Mangalore : ಕಮೀಷನರ್ ಕುಲದೀಪ್ ವರ್ಗಾವಣೆ ಹಿಂದಿದ್ಯಾ ಕಾನೂನು ಲೆಕ್ಕಾಚಾರ? – ಮಂಗಳೂರು ಕಮೀಷನರ್ ನೇಮಕದ ವೇಳೆ ಎಡವಟ್ಟು ಮಾಡಿತ್ತಾ ಅಂದಿನ ಬಿಜೆಪಿ ಸರ್ಕಾರ?

Mangalore : ಕಮೀಷನರ್ ಕುಲದೀಪ್ ವರ್ಗಾವಣೆ ಹಿಂದಿದ್ಯಾ ಕಾನೂನು ಲೆಕ್ಕಾಚಾರ? – ಮಂಗಳೂರು ಕಮೀಷನರ್ ನೇಮಕದ ವೇಳೆ ಎಡವಟ್ಟು ಮಾಡಿತ್ತಾ ಅಂದಿನ ಬಿಜೆಪಿ ಸರ್ಕಾರ?

ನ್ಯೂಸ್ ಆ್ಯರೋ : ರಾಜ್ಯ ಸರ್ಕಾರ ಆಡಳಿತ ಇಲಾಖೆಯ ಮೇಜರ್ ಸರ್ಜರಿ ನಿನ್ನೆಯಷ್ಟೇ ಮಾಡಿದ್ದು, ರಾಜ್ಯದ 135 IPS ಅಧಿಕಾರಿಗಳ ವರ್ಗಾವಣೆ ಮಾಡಿತ್ತು. ಈ ಪೈಕಿ ಮಂಗಳೂರು ‌ನಗರ ಪೊಲೀಸ್ ಕಮೀಷನರ್ ಕುಲದೀಪ್. ಆರ್ ಜೈನ್ ಅವರ ವರ್ಗಾವಣೆ ಕುರಿತಂತೆ ಸಾರ್ವಜನಿಕವಾಗಿ ಚರ್ಚೆಗಳಾಗಿದ್ದು, ಈ ಕುರಿತ ವರದಿ ಇಲ್ಲಿದೆ.

ಕುಲದೀಪ್ ಕುಮಾರ್ ಜೈನ್ ಅವರು ಮಾಜಿ ಮಂಗಳೂರು ನಗರ ಕಮೀಷನರ್ ಎನ್. ಶಶಿಕುಮಾರ್ ವರ್ಗಾವಣೆ ಆದ ಬಳಿಕ ನಿಯುಕ್ತಿಗೊಂಡ ಅಧಿಕಾರಿ. ಬೆಂಗಳೂರಿನ ಟ್ರಾಫಿಕ್ ಡಿಸಿಪಿಯಾಗಿದ್ದವರನ್ನು ಏಕಾಏಕಿ ಮಂಗಳೂರಿನ ಕಮೀಷನರ್ ಆಗಿ ಅಂದಿನ ಬಿಜೆಪಿ ಸರ್ಕಾರ ವರ್ಗಾವಣೆ ಮಾಡಿದ್ದು ಹಲವು ಹಿರಿಯ ಅಧಿಕಾರಿಗಳ ಹುಬ್ಬೇರುವಂತೆ ಮಾಡಿತ್ತು.

ಎನ್‌.ಶಶಿಕುಮಾರ್ ಎರಡು ವರ್ಷಕ್ಕೂ ಅಧಿಕ ಕಾಲ ಮಂಗಳೂರಿನ ಕಮೀಷನರ್ ಆಗಿ ಉತ್ತಮ ಆಡಳಿತ ನೀಡಿದ್ದರೂ ಕೊನೆಗೆ ಭ್ರಷ್ಟಾಚಾರ, ಕೆಲ ಆಡಳಿತಾತ್ಮಕ ವಿಚಾರಗಳಲ್ಲಿ ದ್ವಂದ್ವ ನಿಲುವು ತಳೆದಿದ್ದರಿಂದ ಆಗಿನ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರ ಕೆಂಗಣ್ಣಿಗೆ ನೇರವಾಗಿ ಗುರಿಯಾಗಿದ್ದರು.

