
ಕಡಬ : ಬಿಜೆಪಿ ಮುಖಂಡನ ಪಂಚರ್ ಇನ್ ಪಂಚಾಯತ್, ಶಾಟ್ ಫಿಲಂ ಬಿಡುಗಡೆ, ವಿಡಿಯೋ ವೈರಲ್..! – ಕಡಬದ ತುಂಬಾ ಓಡಾಡಿದ ಆ ವಿಡಿಯೋ ಯಾರದ್ದು ಗೊತ್ತಾ? ಅಸಲಿಯತ್ತು ಇದೇ ನೋಡಿ….
- ಕರಾವಳಿ
- October 30, 2023
- No Comment
- 195
ನ್ಯೂಸ್ ಆ್ಯರೋ : ಕಡಬದ ಬಿಜೆಪಿ ಮುಖಂಡರೊಬ್ಬರ ಬ್ಲೂ ಫಿಲಂ ಲೀಕ್ ಆಗಿದೆ ಎಂಬ ಸುದ್ದಿ ಇಂದು ಸಂಜೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ವಿಡಿಯೋ ಬಗ್ಗೆ ಚರ್ಚೆ ಜೋರಾಗಿರುವ ನಡುವೆ ವಿಡಿಯೋದ ಅಸಲಿಯತ್ತನ್ನು ನ್ಯೂಸ್ ಆ್ಯರೋ ತಂಡ ಬಯಲಿಗೆಳೆದಿದೆ.
ಇಂದು ಸಂಜೆ 7:20 ರ ಸುಮಾರಿಗೆ ಕಡಬದ ವ್ಯಕ್ತಿಯೊಬ್ಬ ಕಡಬದ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿ ಮುಖಂಡನ ಶಾಟ್ ಫಿಲಂ ಬಿಡುಗಡೆ, ಪಂಚರ್ ಇನ್ ಪಂಚಾಯತ್ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದು, ಬಳಿಕ ಬಿಗ್ ಎಕ್ಸ್’ಕ್ಲೂಸಿವ್ ನಮ್ಮಲ್ಲಿ ಮಾತ್ರ ಎಂದು ಸ್ಟೇಟಸ್ ಹಾಕಿದ್ದ.
ತದನಂತರ ಅಶ್ಲೀಲವಾಗಿ ಕಾಣುತ್ತಿದ್ದ ವಿಡಿಯೋವೊಂದರ ಸ್ಕ್ರೀನ್ ಶಾಟ್ ತೆಗೆದು ಅದನ್ನು ಎಡಿಟ್ ಮಾಡಿ ಹಾಕಿದ್ದಲ್ಲದೇ ಇದು ನಿಜಾನಾ ಅಂತಲೂ ಸ್ಟೇಟಸ್ ಹಾಕಿಕೊಂಡಿದ್ದ. ಇದು ಸಹಜವಾಗಿಯೇ ಕಡಬದ ಯುವಕರ ತಲೆಗೆ ಹುಳ ಬಿಟ್ಟಂತಾಗಿತ್ತು. ಇದರ ನಡುವೆ ಮತ್ತೊಂದು ಈ ವಾಟ್ಸಾಪ್ ಸ್ಟೇಟಸ್ ಗಳ ಒಕ್ಕಣೆಯೊಂದಿಗೆ ವಿಡಿಯೋವೊಂದು ಹರಿದಾಡಿದ್ದು, ಹಲವರು ಇದನ್ನೇ ಸತ್ಯವೆಂದು ನಂಬಿ ತಾರಾಮಾರಾ ಶೇರ್ ಕೂಡ ಮಾಡಿ ಆಗಿತ್ತು.
ಆದರೆ ಈ ಸುದ್ದಿ ವೈರಲ್ ಆಗುತ್ತಲೇ ನ್ಯೂಸ್ ಆ್ಯರೋ ತಂಡ ವೈರಲ್ ಆಗುತ್ತಿದ್ದ ವಿಡಿಯೋದ ಅಸಲಿಯತ್ತು ಪತ್ತೆ ಹಚ್ಚಿದ್ದು, ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಎರಡು- ಮೂರು ವರ್ಷಗಳ ಹಿಂದೆಯೇ ಆನ್ ಲೈನ್ ನಲ್ಲಿ ಅಪ್ಲೋಡ್ ಆಗಿದ್ದು, ಕಚೇರಿಯೊಂದರ ಅಶ್ಲೀಲ ದೃಶ್ಯಗಳ ವಿಡಿಯೋಗಳ ಸರಣಿಯೇ ಆನ್ ಲೈನ್ ನಲ್ಲಿ ಅಪ್ಲೋಡ್ ಆಗಿದೆ.
ಸದ್ಯಕ್ಕಂತೂ ವಾಟ್ಸಾಪ್ ನಲ್ಲಿ ಶೇರ್ ಆಗಿರುವ ವಿಡಿಯೋ ಹಾಗೂ ಸ್ಟೇಟಸ್ ಹಾಕಲಾದ ಸ್ಕ್ರೀನ್ ಶಾಟ್ ವಿಡಿಯೋ ಎರಡೂ ಕೂಡ ಒಂದೇ ಕಚೇರಿಯದ್ದಾಗಿದ್ದು, ಇದು ಕಡಬದ ವಿಡಿಯೋ ಅಂತೂ ಅಲ್ಲವೇ ಅಲ್ಲ ಎಂಬುದು ಕನ್ ಫರ್ಮ್ ಆಗಿದೆ.
ಇದು ಕೇವಲ ಹುಲಿ ಬಂತು ಹುಲಿ ಸುದ್ದಿ ಅಷ್ಟೇ…!! ಯಾರದ್ದೋ ಮೇಲಿನ ಸೇಡಿಗೋ, ಮಕ್ಕಳಾಟಕ್ಕೋ ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳದಿರಿ ಎಂಬ ಆಶಯ ನಮ್ಮದು…!