ಬಿಗ್​ಬಾಸ್ ಮನೆಯಲ್ಲಿ ʼಬುರುಡೆʼ ಒಡೆಯುವ ಮಾತು; ಮಂಜು ಮತ್ತು ರಜತ್ ನಡುವೆ ಗಲಾಟೆಗೆ ಕಾರಣ ಏನು?

rajat manju
Spread the love

ನ್ಯೂಸ್ ಆ್ಯರೋ: ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಮನೆಯಲ್ಲಿ ಈ ಇಬ್ಬರ ಮಧ್ಯೆ ಜಿದ್ದಾಜಿದ್ದಿ ಶುರುವಾಗಿದೆ. 9ನೇ ವಾರಕ್ಕೆ ಕಾಲಿಟ್ಟ ಬಿಗ್​ಬಾಸ್​ ಈಗ​ ಸಾಮ್ರಾಜ್ಯವಾಗಿ ಬದಲಾಗಿದೆ. ಒಂದು ಕಡೆ ಮಹಾರಾಜ ಮಂಜಣ್ಣ, ಮತ್ತೊಂದು ಕಡೆ ಯುವರಾಣಿ ಮೋಕ್ಷಿತಾ ನಡುವೆ ಬಿಗ್​ ಫೈಟ್​ ನಡೆಯುತ್ತಿದೆ.

ಬೆನ್ನಲ್ಲೇ, ಅಲ್ಲಿನ ಪ್ರಜೆಗಳು ಎರಡು ಬಣಗಳಾಗಿ ಪ್ರತ್ಯೇಕಗೊಂಡಿದ್ದಾರೆ. ಇತ್ತ ಟಾಸ್ಕ್​ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿದೆ. ಕ್ಯಾಪ್ಟನ್ ಮಂಜು ಮತ್ತು ರಜತ್ ನಡುವೆ ಮಾತಿನ ಯುದ್ಧವೇ ನಡೆದು ಹೋಗಿದೆ.

ಒಂದು ಯುವರಾಣಿ ಮೋಕ್ಷಿತಾ ಅವರ ಬಣವಾದರೆ, ಇನ್ನೊಂದು ರಾಜ ಮಂಜಣ್ಣ ಬಣವಾಗಿದೆ. ಅಂತೆಯೇ ನಿನ್ನೆಯ ಎಪಿಸೋಡ್​ನಲ್ಲಿ ರಾಜ ಮತ್ತು ಯುವರಾಣಿಯ ನಡುವೆ ಗದ್ದುಗೆಗೆ ಕಿತ್ತಾಟ ಶುರುವಾಗಿತ್ತು. ಇಂದು ಬಿಗ್​ಬಾಸ್​ ಎರಡು ಬಣಗಳಿಗೆ ಟಾಸ್ಕ್ ನೀಡಿದ್ದಾರೆ. ಅದುವೇ ಮಣ್ಣಿನಿಂದ ಅಸ್ತ್ರ ಮಾಡೋದು.

ಈ ವೇಳೆ ಮಣ್ಣಿನ ಉಂಡೆಗಳನ್ನು ಎತ್ತಿಕೊಳ್ಳುವಾಗ ಪ್ರಜೆಗಳ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಮಂಜು ಮತ್ತು ಮೋಕ್ಷಿತಾ ಬಣದ ರಜತ್ ನಡುವೆ ಮಾತಿನ ಸಮರ ಶುರುವಾಗಿದೆ. ಮಂಜು ಬಣದ ಪ್ರಜೆಗಳು, ಮೋಕ್ಷಿತಾ ಬಣದ ಸದಸ್ಯರನ್ನು ತಳ್ಳಿ ಮಣ್ಣನ್ನು ಎತ್ತಿಕೊಂಡು ಹೋಗಿದ್ದಾರೆ. ಇದಕ್ಕೆ ಕೋಪಿಸಿಕೊಂಡ ರಜತ್, ನಾನು ತಳ್ಳೋದಿದ್ರೆ ಸರಿಯಾಗಿ ತಳ್ಳುತ್ತೇನೆ. ಬುರುಡೆ ಹೊಡೆದು ಹೋಗುವ ಹಾಗೆ ತಳ್ಳುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಇದನ್ನು ಕೇಳಿಸಿಕೊಂಡ ಮಂಜು ಅಲ್ಲಿಗೆ ಎಂಟ್ರಿಯಾಗಿ.. ಬುರುಡೆ ಒಡಿತಿಯಾ ನೀನು? ಏನು ರೌಡಿಸಂ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರೌಡಿ ಅಂತಾ ಯಾಕೆ ಹೇಳ್ತೀಯಾ ಎಂದು ರಜತ್ ಕಿರುಚಾಡಿದ್ದಾರೆ. ಅದಕ್ಕೆ ಮತ್ತೆ ಕೌಂಟರ್ ಕೊಟ್ಟ ಮಂಜು, ಬೆದರಿಕೆ ಇಡೋದಲ್ಲ. 54 ದಿನ ಇಲ್ಲಿ ಭಯ ಪಟ್ಟುಕೊಂಡು ಇದ್ದಿಲ್ಲ. ನಿನ್ನಾಟ ನೀನು ತೋರಿಸು, ನನ್ನಾಟ ನಾನು ತೋರಿಸ್ತೇನೆ ಎಂದಿದ್ದಾರೆ. ಅದಕ್ಕೆ ತಿರುಗೇಟು ನೀಡುವ ರಜತ್, ಆವಾಗಿಂದು ಒಂದು ಲೆಕ್ಕ, ಇವಾಗಿಂದ ಇನ್ನೊಂದು ಲೆಕ್ಕ ಅಂತಾ ಸವಾಲ್ ಎಸೆದಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!