Mangalore : ಸಿಟಿ ಬಸ್ ನಿರ್ವಾಹಕನ ಪರ್ಸ್ ದರೋಡೆ – ಇಬ್ಬರು ಖದೀಮರಿಂದ ಕೃತ್ಯ, ಪ್ರಕರಣ ದಾಖಲು

20240808 090153
Spread the love

ನ್ಯೂಸ್ ಆ್ಯರೋ : ಖಾಸಗಿ ಬಸ್ ನ ನಿರ್ವಾಹಕರೊಬ್ಬರು ಎಂದಿನಂತೆ ತನ್ನ ಕರ್ತವ್ಯ ಮುಗಿಸಿ ಬಸ್‌ ನಿಲುಗಡೆಗೊಳಿಸಿ ಮನೆಗೆ ಹೋಗುತ್ತಿದ್ದ ವೇಳೆ ನಿರ್ವಾಹಕನ ಪರ್ಸ್‌ ಅನ್ನೇ‌ ದೋಚಿದ ಘಟನೆ ಮಂಗಳೂರು ನಗರದ ಕೊಣಾಜೆ ಪೊಲೀಸ್‌ ಠಾಣೆ ವ್ಯಾಪ್ತಿಯ ಹರೇಕಳದಲ್ಲಿ ತಡರಾತ್ರಿ ನಡೆದಿದೆ.

ಹರೇಕಳ ಪಂಚಾಯತ್‌ ಬಳಿಯ ನಿವಾಸಿ, ಸ್ಟೇಟ್‌ ಬ್ಯಾಂಕ್‌ ಪಾವೂರು ಮಧ್ಯೆ ಚಲಿಸುವ 55 ನಂಬರಿನ ಶ್ರೀ ಕಟೀಲ್‌ ಬಸ್‌ನ ನಿರ್ವಾಹಕ ಮಹಮ್ಮದ್‌ ಇಕ್ಬಾಲ್‌ ಅವರ ಬಾಯಿಗೆ ಬಟ್ಟೆ ತುರುಕಿ ದರೋಡೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಕಳೆದ ಆಗಸ್ಟ್ 5 ರಂದು ಹರೇಕಳ ಡಿವೈಎಫ್‌ಐ ಕಚೇರಿ ಸಮೀಪ ಜಾಗದಲ್ಲಿ ಬಸ್ಸನ್ನು ನಿಲ್ಲಿಸಲು ಬಂದ ಸಂದರ್ಭ ನಿರ್ವಾಹಕ ಇಕ್ಬಾಲ್‌ ಮುಂಚಿತವಾಗಿ ಇಳಿದು ಸ್ಥಳೀಯ ಅಂಗಡಿಗೆ ತೆರಳಿದ್ದರು. ಅಲ್ಲಿ ಮನೆಗೆ ಸಾಮಗ್ರಿ ಖರೀದಿಸಿ ಸಮೀಪದಲ್ಲೇ ಇರುವ ಮನೆಗೆ ಮೊಬೈಲ್‌ ಟಾರ್ಚ್‌ ಲೈಟ್‌ ಹಾಕಿಕೊಂಡು ನಡೆದುಕೊಂಡು ಹೋಗುತ್ತಿದ್ದರು.

ಇದೇ ಸಂದರ್ಭದಲ್ಲಿ ಹಿಂದಿನಿಂದ ಬಂದ ಇಬ್ಬರು ಖದೀಮರು ಇಕ್ಬಾಲ್‌ ಅವರ ಕೈಗಳನ್ನು ಮಡಚಿ ಹಿಡಿದು, ಬಟ್ಟೆಯನ್ನು ಬಾಯಿಗೆ ತುರುಕಿದ್ದು, ಅವರ ಕೈಯ್ಯಲ್ಲಿದ್ದ 13,000 ರೂ.ನಷ್ಟು ನಗದು ಇದ್ದ ಪರ್ಸನ್ನು ಎಳೆದೊಯ್ದು ಕತ್ತಲಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೋಣಾಜೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!