
Mangalore : ದಪ್ಪಗಿರುವ ಕಾರಣಕ್ಕೆ ಮಾನಸಿಕ ಖಿನ್ನತೆ – ಹಾಸ್ಟೆಲ್ ಮಹಡಿಯಿಂದ ಹಾರಿ MBBS ವಿದ್ಯಾರ್ಥಿನಿ ಆತ್ಮಹತ್ಯೆ
- ಕರಾವಳಿ
- November 13, 2023
- No Comment
- 53
ನ್ಯೂಸ್ ಆ್ಯರೋ : ಎಂಬಿಬಿಎಸ್ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎಜೆ ಮೆಡಿಕಲ್ ಕಾಲೇಜು ಆವರಣದಲ್ಲಿ ನಡೆದಿದೆ.
ಇಂದು ನಸುಕಿನ ಮೂರು ಗಂಟೆ ವೇಳೆಗೆ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡದ ಆರನೇ ಮಹಡಿಯಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದ ಪ್ರಕೃತಿ ಶೆಟ್ಟಿ(20) ಮೃತ ವಿದ್ಯಾರ್ಥಿನಿ.
ಪ್ರಾಥಮಿಕ ಮಾಹಿತಿ ಪ್ರಕಾರ, ದಪ್ಪಗಿದ್ದೇನೆ ಎಂದು ವಿದ್ಯಾರ್ಥಿನಿ ಮಾನಸಿಕ ಖಿನ್ನತೆಯಲ್ಲಿದ್ದಳು. ಇದೇ ಚಿಂತೆಯಲ್ಲಿ ಸಾವಿಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಇವರ ಕುಟುಂಬ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನೆಲೆಸಿದ್ದು ಪ್ರಕೃತಿ ಶೆಟ್ಟಿ ಹಾಸ್ಟೆಲ್ ನಲ್ಲಿ ಉಳಿದುಕೊಂಡು ಓದುತ್ತಿದ್ದರು. ತಂದೆ ಪ್ರಶಾಂತ ಶೆಟ್ಟಿ ಮತ್ತು ತಾಯಿ ಅಥಣಿಯಲ್ಲಿ ನೆಲೆಸಿದ್ದಾರೆ. ತಾಯಿ ಕಾರ್ಕಳ ಮೂಲದವರಾಗಿದ್ದು ಡಾಕ್ಟರ್ ಕಲಿಯಬೇಕೆಂಬ ಕನಸಿನಲ್ಲಿ ಪುತ್ರಿಯನ್ನು ಪ್ರತಿಷ್ಠಿತ ಎಜೆ ಮೆಡಿಕಲ್ ಕಾಲೇಜಿಗೆ ಸೇರಿಸಿದ್ದರು.
ಪ್ರಕೃತಿ ಅವರ ಡೆತ್ ನೋಟ್ ಸಿಕ್ಕಿದ್ದು, ಜೀವನದಲ್ಲಿ ನೊಂದಿದ್ದರಿಂದ ಜಿಗುಪ್ಸೆಗೊಂಡು ತಾನೇ ಸಾವಿಗೆ ಶರಣಾಗಿರುವುದಾಗಿ ಬರೆದುಕೊಂಡಿದ್ದಾರೆ. ಪೋಲಿಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.