
ಕಾರ್ಕಳ ಪರಶುರಾಮ ಕಂಚಿನ ಪ್ರತಿಮೆ ನಕಲಿ ರಾಜಕೀಯ ಪ್ರಹಸನ ಅಂತ್ಯ – ತೆರವುಗೊಂಡ ಮೂರ್ತಿಯ ಭಾಗ ಕಂಚಿನದ್ದಲ್ಲ ಎಂದು ಒಪ್ಪಿಕೊಂಡ ಅಧಿಕಾರಿಗಳು..!!
- ಕರಾವಳಿ
- October 20, 2023
- No Comment
- 3133
ನ್ಯೂಸ್ ಆ್ಯರೋ : ಕಾರ್ಕಳ ಉಮಿಕಲ್ ನಲ್ಲಿನ ಪರಶುರಾಮ ಕಂಚಿನ ಪ್ರತಿಮೆ ನಕಲಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿದ MLC ಮಂಜುನಾಥ ಭಂಡಾರಿ ಮುಂದೆ ತೆರವುಗೊಂಡ ಮೂರ್ತಿಯ ಭಾಗ ಕಂಚಿನದ್ದು ಅಲ್ಲ ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಂದ ತಪ್ಪೊಪ್ಪಿಕೊಂಡಿದ್ದಾರೆ. ಇದರೊಂದಿಗೆ ಬಹುದಿನಗಳ ರಾಜಕೀಯ ಪ್ರಹಸನ ಅಂತ್ಯಗೊಂಡಂತಾಗಿದೆ.
ಇನ್ನು ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಅವರ ಸೂಚನೆಯಂತೆ ಪ್ರತಿಮೆ ವೀಕ್ಷಿಸಲು ಥೀಮ್ ಪಾರ್ಕ್ ಗೆ ಮಂಜುನಾಥ ಭಂಡಾರಿ ಭೇಟಿ ನೀಡಿದ್ದು ಈ ವೇಳೆ ನಿರ್ಮಿತಿ ಕೇಂದ್ರದ ಅಧಿಕಾರಿಗಳೊಂದಿಗೆ ಮಂಜುನಾಥ ಭಂಡಾರಿಯವರು ಪ್ರತಿಮೆಯ ಬಿಡಿ ಭಾಗ ವೀಕ್ಷಿಸಿದ್ದಾರೆ.
ಪ್ರತಿಮೆಯ ಅರ್ಧ ಭಾಗ ತೆರವುಗೊಳಿಸಿದ್ದು ಯಾಕೆ.? ಎಂದು ಪ್ರಶ್ನಿಸಿದ ಭಂಡಾರಿ
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರ ಪ್ರಶ್ನೆಗೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ. ಪ್ರತಿಮೆ ಅರ್ಧ ಭಾಗ ಕಾಣೆಯಾಗಿದ್ದರ ಬಗ್ಗೆ ಅಧಿಕಾರಿಗಳು ಈ ಸಂದರ್ಭ ಸಮಜಾಯಿಷಿ ನೀಡಿದ್ದಾರೆ.
ಇನ್ನು ಅಧಿಕಾರಿಗಳು ಥೀಮ್ ಕಾಮಗಾರಿಯನ್ನು ತರಾತುರಿಯಲ್ಲಿ ನಡೆಸಲಾಗಿದೆ, ಮೂರ್ತಿ ನಿರ್ಮಾಣದ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸುವ ಉದ್ದೇಶದಿಂದ ಅರ್ಧ ಮೂರ್ತಿಯನ್ನ ಬೆಂಗಳೂರಿಗೆ ಕೊಂಡೊಯ್ಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದು ಈ ಸಂದರ್ಭ ಅಧಿಕಾರಿಗಳ ಸಮಜಾಯಿಷಿ ಕೇಳಿ ಮಂಜುನಾಥ ಭಂಡಾರಿ ಕೆಂಡಾಮಂಡಲವಾಗಿದ್ದಾರೆ. ಬಳಿಕ ಅಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಭೂಮಿ ಮಂಜೂರಾಗದೆ ಸರಕಾರ ಅನುದಾನ ನೀಡಲು ಹೇಗೆ ಸಾಧ್ಯ..?
ಗೊಂದಲದ ನಡುವೆ ಮೂರ್ತಿ ಬದಲಿಸುವ ಪ್ರಯತ್ನಕ್ಕೆ ಕೈ ಹಾಕುತ್ತಿದ್ದೀರಿ, ಯಾವುದಕ್ಕೂ ನಿಮ್ಮಲ್ಲಿ ದಾಖಲೆಗಳಿಲ್ಲ. ಮೂರ್ತಿ ಸಾಗಾಟದ ಈ -ವೇ ಬಿಲ್ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಗರಂ ಆಗಿದ್ದು ಈ ವೇಳೆ ಅಧಿಕಾರಿಗಳು ವಿಧಿಯಿಲ್ಲದೇ ಸತ್ಯ ವಿಚಾರ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.