Mangalore : ವಿದೇಶಿ ಮಹಿಳೆಯ ಸೋಗಿನಲ್ಲಿ ಫೇಸ್‌ಬುಕ್‌ ನಲ್ಲಿ ಪರಿಚಯ – ಎಂಟು ಲಕ್ಷಕ್ಕೂ ಅಧಿಕ ವಂಚನೆ, ಪ್ರಕರಣ ದಾಖಲು

Mangalore : ವಿದೇಶಿ ಮಹಿಳೆಯ ಸೋಗಿನಲ್ಲಿ ಫೇಸ್‌ಬುಕ್‌ ನಲ್ಲಿ ಪರಿಚಯ – ಎಂಟು ಲಕ್ಷಕ್ಕೂ ಅಧಿಕ ವಂಚನೆ, ಪ್ರಕರಣ ದಾಖಲು

ನ್ಯೂಸ್ ಆ್ಯರೋ : ಫೇಸ್‌ಬುಕ್‌ ಮೆಸೆಂಜರ್ ನಲ್ಲಿ ವಿದೇಶಿ ಮಹಿಳೆಯ ಹೆಸರಿನಿಂದ ಪರಿಚಯಿಸಿಕೊಂಡು 8.42 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ರಿ ದೂರುದಾರರಿಗೆ ಫೇಸ್‌ಬುಕ್‌ ಖಾತೆಯ ಮೂಲಕ ಅಪರಿಚಿತ ಮಹಿಳೆ ಮೆಸೆಂಜರ್‌ನಲ್ಲಿ ಸಂದೇಶ ಕಳುಹಿಸಿ ವಾಟ್ಸ್‌ಆಯಪ್‌ ನಂಬರ್‌ ಪಡೆದುಕೊಂಡಿದ್ದಳು.

ಅನಂತರ ವಾಟ್ಸ್‌ಆಯಪ್‌ಗೆ ಸಂದೇಶಗಳನ್ನು ಕಳುಹಿಸಿ ತಾನು ವಿದೇಶದಲ್ಲಿರುವುದಾಗಿಯೂ ಭಾರತಕ್ಕೆ ಬಂದು ಭೇಟಿ ಮಾಡುವುದಾಗಿಯೂ ತಿಳಿಸಿದ್ದಳು.

ಅನಂತರ ಸೆ. 21ರಂದು ಕರೆ ಮಾಡಿ ತಾನು ಭಾರತಕ್ಕೆ ಬಂದಿದ್ದು ತನ್ನ ಬಳಿ 70,000 ವಿದೇಶಿ ಕರೆನ್ಸಿ ಇದ್ದು ಅದನ್ನು ವಿಮಾನ ನಿಲ್ದಾಣದ ಕಸ್ಟಮ್‌ ಅಧಿಕಾರಿ ವಶಪಡಿಸಿಕೊಂಡಿದ್ದಾನೆ. ಅದನ್ನು ಬಿಡಿಸಲು ಹಣ ಪಾವತಿಸಬೇಕಾಗಿದೆ ಎಂದಳು. ಅಲ್ಲದೆ ಕಸ್ಟಮ್‌ ಅಧಿಕಾರಿಯೆಂದು ಬಿಂಬಿಸಿ ಬೇರೊಂದು ವ್ಯಕ್ತಿಯ ಮೂಲಕ ಮಾತನಾಡಿಸಿದ್ದಳು.

ಇದನ್ನು ನಂಬಿದ ದೂರುದಾರರು ಮಹಿಳೆ ನೀಡಿದ ಬ್ಯಾಂಕ್‌ಗಳ ಖಾತೆಗೆ ಸೆ. 21ರಿಂದ 25ರ ವರೆಗೆ ಹಂತ ಹಂತವಾಗಿ ಒಟ್ಟು 8,43,050 ರೂ. ವರ್ಗಾಯಿಸಿದ್ದಾರೆ. ಅನಂತರವೂ ಮಹಿಳೆ ಹೆಚ್ಚಿನ ಹಣ ಪಾವತಿಸುವಂತೆ ತಿಳಿಸಿದಾಗ ಅನುಮಾನಗೊಂಡು ತನ್ನ ಮನೆಯವರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದ್ದು, ಸದ್ಯ ದೂರು ನೀಡಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *