ಮಂಗಳೂರು : ಕರಾವಳಿಯಲ್ಲಿ ವ್ಯಾಪಾರ ದಂಗಲ್ – ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಉದ್ಘಾಟಿಸಿದ ಕಟೀಲ್ ಹೇಳಿದ್ದೇನು?

ಮಂಗಳೂರು : ಕರಾವಳಿಯಲ್ಲಿ ವ್ಯಾಪಾರ ದಂಗಲ್ – ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಉದ್ಘಾಟಿಸಿದ ಕಟೀಲ್ ಹೇಳಿದ್ದೇನು?

ನ್ಯೂಸ್ ಆ್ಯರೋ : ಹಿಂದೂ ದೇವಸ್ಥಾನಗಳಲ್ಲಿ ಹಿಂದೂಗಳೇ ವ್ಯಾಪಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಅಸ್ತಿತ್ವಕ್ಕೆ ಬಂದಿದೆ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸಂಘಟನೆ ಅಧಿಕೃತವಾಗಿ ಲೋಕಾರ್ಪಣೆಗೊಂಡಿದ್ದು, ಹಿಂದೂ ದೇವಸ್ಥಾನಗಳಲ್ಲಿ ಹಿಂದೂಗಳು ಮಾತ್ರವೇ ವ್ಯಾಪಾರ ಮಾಡಬೇಕು. ಈ ನಿಟ್ಟಿನಲ್ಲಿ ನಿಮ್ಮ ಜೊತೆ ನಾನಿದ್ದೇನೆ” ಎಂದು ವ್ಯಾಪಾರಿಗಳಿಗೆ ಭರವಸೆ ನೀಡಿದ್ದಾರೆ.

ಕಳೆದ ವರ್ಷ ಕರಾವಳಿ ಭಾಗದಲ್ಲಿ ಹಿಂದೂ ಜಾತ್ರಾ ಮಹೋತ್ಸವಗಳಲ್ಲಿ ಹಿಂದೂಗಳು ಮಾತ್ರ ವ್ಯಾಪಾರ ಮಾಡಬೇಕು. ಅನ್ಯಮತೀಯರಿಗೆ ಅವಕಾಶ ನೀಡಬಾರದು ಎಂಬ ವಿವಾದ ಏರ್ಪಟ್ಟಿತ್ತು. ಕರಾವಳಿ ಭಾಗದ ಹಲವು ಜಾತ್ರೆಗಳಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಎಂಬ ಬ್ಯಾನರ್ ಕೂಡ ಅಳವಡಿಸಲಾಗಿತ್ತು.

ನಂತರ ಹಿಂದೂ ವ್ಯಾಪಾರಸ್ಥರು ಒಟ್ಟೂಗೂಡಿ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತು. ಬಳಿಕ ರಾಜ್ಯದೆಲ್ಲೆಡೆ ಕಾಡಿಚ್ಚಿನಂತೆ ಅಭಿಯಾನ ಹರಡಿತ್ತು. ಇದೀಗ ಬಿಜೆಪಿ ಅಧ್ಯಕ್ಷರು ಸಂಘಟನೆಯನ್ನು ಅಧಿಕೃತವಾಗಿ ಉದ್ಘಾಟಿಸುವ ಮೂಲಕ ವಿವಾದ ಮತ್ತೊಮ್ಮೆ ಭುಗಿಲೇಳುವಂತಾಗಿದೆ.

ಹಿಂದೂ ವ್ಯಾಪಾರಸ್ಥರಿಗೆ ಠಕ್ಕರ್

ಈ ಹಿಂದೆ ಕರಾವಳಿಯ ಹಲವು ಜಾತ್ರಾ ಮಹೋತ್ಸವಗಳಲ್ಲಿ ಹಿಂದೂ ವ್ಯಾಪರಸ್ಥರಿಗೆ ಮಾತ್ರ ಅವಕಾಶ ಎಂಬ ಬ್ಯಾನರ್ ಅಳವಡಿಸಿದ ವೇಳೆ ಹಿಂದೂ ವ್ಯಾಪಾರಸ್ಥರ ಸಂಘಕ್ಕೆ ಠಕ್ಕರ್ ಕೊಡುವ ಕೊಡುವ ಸಲುವಾಗಿ ‘ಜಾತ್ರಾ’ (ದೇವಸ್ಥಾನಗಳ ಜಾತ್ರೆ) ವರ್ತಕರ ಸಮನ್ವಯ ಸಮಿತಿ ಅಸ್ತಿತ್ವಕ್ಕೆ ಬಂದಿತ್ತು. ಈ ಸಂಘಟನೆಯಲ್ಲಿ ಹಿಂದೂ ,ಮುಸ್ಲಿಂ ಕ್ರೈಸ್ತ ವ್ಯಾಪಾರಸ್ಥರು ಒಳಗೊಂಡಿದ್ದರು. ಈ ಸಂಘಟನೆ ಜಾತ್ರಾ ಮಹೋತ್ಸವದಲ್ಲಿ ಎಲ್ಲಾ ವರ್ಗದವರಿಗೂ ಅವಕಾಶ ನೀಡಲು ಆಗ್ರಹಿಸಿತ್ತು.

Related post

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ – ಚಾಮರಾಜನಗರ, ಹಾಸನ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು

Loksabha Results : ಗೆಲುವಿನ ಖಾತೆ ತೆರೆದ ಬಿಜೆಪಿ-ಜೆಡಿಎಸ್ ಮೈತ್ರಿಕೂಟ –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಗೆಲುವಿನ ಖಾತೆ ತೆರೆದಿದೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಅವರು ಒಂದು ಲಕ್ಷಕ್ಕೂ ಅಧಿಕ…
Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? – ದಕ್ಷಿಣ ಕನ್ನಡ, ಬೆಂ.ಗ್ರಾಮಾಂತರ ಉಡುಪಿಯಲ್ಲಿ ಬಿಜೆಪಿ ಭರ್ಜರಿ ಮುನ್ನಡೆ

Loksabha Results : ಸರಳ ಬಹುಮತ ಗಳಿಸುವಲ್ಲಿ ಎಡವುತ್ತಾ ಬಿಜೆಪಿ? –…

ನ್ಯೂಸ್ ಆ್ಯರೋ : ಲೋಕಸಭಾ ಚುನಾವಣೆಯ ಎಣಿಕೆ ಕಾರ್ಯ ಇನ್ನೂ ಮುಂದುವರಿದಿದ್ದು, ಆಡಳಿತಾರೂಢ ಬಿಜೆಪಿ ಪಕ್ಷ ಸರಳ ಬಹುಮತದ ಕೊರತೆ ಎದುರಿಸುವ ಆತಂಕಕ್ಕೆ ಸಿಲುಕಿದೆ. ಎಲ್ಲಾ ಮತಗಟ್ಟೆ ಸಮೀಕ್ಷೆಗಳನ್ನು…
ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 04-06-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಬಸುರಿಯು ನೆಲದ ಮೇಲೆ ನಡೆದುಕೊಂಡು ಹೋಗುವಾಗ ವಿಶೇಷ ಕಾಳಜಿ ವಹಿಸಬೇಕು. ಇನ್ನೂ ಸಂಬಳ ಪಡೆಯದವರು, ಇಂದು ಅವರು ಹಣಕ್ಕಾಗಿ ತುಂಬಾ ಚಿಂತೆ ಮಾಡಬಹುದು ಮತ್ತು ನಿಮ್ಮ ಸ್ನೇಹಿತರಿಂದ ಸಾಲವನ್ನು…

Leave a Reply

Your email address will not be published. Required fields are marked *