ಗೋಧ್ರಾ ದುರಂತದ ಸತ್ಯ ಸಿನಿಮಾ ಮೂಲಕ ಬಹಿರಂಗ; ಚರ್ಚೆಗೆ ಗ್ರಾಸವಾದ ಪ್ರಧಾನಿ ಮೋದಿ ಕಾಮೆಂಟ್
ನ್ಯೂಸ್ ಆ್ಯರೋ: ಗೋಧ್ರಾ ರೈಲು ದುರಂತ ಇಂದಿಗೂ ವಿವಾದದ ವಿಷಯವಾಗಿಯೇ ಉಳಿದಿದೆ. 2002ರಲ್ಲಿ ನಡೆದ ಆ ಘಟನೆಯ ಬಳಿಕ ಗುಜರಾತ್ ಉದ್ವಿಗ್ನಗೊಂಡಿತ್ತು. ಆ ಕುರಿತು ಹಲವು ಸಾಕ್ಷ್ಯಚಿತ್ರಗಳು ಈಗಾಗಲೇ ಬಂದಿವೆ. ಈಗ ಬಾಲಿವುಡ್ನಲ್ಲಿ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಬಿಡುಗಡೆ ಆಗಿದೆ.
ಇದರಲ್ಲಿ ವಿಕ್ರಾಂತ್ ಮಾಸಿ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಈ ಸಿನಿಮಾದ ಕುರಿತು ‘ಎಕ್ಸ್’ನಲ್ಲಿ ಕೇಳಿಬಂದ ಅಭಿಪ್ರಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗಿದ್ದು, ಸಿನಿಮಾ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
‘ಸಾಮಾನ್ಯ ಜನರು ನೋಡುವ ರೀತಿಯಲ್ಲಿ ಸತ್ಯ ಹೊರಗೆ ಬರುತ್ತಿರುವುದು ಒಳ್ಳೆಯ ವಿಷಯ. ಕ್ಷಣಿಕ ಕಾಲಕ್ಕೆ ಮಾತ್ರ ಸುಳ್ಳಿನ ನಿರೂಪಣೆ ಇರಬಹುದು. ಕೊನೆಗೂ ಸತ್ಯ ಹೊರಗೆ ಬರುತ್ತದೆ’ ಎಂದು ನರೇಂದ್ರ ಮೋದಿ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮೋದಿ ಅವರು ಈ ಪೋಸ್ಟ್ ಮಾಡಿದ್ದರಿಂದ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಬಗ್ಗೆ ಜನರಿಗೆ ಇನ್ನಷ್ಟು ಮಾಹಿತಿ ಸಿಕ್ಕಂತೆ ಆಗಿದೆ.
ಗೋಧ್ರಾ ಹತ್ಯಾ ಕಾಂಡ ನಡೆದಾಗ ಅಂದಿನ ಮಾಧ್ಯಮಗಳು ಆ ಘಟನೆಯನ್ನು ಯಾವ ರೀತಿ ಬಿಂಬಿಸಿದ್ದವು ಎಂಬುದನ್ನೇ ಮುಖ್ಯ ಥೀಮ್ ಆಗಿ ಇಟ್ಟುಕೊಂಡು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ಮೂಡಿಬಂದಿದೆ. ಈ ಸಿನಿಮಾ ಬಗ್ಗೆ ಮೋದಿ ಪೋಸ್ಟ್ ಮಾಡಿದ್ದನ್ನು ಕೆಲವರು ತೆಗಳಿದ್ದಾರೆ. ರಾಜಕೀಯದ ಎಲ್ಲ ಕೆಲಸಗಳನ್ನು ಬಿಟ್ಟು ಅವರು ಸಿನಿಮಾದ ಪ್ರಚಾರ ಮಾಡಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದಾರೆ.
Leave a Comment