
Mangalore : ಕಮೀಷನರ್ ಅನುಪಮ್ ಅಗರ್ವಾಲ್ ಹೆಸರಲ್ಲಿ ವಂಚನೆ ಯತ್ನ – ವಾಟ್ಸಾಪ್ ಖಾತೆ ತೆರೆದು ಅನಾರೋಗ್ಯದ ನೆಪದಲ್ಲಿ ವಂಚನೆಗೆ ಮುಂದಾದ ಅಪರಿಚಿತ..!!
- ಕರಾವಳಿ
- October 27, 2023
- No Comment
- 89
ನ್ಯೂಸ್ ಆ್ಯರೋ : ಮಂಗಳೂರು ನಗರ ಪೋಲಿಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ಫೋಟೋ ಬಳಸಿ ವಾಟ್ಸಾಪ್ ಖಾತೆ ತೆರೆದು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಚಾರ ಬೆಳಕಿಗೆ ಬಂದಿದ್ದು, ಈ ಬಗ್ಗೆ ಖುದ್ದು ಅನುಪಮ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದಾರೆ.
8319051976 ನಂಬರ್ ನಿಂದ ವಾಟ್ಸಾಪ್ ಖಾತೆ ತೆರೆದಿರುವ ಅಪರಿಚಿತ ವ್ಯಕ್ತಿಯೊಬ್ಬ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.
ತಾನು ಅನಾರೋಗ್ಯ ಪೀಡಿತನಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ ಯುಪಿಐ ಕೈಕೊಟ್ಟಿದ್ದು, ನನಗೆ ಸ್ಪಲ್ಪ ಹಣ ಕೊಟ್ಟರೆ ಗಂಟೆಯೊಳಗೆ ವಾಪಾಸ್ ಮಾಡುವುದಾಗಿ ಅಪರಿಚಿತನೊಬ್ಬ ಇನ್ನೊಬ್ಬರಿಗೆ ಮೆಸೇಜ್ ಮಾಡಿದ್ದಾನೆ.

ಈ ಬಗ್ಗೆ ಖುದ್ದಾಗಿ ಕಮೀಷನರ್ ಅನುಪಮ್ ಅಗರ್ವಾಲ್ ಸ್ಪಷ್ಟನೆ ನೀಡಿದ್ದು ಇದೊಂದು ನಕಲಿ ಸಂದೇಶ, ಯಾರೂ ಇಂತಹ ವಿಚಾರಗಳನ್ನು ನಂಬಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ಆದರೆ ಕಿಡಿಗೇಡಿ ಕೃತ್ಯ ಎಸಗಿದವನ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.