ಪ್ಲಾಸ್ಟಿಕ್ ಸರ್ಜರಿಯಿಂದ ಮುಖದ ಲುಕ್ ಚೇಂಜ್ – 2.5 ಕೋಟಿ ಖರ್ಚು ಮಾಡಿದಾಕೆಗೆ ಈಗ ಹೊಸ ಸಂಕಷ್ಟ ಏನದು?

ಪ್ಲಾಸ್ಟಿಕ್ ಸರ್ಜರಿಯಿಂದ ಮುಖದ ಲುಕ್ ಚೇಂಜ್ – 2.5 ಕೋಟಿ ಖರ್ಚು ಮಾಡಿದಾಕೆಗೆ ಈಗ ಹೊಸ ಸಂಕಷ್ಟ ಏನದು?

ನ್ಯೂಸ್ ಆ್ಯರೋ : ಸೌಂದರ್ಯದ ಬಗ್ಗೆ ಪ್ರತೀ ಹೆಣ್ಣು ಮಗಳಿಗೂ ತಾನು ಹೀಗೆ ಇರಬೇಕು ಎನ್ನುವ ಕನಸು ಇದ್ದೇ ಇರುತ್ತದೆ. ಆದರೆ ಬಯಸಿದಂತಾಗಲು ಎಲ್ಲರಿಂದ ಸಾಧ್ಯವಿಲ್ಲ. ಇನ್ನು ಕೆಲವರು ಬಯಸಿದಂತಾಗಲು ಹೋಗಿ ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸಿಕೊಳ್ಳುತ್ತಾರೆ.

ಕನ್ನಡಿ ಮುಂದೆ ನಿಂತಾಗ ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ದೇಹ ಸೌಂದರ್ಯದ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಮೂಗು ಸ್ವಲ್ಪ ಒದ್ದ ಇರಬೇಕು, ಹಣೆ ಚಿಕ್ಕದಿರಬೇಕು, ತುಟಿ ಕೊಂಚ ಸುಂದರವಾಗಿರಬೇಕಿತ್ತು ಎಂದು ಯೋಚಿಸುತ್ತಾರೆ. ಕೇವಲ ಮುಖ ಮಾತ್ರವಲ್ಲ ದೇಹದ ಉಬ್ಬು ತಗ್ಗುಗಳ ಬಗ್ಗೆಯೂ ತಮ್ಮದೇ ಆದ ವಿಶ್ಲೇಷಣೆ ಮಾಡುತ್ತಾರೆ.

ಇವರೆಲ್ಲರ ಆಸೆಗಳನ್ನು ನೆರವೇರಿಸಲು ಇವತ್ತು ವೈದ್ಯಕೀಯ ಲೋಕವೂ ಸಾಕಷ್ಟು ಪ್ರಗತಿಯನ್ನು ಕಂಡಿದೆ. ಕೈಯಲ್ಲಿ ಹಣವಿದ್ದರೆ ಸಾಕು ದೇಹ ಸೌಂದರ್ಯವನ್ನು ತಮಗೆ ಇಷ್ಟ ಬಂದಂತೆ ಬದಲಿಸಿಕೊಳ್ಳಬಹುದು. ಇದಕ್ಕಾಗಿ ಹೆಚ್ಚಿನವರು ಮೊರೆ ಹೋಗುವುದು ಪ್ಲಾಸ್ಟಿಕ್ ಸರ್ಜರಿಗೆ.

ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆ ಯಶಸ್ವಿಯಾದರೆ ಚಿಂತೆ ಇಲ್ಲ. ಆದರೆ ಇದರಲ್ಲಿ ತೊಂದರೆ ಅನುಭವಿಸಿದವರೇ ಹೆಚ್ಚು. ಕೆಲವೊಮ್ಮೆ ಇದು ಪ್ರಾಣಕ್ಕೂ ಕಂಟಕವಾಗುತ್ತದೆ.

ಇಲ್ಲೊಬ್ಬಳು ಮಾಡೆಲ್ ಸುಂದರವಾಗಿ ಕಾಣಬೇಕು ಎಂದು ಹೇಳಿ ಸರ್ಜರಿ ಮಾಡಿಕೊಂಡ ಬಳಿಕ ಕೆಲವೊಂದು ಸಮಸ್ಯೆ ಅನುಭವಿಸುವಂತಾಗಿದೆ.

ಬ್ರೆಜಿಲಿಯನ್ ಮಾಡೆಲ್ ಡೆನಿಸ್ ರೋಚಾ ವಯಸ್ಸು 39. ತುಟಿ ಸೇರಿದಂತೆ ಮುಖಕ್ಕೆ ಮೂರು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಈಕೆಯ ಇಡೀ ಮುಖವೇ ಬದಲಾಗಿದೆ. ವಕೀಲೆಯಾಗಿದ್ದವಳು ಮಾಡೆಲ್ ಆಗಿ ಎಲ್ಲರ ಗಮನ ಸೆಳೆದಿದ್ದ ಡೆನಿಸ್ ತನ್ನ ಮುಖವನ್ನು ಸಂಪೂರ್ಣ ಬದಲಾಯಿಸಿಕೊಳ್ಳಲು ಮಾಡಿದ ಪ್ಲಾಸ್ಟಿಕ್ ಸರ್ಜರಿಗೆ ಸರಿಸುಮಾರು 2.5 ಕೋಟಿ ರೂಪಾಯಿ ಖರ್ಚು ಮಾಡಿದ್ದಾಳೆ.

ಮುಖ ಬದಲಾದ ಮೇಲೆ ಡೆನಿಸ್ ಗೆ ಹೊಸ ಸಮಸ್ಯೆ ಪ್ರಾರಂಭವಾಗಿದೆ. ಅದೇನೆಂದರೆ ಈಕೆಯ ಡ್ರೈವಿಂಗ್ ಲೈಸೆನ್ಸ್ ನವೀಕರಣವಾಗುತ್ತಿಲ್ಲ. ಈ ಬಗ್ಗೆ ತನ್ನ ಅನುಭವ ಹಂಚಿಕೊಂಡಿರುವ ಡೆನಿಸ್, ಡ್ರೈವಿಂಗ್ ಲೈಸೆನ್ಸ್ ನವೀಕರಿಸಲು ಹೋಗಿದ್ದೆ. ಆದರೆ ಅಧಿಕಾರಿಗಳಿಗೆ ನನ್ನನ್ನು ಗುರುತಿಸಲು ಸಾಧ್ಯವಾಗಿಲ್ಲ.

ಲೈಸೆನ್ಸ್ ನಲ್ಲಿರುವ ಫೋಟೋ ಈಗಿನ ಮುಖಕ್ಕೆ ಹೊಂದಿಕೆಯಾಗದ ಕಾರಣ ಪರವಾನಗಿಯನ್ನು ನವೀಕರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಬಳಿಕ ಈ ಸಮಸ್ಯೆ ಕಾಡುತ್ತದೆ ಎಂದು ಕನಸಿನಲ್ಲೂ ಆಲೋಚನೆ ಮಾಡಿರಲಿಲ್ಲ ಎಂದಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *