಿಟ್ಟುಕೊಳ್ಳಿ:
ಶಾಸ್ತ್ರದ ಪ್ರಕಾರ, ಪೂಜೆಯ ನಂತರ, ಒಬ್ಬ ವ್ಯಕ್ತಿಯು ಶ್ರೀಗಂಧದ ತಿಲಕವನ್ನು ತನ್ನ ಹಣೆಗೆ ಇಟ್ಟುಕೊಳ್ಳಬೇಕು. ಈ ಶ್ರೀಗಂಧದ ತಿಲಕವನ್ನು ನಾವು ನಮ್ಮ ಹಣೆಯ ಮೇಲೆ ಹಚ್ಚಿಕೊಳ್ಳುವುದರಿಂದ ಲಕ್ಷ್ಮಿ ದೇವಿಯು ಶೀಘ್ರದಲ್ಲೇ ಪ್ರಸನ್ನಳಾಗುತ್ತಾಳೆ ಮತ್ತು ಭಕ್ತರ ಮೇಲೆ ಆಕೆಯ ಆಶೀರ್ವಾದವನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ. ಹಾಗಾಗಿ, ನೀವು ತಪ್ಪದೇ ಪೂಜೆಯನ್ನು ಮಾಡಿದ ನಂತರ ಶ್ರೀಗಂಧದ ತಿಲಕವನ್ನು ಹಣೆಗೆ ಇಟ್ಟುಕೊಳ್ಳಿ.
ಮುಂಜಾನೆ ಈ ಕೆಲಸ ಮಾಡಿ:
ಶಾಸ್ತ್ರದ ಪ್ರಕಾರ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಪ್ರತಿದಿನ ಬೆಳಗ್ಗೆ ಎದ್ದು ದೇವರ ಧ್ಯಾನ ಮಾಡಿದ ನಂತರ ಮನೆಯ ಮುಖ್ಯ ದ್ವಾರವನ್ನು ನೀರಿನಿಂದ ಸ್ವಚ್ಛಗೊಳಿಸಬೇಕು. ಇದರ ನಂತರ, ಹಿಟ್ಟಿನಿಂದ ಎರಡೂ ಪ್ರವೇಶ ದ್ವಾರಗಳಿಂದ ರಂಗೋಲಿಯನ್ನು ಹಾಕಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗಿ ನಿಮ್ಮ ಮನೆಯನ್ನು ಪ್ರವೇಶಿಸುತ್ತಾಳೆ ಎಂದು ಹೇಳಲಾಗುತ್ತದೆ. ಅಲ್ಲದೆ, ಇದು ಕುಟುಂಬದಲ್ಲಿ ವಾಸಿಸುವ ಎಲ್ಲಾ ಸದಸ್ಯರನ್ನು ತೊಂದರೆಗಳಿಂದ ರಕ್ಷಿಸುತ್ತದೆ.
ಈ ಮಂತ್ರ ಪಠಿಸಿ:
ಹಿಂದೂ ಧರ್ಮಗ್ರಂಥಗಳಲ್ಲಿ ತುಳಸಿ ಸಸ್ಯಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ತುಳಸಿ ಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿದ್ದಾಳೆ ಎಂದು ಹೇಳಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ತುಳಸಿ ಗಿಡಕ್ಕೆ ನಿತ್ಯ ಪೂಜೆ ಸಲ್ಲಿಸಿ ನೀರು ಅರ್ಪಿಸಿದರೆ ಮನೆಗೆ ಸುಖ, ಸಮೃದ್ಧಿ ಬರುತ್ತದೆ ಎನ್ನುವ ನಂಬಿಕೆಯಿದೆ. ಭಾನುವಾರದ ದಿನವನ್ನು ಮತ್ತು ಏಕಾದಶಿ ದಿನವನ್ನು ಹೊರತುಪಡಿಸಿ ನಿಯಮಿತವಾಗಿ ತುಳಸಿಗೆ ನೀರನ್ನು ಅರ್ಪಿಸಬೇಕು. ಹಾಗೆಯೇ ”ಓಂ ನಮೋ ಭಗವತೇ ವಾಸುದೇವಾಯ” ಎಂಬ ಮಂತ್ರವನ್ನು ಜಪಿಸಿ.
ತುಪ್ಪದ ದೀಪವನ್ನಿಡಿ:
ಶಾಸ್ತ್ರದ ಪ್ರಕಾರ, ತಾಯಿ ಲಕ್ಷ್ಮಿ ಮನೆಯ ಮುಖ್ಯ ಬಾಗಿಲಿನಿಂದ ಮಾತ್ರ ಮನೆಯನ್ನು ಪ್ರವೇಶಿಸುತ್ತಾಳೆ. ಅಂತಹ ಪರಿಸ್ಥಿತಿಯಲ್ಲಿ, ಮುಂಜಾನೆ ಮನೆಯ ಅಂಗಳದಲ್ಲಿ ರಂಗೋಲಿ ಹಾಕಿದ ನಂತರ ಮನೆಯ ಮುಖ್ಯದ್ವಾರದಲ್ಲಿ ತುಪ್ಪದ ದೀಪವನ್ನು ಹಚ್ಚಿಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಮತ್ತು ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟವನ್ನು ಪಡೆಯುತ್ತಾನೆ.
ಸೂರ್ಯ ಪೂಜೆ ಮಾಡಿ:
ಬೆಳಿಗ್ಗೆ ಎದ್ದ ನಂತರ, ಸ್ನಾನ ಇತ್ಯಾದಿಗಳನ್ನು ಮಾಡಿಕೊಂಡು ಶುದ್ಧರಾಗಿ, ಸೂರ್ಯ ದೇವರಿಗೆ ನಮಸ್ಕರಿಸಿ ಸಂಪೂರ್ಣ ಅರ್ಘ್ಯವನ್ನು ಅರ್ಪಿಸಿ. ನಿಯಮಿತವಾಗಿ ನೀರನ್ನು ಅರ್ಪಿಸುವುದರಿಂದ ಸಂತೋಷ ಮತ್ತು ಸಮೃದ್ಧಿಯನ್ನು ಸೂರ್ಯ ದೇವನು ತರುತ್ತಾನೆ ಎನ್ನುವ ನಂಬಿಕೆಯಿದೆ. ಇದರಿಂದಾಗಿ ನಿಮಗೆ ಸಮಾಜದಲ್ಲಿ ಗೌರವವೂ ಸಿಗುತ್ತದೆ. ಜಾತಕದಲ್ಲಿ ಸೂರ್ಯನ ಸ್ಥಾನ ಬಲಗೊಳ್ಳುತ್ತದೆ.
Leave a Comment