ಭ್ರಷ್ಟಾಚಾರದ ಕೂಗು ವಿಪರೀತವಾಗಿ ಎದ್ದಾಗಲೇ ಖುದ್ದು ಅಲೋಕ್ ಕುಮಾರ್ ಮಂಗಳೂರಿಗೆ ಆಗಮಿಸಿ ಸಾರ್ವಜನಿಕ ಜನಾಭಿಪ್ರಾಯ ಸಂಗ್ರಹಕ್ಕೂ ಮುಂದಾಗಿದ್ದು ಅಲ್ಲಿಯೂ ಕಮೀಷನರ್ ವಿರುದ್ಧ ಆಕ್ರೋಶ ಕೇಳಿಬಂದಿತ್ತು. ಅದಾದ ಬಳಿಕ ಶಶಿಕುಮಾರ್ ಅವರನ್ನು ರೈಲ್ವೇ ಇಲಾಖೆಗೆ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಕುಲದೀಪ್ ಅವರನ್ನು ನೇಮಿಸಲಾಗಿತ್ತು‌. ‌

ಅನೇಕರಿಗೆ ಗೊತ್ತಿಲ್ಲದ ವಿಚಾರವೆಂದರೆ ಮಂಗಳೂರು ಕಮೀಷನರ್ ಹುದ್ದೆಯು ಡಿಐಜಿ ಅಥವಾ ಐಜಿ ವರ್ಗದ ಅಧಿಕಾರಿಗಳಿಗೆ ಮಾತ್ರವೇ ನಿಗದಿಯಾದದ್ದಾಗಿತ್ತು. ಆದರೆ ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲಿ ಡಿಐಜಿ ಮತ್ತು ಐಜಿ ಎರಡು ವರ್ಗದ ಸ್ಥಾನವನ್ನು ನಿರ್ಲಕ್ಷಿಸಿ ಎಸ್ಪಿ ಸ್ಥಾನಮಾನದ, ಕೇವಲ ಎರಡು ವರ್ಷದ ಆಡಳಿತ ಅನುಭವವಿರುವ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ಇದೇ ರೀತಿ ರಾಜ್ಯ ಅನೇಕ ಭಾಗದಲ್ಲಿ ಕಾನೂನು ಮೀರಿ ಸ್ಥಾನ ನೀಡಲಾಗಿತ್ತು.

ಇದೀಗ ಕಾನೂನು ಮೀರಿ ನೀಡಿದ್ದ ಎಲ್ಲಾ ಹುದ್ದೆಗಳನ್ನು ತೆರವು ಮಾಡಿ, ಸರಿಯಾದ ಸ್ಥಾನ ಮಾನದ ಅಧಿಕಾರಗಳನ್ನೇ ನೇಮಿಸುವ ಪ್ರಕ್ರಿಯೆ ನಡೆದಿದೆ. ಮಂಗಳೂರಿನಲ್ಲಿ ಕೂಡ ಇದೇ ರೀತಿ ಆಗಿರುವುದು ಬೇರೆ ಯಾವುದೇ ಉದ್ದೇಶದಲ್ಲಿ ವರ್ಗಾವಣೆ ಮಾಡಿಲ್ಲ ಮತ್ತು ಕುಲ್ ದೀಪ್ ಕುಮಾರ್ ಜೈನ್ ಅವರು ಚುನಾವಣೆ ಸಮಯದಲ್ಲಿ ನಡೆದ ವರ್ಗಾವಣೆಯಾದ್ದರಿಂದ ಅವರು ಚುನಾವಣೆಯ ನಂತರ ವರ್ಗಾವಣೆ ಆಗಲೇ ಬೇಕಿತ್ತು. ಆದರೆ ದಕ್ಷ, ಸರಳ ವ್ಯಕ್ತಿತ್ವದ ಅಧಿಕಾರಿಯನ್ನೇ ಮಂಗಳೂರಿನ ಕಮೀಷನರ್ ಹುದ್ದೆ ನೇಮಿಸಿರುವುದು ನಿಜಕ್ಕೂ ಮಂಗಳೂರಿಗರಿಗೆ ಖುಷಿಯ ವಿಚಾರವೇ ಆಗಿದೆ.

ಮಂಗಳೂರಿನಂತಹ ದೊಡ್ಡ ಮತ್ತು ಸೂಕ್ಷ್ಮ ಪ್ರದೇಶಕ್ಕೆ ಇರುವ IG, DIG ಸ್ಥಾನಕ್ಕೆ ಸಂವಿಧಾನ ಮತ್ತು ಕಾನೂನು ವಿರೋಧವಾಗಿ ಎಸ್ಪಿ ಸ್ಥಾನಮಾನದ ಅಧಿಕಾರಿಯನ್ನು ನೇಮಿಸಿದ್ದೇ ಸರಿಯಲ್ಲವೆಂದು ಹಿರಿಯ ಅಧಿಕಾರಿಗಳೇ ಸ್ಪಷ್ಟನೆ ನೀಡಿದ್ದಾರೆ. ಆದರೂ ತಮಗಿರುವ ಉತ್ತಮ ಆಡಳಿತ ಗುಣಗಳಿಂದಾಗಿ, ಡ್ರಗ್ಸ್ ಮಾಫಿಯಾ, ಮರಳು ಮಾಫಿಯಾ ಸೇರಿದಂತೆ ಹಲವು ಅಕ್ರಮಗಳ ವಿರುದ್ಧ ಸಮರ ಸಾರುವ ಮೂಲಕ ಕುಲದೀಪ್ ಜೈನ್ ವೇಗವಾಗಿ ಜನಬೆಂಬಲ ಪಡೆದಿರುವುದು ಉತ್ತಮ ಬೆಳವಣಿಗೆ.

