20 ವರ್ಷದ ಯುವತಿಗೆ 40ರ ಅಂಕಲ್‌ ಜೊತೆ ಲವ್ ಮ್ಯಾರೇಜ್; ಮನೆಯ ಮುಂಭಾಗದಲ್ಲಿಯೇ ಅಳಿಯನ ಪ್ರಾಣ ತೆಗೆದ ಪೋಷಕರು

muder
Spread the love

ನ್ಯೂಸ್ ಆ್ಯರೋ: ಪ್ರೇಮ ವಿವಾಹ ಹಿನ್ನೆಲೆಯಲ್ಲಿ ಕೋಣನೂರಲ್ಲಿ ಅಂಕಲ್‌ ನ ಭೀಕರ ಕಗ್ಗೊಲೆಯಾಗಿದೆ. ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕೋಣನೂರು ಗ್ರಾಮದ 40 ವರ್ಷದ ವ್ಯಕ್ತಿ ಮಂಜುನಾಥ್‌ ಕೊಲೆಯಾದ ವ್ಯಕ್ತಿ. ಯುವತಿ ಪೋಷಕರು ಹಾಗೂ ಸಂಬಂಧಿಕರಿಂದ ವ್ಯಕ್ತಿಯ ಹತ್ಯೆಯಾಗಿದೆ ಎಂದು ವರದಿಯಾಗಿದೆ.

Screenshot 2024 11 28 095426

ಒಂದು ತಿಂಗಳ ಹಿಂದೆಯಷ್ಟೇ ಮಂಜುನಾಥ್ ಹಾಗೂ ಗ್ರಾಮದ ಯುವತಿ ನಡುವೆ ಮದುವೆ ನಡೆದಿತ್ತು. ಪ್ರೇಮ ವಿವಾಹದ ಬಳಿಕ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಕೆಲ ದಿನಗಳ ಬಳಿಕ ಮದುವೆ ಮಾಡಿಕೊಡುವುದಾಗಿ ಹೇಳಿದ್ದರು. ಯುವತಿಯ ಪೋಷಕರು ಭರವಸೆ ನೀಡಿದ್ದ ಕಾರಣದಿಂದ ಮಗಳನ್ನು ಊರಿಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಮಂಜುನಾಥ್‌ ಚಿತ್ರದುರ್ಗದ ಸಂಬಂಧಿ ಮನೆಯಲ್ಲಿ ವಾಸವಾಗಿದ್ದ.

20 ದಿನಗಳ ಬಳಿಕ ನಿನ್ನೆ ಕೋಣನೂರು ಗ್ರಾಮಕ್ಕೆ ತೆರಳಿದಾಗ ಏಕಾಏಕಿ ಈತನ ಮೇಲೆ ಹಲ್ಲೆ ಮಾಡಲಾಗಿದೆ. ಮಂಜುನಾಥ್ ಮನೆಯ ಮುಂಭಾಗದಲ್ಲಿಯೇ ಭೀಕರವಾಗಿ ಹಲ್ಲೆ ನಡೆಸಿ ದಾರುಣವಾಗಿ ಹತ್ಯೆ ಮಾಡಲಾಗಿದೆ. ಮಂಜುನಾಥ್ ಮೇಲೆ ಕೋಲು,ಬಡಿಗೆ, ರಾಡಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ.

ಯುವತಿ ತಂದೆ ಜಗದೀಶ್, ದೊಡ್ಡಪ್ಪ, ಚಿಕ್ಕಪ್ಪ ಸೇರಿದಂತೆ ಕುಟುಂಬಸ್ಥರಿಂದ ಹಲ್ಲೆ ಕೃತ್ಯ ನಡೆದಿದೆ ಎಂದು ವರದಿಯಾಗಿದೆ. ಇನ್ನು ಇದು ಮಂಜುನಾಥ್‌ ಗೆ ಎರಡನೇ ಮದುವೆ. ಐದಾರು ವರ್ಷಗಳ ಹಿಂದೆ ಅದೇ ಗ್ರಾಮದಲ್ಲಿ ಮಂಜುನಾಥ್ ಅಂತರ್‌ಜಾತಿ ವಿವಾಹವಾಗಿದ್ದ. ಮಡಿವಾಳ ಸಮುದಾಯದ ಯುವತಿ ಶಿಲ್ಪಾರನ್ನು ಮಂಜುನಾಥ್‌ ಮದುವೆಯಾಗಿದ್ದ. ಮದುವೆಯಾದ ಬಳಿಕ ದಂಪತಿಗಳು ದಾವಣಗೆರೆಯಲ್ಲಿ ವಾಸವಾಗಿದ್ದ. ಮದುವೆಯಾದ ಕೆಲ ತಿಂಗಳಲ್ಲೇ ಗಂಡನ ಕಾಟಕ್ಕೆ ಬೇಸತ್ತು ದಾವಣಗೆರೆಯಲ್ಲೇ ಶಿಲ್ಪಾ ನೇಣಿಗೆ ಶರಣಾಗಿದ್ದಳು. ಇದೇ ವಿಚಾರವಾಗಿ ಮೃತ ಮಂಜುನಾಥ್ ಜೈಲಿಗೆ ಕೂಡ ಹೋಗಿ ಬಂದಿದ್ದ.

ಎರಡು ವರ್ಷಗಳ ಹಿಂದೆ ಜೈಲಿನಿಂದ ಹೊರಬಂದಿದ್ದ ಮಂಜುನಾಥ್‌, ಕಳೆದ 6-7 ತಿಂಗಳಿನಿಂದ ಪಕ್ಕದ ಮನೆಯ ರಕ್ಷಿತಾ ಎಂಬ ಯುವತಿ ಜೊತೆ ಪ್ರೇಮಾಂಕುರವಾಗಿತ್ತು. ಒಂದು ತಿಂಗಳ ಹಿಂದೆಯಷ್ಟೇ ಇವರು ಓಡಿ ಹೋಗಿ ವಿವಾಹವಾಗಿದ್ದರು. ರಾಜಿ ಪಂಚಾಯ್ತಿ ಬಳಿಕ ಮದುವೆ ಮಾಡಿಕೊಡುವುದಾಗಿ ಯುವತಿಯ ಪೋಷಕರು ಮಾತು ಕೊಟ್ಟಿದ್ದರು. ಇದರಿಂದಾಗಿ ಬುಧವಾರ ಗ್ರಾಮಕ್ಕೆ ಮಂಜುನಾಥ್ ಹೋಗಿದ್ದೇ ತಡ, ಯುವತಿ ಪೋಷಕರು ಸಂಬಂಧಿಕರಿಂದ ಭೀಕರ ಹಲ್ಲೆ ಮಾಡಲಾಗಿದೆ. ಭೀಕರ ಹಲ್ಲೆಯಿಂದಾಗಿ ಮನೆಯ ಮುಂದೆಯೇ ಮಂಜುನಾಥ್ ಪ್ರಾಣ ಬಿಟ್ಟಿದ್ದಾರೆ.

ಸದ್ಯ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿ ಪೋಲೀಸರ ಹುಡುಕಾಟ ನಡೆಸಲಾಗುತ್ತಿದ್ದು, ಭರಮಸಾಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ದಾಖಲಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!