ಗ್ರಾಹಕರಿಗೆ ಕೆಎಂಎಫ್ ಗುಡ್ ನ್ಯೂಸ್; ಶೀಘ್ರದಲ್ಲೇ ಮಾರುಕಟ್ಟೆಗೆ ನಂದಿನಿ ಇಡ್ಲಿ, ದೋಸೆ ಹಿಟ್ಟು

Nandini Idli Dosa
Spread the love

ನ್ಯೂಸ್ ಆ್ಯರೋ: ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ರುಚಿ ನೀವು ಬಲ್ಲಿರಿ. ಹಾಲು, ಮೊಸರು ಮಾತ್ರವಲ್ಲದೇ ಇದರಿಂದ ತಯಾರಿಸಿದ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ಬ್ರಾಂಡ್‌ ಅಡಿ ನೀಡುತ್ತಾ ಬಂದಿದೆ. ಅದರಲ್ಲೂ ಕಾಲಕಾಲಕ್ಕೆ ಹೊಸ ಉತ್ಪನ್ನಗಳನ್ನು ನಂದಿನಿ ಮೂಲಕ ಪರಿಚಯಿಸಲಾಗುತ್ತಿದೆ.

ಈಗ ಹಾಲು ಮಹಾಮಂಡಳವು ಹೊಸ ಉತ್ಪನ್ನವೊಂದನ್ನು ಪರಿಚಯಿಸಲು ಮುಂದಾಗಿದೆ. ಅದು ತನ್ನ ನಂದಿನಿ ಬ್ರಾಂಡ್ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬೆಂಗಳೂರಿನಲ್ಲಿ ಪರಿಚಯಿಸಲು ಸಜ್ಜಾಗಿದೆ. ಸದ್ಯವೇ ಬೆಂಗಳೂರು ಮಾರುಕಟ್ಟೆಯಲ್ಲಿ ನಂದಿನಿ ಇಡ್ಲಿ ಹಾಗೂ ದೋಸೆ ಹಿಟ್ಟು ಸಿಗಲಿದೆ.

ಮನಿಕಂಟ್ರೋಲ್ ವರದಿಯ ಪ್ರಕಾರ, ಹಿಟ್ಟು 450-ಗ್ರಾಂ ಮತ್ತು 900-ಗ್ರಾಂ ಪ್ಯಾಕ್‌ಗಳಲ್ಲಿ ಲಭ್ಯವಿರಲಿದೆ. ಅದರ ಹಾಲೊಡಕು ಪ್ರೋಟೀನ್ ಬೇಸ್‌ಗಿತ ವಿಶಿಷ್ಟವಾಗಿರುತ್ತದೆ. ಇದು ರುಚಿ ಮತ್ತು ವಿನ್ಯಾಸ ಎರಡನ್ನೂ ಹೆಚ್ಚಿಸಲಿದೆ ಎನ್ನುವುದು ಕೆಎಂಎಫ್‌ ನೀಡಿರುವ ಅಭಯ.́

ಶೀಘ್ರವೇ ದರ ನಿಗದಿಪಡಿಸಲಾಗುವುದು. ಮುಖ್ಯಮಂತ್ರಿಯವರು ಸಮಯ ನೀಡಿದ ನಂತರ ಉತ್ಪನ್ನಗಳ ಬಿಡುಗಡೆಗೆ ದಿನಾಂಕ ನಿಗದಿ ಮಾಡಲಾಗುವುದು ಎನ್ನಲಾಗಿದೆ. ಬೆಂಗಳೂರು ನಂತರ ಎರಡನೇ ಹಂತದಲ್ಲಿ ರಾಜ್ಯಾದ್ಯಂತ ನಂದಿನಿ ದೋಸೆ, ಇಡ್ಲಿ ಹಿಟ್ಟು ಮಾರಾಟ ವಿಸ್ತರಿಸಲಾಗುವುದು ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *