ಕಟೀಲು : ಹೆತ್ತ ತಾಯಿಯನ್ನೇ ಅತ್ಯಾಚಾರಗೈದು ಕೊಲೆಗೈದ ಪಾಪಿ ಪುತ್ರ – ಗಾಂಜಾ ವ್ಯಸನಿಯ ಹೀನ ಕೃತ್ಯ ಪೋಲಿಸರ ತನಿಖೆಯಲ್ಲಿ ಬಹಿರಂಗ

ಕಟೀಲು : ಹೆತ್ತ ತಾಯಿಯನ್ನೇ ಅತ್ಯಾಚಾರಗೈದು ಕೊಲೆಗೈದ ಪಾಪಿ ಪುತ್ರ – ಗಾಂಜಾ ವ್ಯಸನಿಯ ಹೀನ ಕೃತ್ಯ ಪೋಲಿಸರ ತನಿಖೆಯಲ್ಲಿ ಬಹಿರಂಗ

ನ್ಯೂಸ್ ಆ್ಯರೋ : ಕಟೀಲು ಸಮೀಪ ಹೆತ್ತ ತಾಯಿಯನ್ನು ಸ್ವಂತ ಮಗನೇ ಕೊಂದ ಪ್ರಕರಣದ ಹಿಂದಿನ ಕಾರಣ ಕೊನೆಗೂ ಬಯಲಾಗಿದೆ. ಕೊಲೆಗೂ ಮುನ್ನ ಮಗನೇ ತಾಯಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದು, ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅತ್ಯಾಚಾರಗೈದು ಕೊಲೆ ಕೃತ್ಯ ಎಸಗಿರುವ ಶಾಕಿಂಗ್ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಕಟೀಲು ಸಮೀಪದ ಗಿಡಿಗೆರೆ ನಿವಾಸಿ ರತ್ನಾ ಶೆಟ್ಟಿ (56) ಎಂಬವರನ್ನು ಅವರ ಸ್ವಂತ ಮಗ ರವಿರಾಜ್ ಶೆಟ್ಟಿ (33) ಅ.26ರ ಗುರುವಾರ ರಾತ್ರಿ ಕೊಲೆಗೈದು ಮನೆಗೆ ಬೀಗ ಹಾಕಿ ಕಿನ್ನಿಗೋಳಿಯ ವಸತಿಗೃಹದಲ್ಲಿ ಉಳಿದುಕೊಂಡಿದ್ದ. ಭಾನುವಾರ ಬೆಳಗ್ಗೆ ತಾಯಿ ನೆಲೆಸಿದ್ದ ಬಾಡಿಗೆ ಮನೆಯಲ್ಲಿ ನೊಣಗಳು ಮುತ್ತಿಕೊಂಡಿದ್ದು ಸ್ಥಳೀಯರು ನೋಡಿದಾಗ ರತ್ನಾ ಶೆಟ್ಟಿ ಸಾವನ್ನಪ್ಪಿದ್ದು ಕಂಡುಬಂದಿತ್ತು.

ಬಜ್ಜೆ ಪೊಲೀಸರು ಕೊಲೆ ಶಂಕೆಯಲ್ಲಿ ತನಿಖೆ ನಡೆಸಿದ್ದರು. ಮಗ ರವಿರಾಜ್ ಮೇಲೆ ಶಂಕೆ ಉಂಟಾಗಿ ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ತಾನೇ ಕೊಂದಿರುವುದು ಎಂದು ಒಪ್ಪಿಕೊಂಡಿದ್ದಾನೆ. ರತ್ನಾ ಅವರ ಪತಿ ದಯಾನಂದ ಶೆಟ್ಟಿ ಅವರು 7 ವರ್ಷದ ಹಿಂದೆ ಮೃತಪಟ್ಟಿದ್ದರು. ಬಳಿಕ ತಾಯಿ, ಮಗ ಇಬ್ಬರೇ ಮನೆಯಲ್ಲಿ ವಾಸವಾಗಿದ್ದರು.

ಆರೋಪಿ ರವಿ ಗಾಂಜಾ ವ್ಯಸನಿಯಾಗಿದ್ದು ಗಾಂಜಾ ಅಮಲಿನಲ್ಲಿ ಅತ್ಯಾಚಾರ ಎಸಗಿರಬಹುದೆಂದು ಶಂಕಿಸಲಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿ ಕೈಕಾಲುಗಳಿಗೆ ನೈಲಾನ್ ಹಗ್ಗದಿಂದ ಬಿಗಿದು ಅತ್ಯಾಚಾರವೆಸಗಿ ಕೊಲೆಗೈದಿರುವುದು ವಿಚಾರಣೆಯ ವೇಳೆ ದೃಢಪಟ್ಟಿದೆ.

ಆರೋಪಿ ರವಿರಾಜ್ ಶೆಟ್ಟಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದೆ. ಡ್ರಗ್ಸ್, ಗಾಂಜಾ ಸೇವನೆ ಹಾಗೂ ಅತ್ಯಾಚಾರ ಎಸಗಿರುವ ಬಗ್ಗೆ ವೈದ್ಯಕೀಯ ವರದಿ ಬಳಿಕವೇ ದೃಢಪಡಿಸಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಜಪೆ ಇನ್ಸ್ ಪೆಕ್ಟರ್ ಸಂದೀಪ್ ಮತ್ತು ಅವರ ತಂಡ ಆರೋಪಿಯನ್ನು ಬಂಧಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *