
ಮಂಗಳೂರು : ಹಮಾಸ್ ಉಗ್ರರನ್ನು ದೇಶ ಪ್ರೇಮಿಗಳೆಂದು ಕರೆದ ಮಂಗಳೂರಿನ ಝಾಕಿರ್ – ವಿಶ್ವ ಕಬರಸ್ಥಾನ್ ಸಂಘದ ಸದಸ್ಯನ ವಿಡಿಯೋ ವೈರಲ್, ಬಂಧನಕ್ಕೆ ಹಿಂದೂ ಸಂಘಟನೆಗಳ ಒತ್ತಾಯ.
- ಕರಾವಳಿ
- October 14, 2023
- No Comment
- 154
ನ್ಯೂಸ್ ಆ್ಯರೋ : ಇಸ್ರೇಲ್ ನಲ್ಲಿ ನರಮೇಧ ನಡೆಸಿದ ಹಮಾಸ್ ಉಗ್ರರಿಗೆ ಮಂಗಳೂರಿನ ವ್ಯಕ್ತಿಯೊಬ್ಬ ಬೆಂಬಲ ಸೂಚಿಸಿದ್ದು, ಹಮಾಸ್ ಉಗ್ರರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ.
ಮಂಗಳೂರಿನ ಝಾಕಿರ್ ಹಮಾಸ್ ಉಗ್ರರನ್ನು ದೇಶ ಪ್ರೇಮಿಗಳೆಂದು ಕರೆದಿದ್ದಾನೆ. ಹಮಾಸ್ ಉಗ್ರರ ವಿಜಯಕ್ಕೆ ಪ್ರಾರ್ಥನೆ ಸಲ್ಲಿಸುವಂತೆ ಝಾಕಿರ್ ಕರೆ ನೀಡಿದ್ದಾನೆ.
ಪ್ಯಾಲಿಸ್ಟೈನ್ , ಗಾಝಾ ಹಾಗೂ ಹಮಾಸ್ ದೇಶಪ್ರೇಮಿ ಯೋಧರಿಗೆ ಜಯ ಸಿಗಲು ಪ್ರಾರ್ಥಿಸುವಂತೆ ಕರೆ ನೀಡಿರುವ ಝಾಕಿರ್ ಹಮಾಸ್ ಉಗ್ರರನ್ನು ದೇಶ ಪ್ರೇಮಿ ಯೋಧರೆಂದು ಬಣ್ಣಿಸಿದ್ದಾನೆ.
ವಿಶ್ವ ಕಬರಸ್ಥಾನ್ ಸಂಘದ ಸದಸ್ಯರು ಪ್ರತ್ಯೇಕ ಪ್ರಾರ್ಥನೆ ಸಲ್ಲಿಸುವಂತೆ ಝಾಕಿರ್ ಕರೆ ನೀಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಝಾಕಿರ್ ವಿಡಿಯೋ ವೈರಲ್ ಆಗಿದೆ.
ಮಂಗಳೂರಿನ ಬಂದರು ಪ್ರದೇಶದಲ್ಲಿ ತಾಲಿಬಾನ್ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳುವ ಝಾಕಿರ್ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಸಂಘಟನೆಗಳಿಂದಲೂ ಭಾರೀ ವಿರೋಧ ವ್ಯಕ್ತವಾಗಿದ್ದು, ಝಾಕಿರ್ ನನ್ನು ಈ ಕೂಡಲೇ ಬಂಧಿಸುವಂತೆ ಹಿಂದೂ ಸಂಘಟನೆಗಳಿಂದ ಒತ್ತಾಯ ಕೇಳಿಬಂದಿದೆ.