ಹಾಗಾಗಿ ಅವರ ವರ್ಗಾವಣೆ ತಡೆ ಹಿಡಿಯಬೇಕೆಂಬ ಕೂಗು ಕೂಡ ಜೋರಾಗಿಯೇ ಎದ್ದಿದೆ. ಆದರೆ ಇದು ಕಾನೂನು ಮೀರಿ ನೇಮಿಸಿದ ಹುದ್ದೆ ಆಗಿದೆ. ಈ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಡಿಐಜಿ ಸ್ಥಾನ ಭಡ್ತಿ ಪಡೆದು, ಕುಲದೀಪ್ ಕುಮಾರ್ ಜೈನ್ ಮರಳಿ ಮಂಗಳೂರು ಕಮೀಷನರ್ ಆಗಿ ಆಡಳಿತ ನಡೆಸುವ ಕಾಲ ಕೂಡಿಬರಲೆಂಬ ಆಶಯ ಮಂಗಳೂರಿನ ನಾಗರೀಕರದ್ದು.

Related post

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು ರದ್ದು, ಹೊಸ ಟಿಸಿಎಸ್ ನಿಯಮ ಜಾರಿ

ಅಕ್ಟೋಬರ್‌ನಲ್ಲಿ ಹಣಕಾಸಿನ ನಿಯಮಗಳಲ್ಲಿ ಭಾರೀ ಬದಲಾವಣೆ – ₹ 2000 ನೋಟು…

ನ್ಯೂಸ್‌ ಆ್ಯರೋ : ತಿಂಗಳಿಗೊಮ್ಮೆ ಹಣಕಾಸಿನ ವ್ಯವಹಾರಗಳ ನಿಯಮಗಳಲ್ಲಿ ಬದಲಾವಣೆ ಆಗುವುದು ಸಹಜ ಪ್ರಕ್ರಿಯೆ. ಇದೀಗ ಅಕ್ಟೋಬರ್‌ ತಿಂಗಳು ಪ್ರಾರಂಭಕ್ಕೆ ಕೆಲ ದಿನವಿರುವಾಗಲೇ ಹಣಕಾಸಿಗೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ…
ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!! – ಕೋಟ್ಯಾಂತರ ರೂಪಾಯಿ ಒಡೆಯ ಈ ತಾತ ಮಾಡೋದೇನು?

ಏನೂ ಕೆಲಸ ಮಾಡದೇ ಈ ತಾತ ವರ್ಷಕ್ಕೆ 6.5 ಲಕ್ಷ ದುಡೀತಾರೆ..!!…

ನ್ಯೂಸ್ ಆ್ಯರೋ : ಎಷ್ಟು ದುಡಿದರೂ ವರ್ಷಕ್ಕೆ 5- 6 ಲಕ್ಷ ಸಂಪಾದಿಸೋದೇ ಕಷ್ಟ ಎನ್ನುವವರ ಮಧ್ಯೆ ಏನೂ ಕೆಲಸವಿಲ್ಲದ ವೃದ್ಧರೊಬ್ಬರು 10 ಕೋಟಿ ರೂ. ಆದಾಯ ಗಳಿಸಿದ್ದಾರೆ.…
ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ ಮೇಲೆ ಕಾಳಜಿ ಇರುವವರು ಈ ವರದಿ ಓದಿ..

ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ? – ಆರೋಗ್ಯದ…

ನ್ಯೂಸ್ ಆ್ಯರೋ : ಕರಿಬೇವಿನ ಎಲೆಗಳನ್ನು ಭಾರತೀಯ ಅಡುಗೆಮನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದ ಬಹುತೇಕ ಖಾದ್ಯಗಳಲ್ಲಿ ಕರಿಬೇವು ಮುಖ್ಯ. ಕರಿಬೇವಿನ ಎಲೆಗಳು ಯಾವುದೇ ಆಹಾರದ ರುಚಿಯನ್ನು…

Leave a Reply

Your email address will not be published. Required fields are marked *