ಕುತ್ತಾರು ಕೊರಗಜ್ಜ ಕ್ಷೇತ್ರದ ಕೋಲದಲ್ಲಿ ಕತ್ರಿನಾ ಕೈಫ್, ಕೆ.ಎಲ್ ರಾಹುಲ್, ಸುನಿಲ್ ಶೆಟ್ಟಿ ಫ್ಯಾಮಿಲಿ ಭಾಗಿ – ಕೊರಗಜ್ಜನ ಕಟ್ಟೆಯ ಹೊರಗೆ ನಿಂತೇ ಕೋಲ ವೀಕ್ಷಿಸಿದ ಕತ್ರಿನಾ
ನ್ಯೂಸ್ ಆ್ಯರೋ : ಕಾರಣಿಕ ಕ್ಷೇತ್ರ ಕುತ್ತಾರು ಕೊರಗಜ್ಜನ ಕಟ್ಟೆಯಲ್ಲಿ ಕಳೆದ ರಾತ್ರಿ ನಡೆದ ಹರಕೆಯ ಕೋಲದಲ್ಲಿ ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್, ಕ್ರಿಕೆಟಿಗ ಕೆ.ಎಲ್. ರಾಹುಲ್ ಹಾಗೂ ನಟ ಸುನಿಲ್ ಶೆಟ್ಟಿ ಕುಟುಂಬ ಭಾಗಿಯಾಗಿದ್ದು, ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ಸ್ಟಾರ್ ಗಳೇ ಕೇಳಿಕೊಂಡಿದ್ದರಿಂದ ಸ್ಟಾರ್ ಗಳ ಭೇಟಿ ವೇಳೆ ಜನಸಂದಣಿ ಕಾಣದೇ ಸುಸೂತ್ರವಾಗಿ ಕೋಲ ನೆರವೇರಿದೆ.
ಬಾಲಿವುಡ್ ನಟಿ ಕತ್ರಿನಾ ಕೈಫ್, ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆಧ್ಯಾ ಶೆಟ್ಟಿ, ಮ್ಯಾಟ್ರಿಕ್ಸ್ ಎಂಟರ್‌ಟೈನ್‌ಮೆಂಟ್‌ನ ರೇಷ್ಮಾ ಶೆಟ್ಟಿ, ಕತ್ರಿನಾ ಪತಿ ವಿಕಿ ಕೌಶಲ್ ಹಾಗೂ ವಿ.ಎಂ. ಕಾಮತ್ ಸಹಿತ 9 ಮಂದಿಯ ಕೋಲವನ್ನು ಎರಡು ತಿಂಗಳ ಹಿಂದೆಯೇ ಬರೆಸಲಾಗಿತ್ತು. ಆದರೆ ವಿಕಿ ಕೌಶಲ್ ನಿನ್ನೆಯ ಕೋಲಕ್ಕೆ ಹಾಜರಿರಲಿಲ್ಲ.
ನಟಿ ಕತ್ರಿನಾ ಕೈಫ್ ಅವರು ಮುಸ್ಲಿಂ ಧರ್ಮದವರಾದರೂ ಹಿಂದೂ ವ್ಯಕ್ತಿ ವಿಕ್ಕಿ ಕೌಶಲ್ ಅವರನ್ನು ವರಿಸಿದ್ದಾರೆ. ಈ ಕಾರಣಕ್ಕೆ ಅವರು ಹಿಂದೂ ಹಾಗೂ ಮುಸ್ಲಿಂ ಧರ್ಮ ಎರಡನ್ನೂ ಆಚರಿಸುತ್ತಾರೆ. ಅವರಿಗೆ ಹಿಂದೂ ದೇವರ ಬಗ್ಗೆಯೂ ಭಕ್ತಿ ಇದೆ. ಜುಲೈ 16ರಂದು ಅವರ ಜನ್ಮದಿನ. ಬರ್ತ್ಡೇಗೂ ಮುನ್ನ ಅವರು ಮಂಗಳೂರಿನ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.
ಕೊರಗಜ್ಜನ ಕುರಿತು ಬಾಲಿವುಡ್ಮಂದಿಗೆ ವಿಶೇಷ ನಂಬಿಕೆ ಸೃಷ್ಟಿ ಆಗಿದೆ. ಇದಕ್ಕೆ ಕಾರಣ ಆಗಿರೋದು ಬಾಲಿವುಡ್ನಲ್ಲಿ ಇರುವ ಕರಾವಳಿ ಮೂಲದ ಮಂದಿ. ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ ಮೊದಲಾದವರು ಆಗಾಗ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ, ಬಾಲಿವುಡ್‌ನ ಉಳಿದವರಿಗೂ ಈ ಬಗ್ಗೆ ನಂಬಿಕೆ ಮೂಡಿದೆ.
ಕತ್ರಿನಾ ಕೈಫ್ ಜೊತೆ ಸುನೀಲ್ ಶೆಟ್ಟಿ ಫ್ಯಾಮಿಲಿ ಕೂಡ ಇಲ್ಲಿಗೆ ಆಗಮಿಸಿದೆ. ಸುನೀಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ, ಪುತ್ರಿ ಆತಿಯಾ ಶೆಟ್ಟಿ ಹಾಗೂ ಅಳಿಯ ಕೆ.ಎಲ್. ರಾಹುಲ್ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಕೆ ಮಾಡಿದ್ದಾರೆ. ಸುನೀಲ್ ಶೆಟ್ಟಿ ಅವರು ಮಂಗಳೂರು ಮೂಲದವರು. ಅವರು ಆಗಾಗ ಇಲ್ಲಿಗೆ ಭೇಟಿ ನೀಡುತ್ತಾರೆ.
ಕೊರಗಜ್ಜನ ಕುರಿತು ಬಾಲಿವುಡ್ ಮಂದಿಗೆ ವಿಶೇಷ ನಂಬಿಕೆ ಇದೆ. ಇದಕ್ಕೆ ಕಾರಣ ಆಗಿರೋದು ಬಾಲಿವುಡ್ನಲ್ಲಿ ಇರುವ ಕರಾವಳಿ ಮೂಲದ ಮಂದಿ. ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ ಮೊದಲಾದವರು ಆಗಾಗ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ, ಬಾಲಿವುಡ್ ನ ಉಳಿದವರಿಗೂ ಈ ಬಗ್ಗೆ ನಂಬಿಕೆ ಮೂಡಿದೆ.
ಆದರೆ ಕೊರಗಜ್ಜನ ಕಟ್ಟೆಯ ಒಳಗೆ ಮಹಿಳೆಯರಿಗೆ ರಾತ್ರಿ ಹೊತ್ತು ಪ್ರವೇಶ ಇಲ್ಲದ ಕಾರಣ ಕತ್ರಿನಾ, ರೇಷ್ಮಾ ಮತ್ತು ಆಧ್ಯಾ ಅವರು ದೈವಸ್ಥಾನದ ಕಚೇರಿಯಲ್ಲೇ ಉಳಿದು ಹೊರಗಿನಿಂದಲೇ ಕೋಲವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು.
Leave a Comment