ಅಡುಗೆ ಮನೇಲಿ ಅಪ್ಪಿ ತಪ್ಪಿಯೂ ಈ ತಪ್ಪು ಮಾಡ್ಬೇಡಿ; ಪಾರ್ವತಿ ದೇವಿ ಕೃಷೆ ನಿಮಗೆ ಸಿಗಲ್ಲ
ನ್ಯೂಸ್ ಆ್ಯರೋ: ಮನೆಯ ವಾಸ್ತುವಿನಲ್ಲಿ ಅಡುಗೆ ಕೋಣೆಗೆ ತುಂಬಾ ಪ್ರಾಮುಖ್ಯತೆ ಇದೆ. ಅಡುಗೆ ಕೋಣೆ ಚೆನ್ನಾಗಿದ್ರೆ ಮನೆ ಮತ್ತು ಮನೆಯಲ್ಲಿನ ಜನರು ನೆಮ್ಮದಿಯಾಗಿ ಇರೋದಕ್ಕೆ ಸಾಧ್ಯ ಎನ್ನುತ್ತಾರೆ. ಇನ್ನು ಅಡುಗೆ ಕೋಣೆಯಲ್ಲಿ ಅನ್ನಪೂರ್ಣೆ ವಾಸಿಸುತ್ತಾರೆ ಎನ್ನುವ ಮಾತಿದೆ. ಅನ್ನಪೂರ್ಣೆ ಪಾರ್ವತಿ ದೇವಿಯ ಒಂದು ರೂಪ. ಮನೆಯಲ್ಲಿ ಸುಖ ಸಂಪತ್ತು ಚೆನ್ನಾಗಿರಬೇಕು ಅಂದ್ರೆ ಪಾರ್ವತಿ ದೇವಿಯ ಕೃಪೆ ಸದಾ ಇರಬೇಕು.
ಅಡುಗೆ ಕೋಣೆಯಲ್ಲಿ ನಾವು ಕೆಲವೊಂದು ತಪ್ಪುಗಳನ್ನ ಮಾಡಿದ್ರೆ ಅನ್ನಪೂರ್ಣೆ ಕೋಪಗೊಳ್ಳುತ್ತಾಳೆ . ಹಾಗಾಗಿ ನೀವು ಅಪ್ಪಿ ತಪ್ಪಿಯೂ ಅಡುಗೆ ಕೋಣೆಯಲ್ಲಿ ಈ ತಪ್ಪುಗಳನ್ನ ಮಾಡಲೇಬೇಡಿ. ಮಾಡಿದ್ರೆ ಬಡತನ ಖಚಿತ.
ಹೆಚ್ಚಾಗಿ ಜನರು ಅಡುಗೆ ಮಾಡುವಾಗ ರುಚಿಯನ್ನು ನೋಡ ಪದೇ ಪದೇ ಆಹಾರವನ್ನು ಸೇವಿಸುತ್ತಲೇ ಇರುತ್ತಾರೆ. ಆದ್ರೆ ಹೀಗೆ ಮಾಡೋದ್ರಿಂದ ಅನ್ನಪೂರ್ಣೇಶ್ವರಿಗೆ ಕೋಪ ಬರುತ್ತೆ. ಇದ್ರಿಂದ ಮನೆಯಲ್ಲಿ ಬಡತನ ಶುರುವಾಗುತ್ತೆ.
ವಾಸ್ತು ಪ್ರಕಾರ ಅಡುಗೆ ಕೋಣೆಯಲ್ಲಿ ಅಪ್ಪಿ ತಪ್ಪಿಯೂ ಚಪ್ಪಲ್ ಧರಿಸಿ ಅಡುಗೆ ಮಾಡಬೇಡಿ. ಇದ್ರಿಂದ ಅನ್ನಪೂರ್ಣೇಶ್ವರಿ ಕೋಪಗೊಳ್ಳುತ್ತಾಳೆ, ಇದ್ರಿಂದ ನಿಮ್ಮ ಆರ್ಥಿಕ ಸ್ಥಿತಿ ಕುಸಿಯುತ್ತಾ ಬರುತ್ತೆ.
ಹೆಚ್ಚಾಗಿ ಏನಾಗುತ್ತೆ, ಜನ ತುಂಬಾ ಅವಸರದಲ್ಲಿರೋವಾಗ ಅಡುಗೆ ಕೋಣೆಯಲ್ಲಿಯೇ ಊಟ ಮಾಡ್ತಾರೆ. ಇದು ದೊಡ್ಡ ತಪ್ಪು, ಇದರಿಂದ ಮನೆಯ ಸುಖ ಶಾಂತಿ ಎಲ್ಲವೂ ನಷ್ಟವಾಗುತ್ತೆ. ಅಡುಗೆ ಕೋಣೆಯಲ್ಲಿರುವ ಪೈಪ್ ಹಾಳಾಗಿದ್ದರೆ, ಅದನ್ನ ಕೂಡಲೇ ಸರಿ ಮಾಡಿ. ಯಾಕಂದ್ರೆ ಅಡುಗೆ ಕೋಣೆಯಲ್ಲಿರುವ ಟ್ಯಾಪ್ ನಿಂದ ನೀರು ಟಪ್ ಟಪ್ ಎಂದು ಶಬ್ಧ ಮಾಡುತ್ತಾ ಬೀಳೋದು ಅಶುಭ.
ಅಡುಗೆ ಕೋಣೆಯಲ್ಲಿ ಯಾವತ್ತೂ ಎಂಜಲು ಪಾತ್ರೆಗಳನ್ನು ಹಾಗೆ ಇಟ್ಟು ಬರಬೇಡಿ. ಅವುಗಳನ್ನ ಕ್ಲೀನ್ ಮಾಡಿಟ್ಟೇ ಬನ್ನಿ. ಯಾಕಂದ್ರೆ ಅಡುಗೆ ಕೋಣೆ ಯಾವಾಗ್ಲೂ ಶುಚಿಯಾಗಿರಬೇಕು. ಹಾಗಿದ್ರೆ ಮಾತ್ರ ತಾಯಿ ಲಕ್ಷ್ಮೀ ಅಲ್ಲಿ ವಾಸ ಮಾಡ್ತಾಳೆ.
ಮನೆಯವರ ಒಳಿತಿಗಾಗಿ ಯಾವಾಗಲೂ ಅಡುಗೆ ಕೋಣೆಯನ್ನು ಶುದ್ಧವಾಗಿರಿಸಿ, ಜೊತೆಗೆ ಗಂಗಾ ಜಲದಿಂದ ಅಡುಗೆ ಕೋಣೆ ಕ್ಲೀನ್ ಮಾಡಿ. ಅಷ್ಟೇ ಅಲ್ಲ ಮನೆಯವರಿಗೆ ಅಡುಗೆ ನೀಡುವ ಮುನ್ನ ಅನ್ನಪೂರ್ಣೇಶ್ವರಿಗೆ ನೈವೇದ್ಯ ನೀಡೋದನ್ನ ಮರಿಬೇಡಿ.
Leave a Comment