ಬೆಳ್ತಂಗಡಿ : ರಾತ್ರಿಯ ಹೊತ್ತು ಮನೆಗೆ ನಕ್ಸಲ್ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಕುತ್ಲೂರಿನ ನಯವಂಚಕನ ಬೆನ್ನು ಬಿದ್ದಿದ್ರು ಮೂಡಬಿದಿರೆ ಪೋಲಿಸರು : ಲಕ್ಷಾಂತರ ರೂಪಾಯಿ ವಂಚಿಸಿ ಹಗಲುವೇಷ ಹಾಕ್ತಿದ್ದ ಅಂಟೋನಿ..!

ಬೆಳ್ತಂಗಡಿ : ರಾತ್ರಿಯ ಹೊತ್ತು ಮನೆಗೆ ನಕ್ಸಲ್ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಕುತ್ಲೂರಿನ ನಯವಂಚಕನ ಬೆನ್ನು ಬಿದ್ದಿದ್ರು ಮೂಡಬಿದಿರೆ ಪೋಲಿಸರು : ಲಕ್ಷಾಂತರ ರೂಪಾಯಿ ವಂಚಿಸಿ ಹಗಲುವೇಷ ಹಾಕ್ತಿದ್ದ ಅಂಟೋನಿ..!

ನ್ಯೂಸ್ ಆ್ಯರೋ : ಬೆಳ್ತಂಗಡಿಯ ನಕ್ಸಲ್ ಪೀಡಿತ ಪ್ರದೇಶದಲ್ಲಿ ರಾತ್ರಿ ಐದು ಜನರ ತಂಡವೊಂದು ಮನೆಯ ಬಾಗಿಲು ಬಡಿದು ವಿಚಾರಿಸಿರುವ ಘಟನೆ ನ.21 ರಂದು ಕುತ್ಲೂರಿನಲ್ಲಿ ನಡೆದಿದ್ದು, ಜಿಲ್ಲೆಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಲಭಿಸಿದ್ದು, ಈ ಘಟನೆಯ ಇಂಚಿಂಚೂ ಮಾಹಿತಿ ಇಲ್ಲಿದೆ.

ಘಟನೆಯ ವಿವರ :

ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಪೂಂಜಾಜೆ ಮನೆಗೆ ನ.21 ರಾತ್ರಿ ಅಪರಿಚಿತರ ತಂಡವೊಂದು ದಾಳಿ ನಡೆಸಿ ಬಾಗಿಲು ಬಡಿದಿದ್ದು, ಬಾಗಿಲು ತೆಗೆಯದೇ ಇದ್ದಾಗ ಕಬ್ಬಿಣದ ರಾಡ್ ಬಳಸಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದರು. ಮನೆಯವರು ಈ ಬಗ್ಗೆ ತಕ್ಷಣ 112 ಕಂಟ್ರೋಲ್ ರೂಂ ಹಾಗೂ ವೇಣೂರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್, ವೇಣೂರು ಪೊಲೀಸರು ಹಾಗೂ 112 ಕಂಟ್ರೋಲ್ ರೂಂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದರು. ಈ ಘಟನೆ ಜಿಲ್ಲೆಯಾದ್ಯಂತ ಭಾರೀ ಸುದ್ದಿಯಾಗಿತ್ತು.

ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ್ದ ಮನೆ ಯಜಮಾನ!

ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಪೂಂಜಾಜೆ ಮನೆಯ ನಿವಾಸಿ ಜೋಸಿ ಅಂಟೋನಿ ಮತ್ತು ಮಂಜುಳಾ ದಂಪತಿಗಳ ಮನೆಗೆ ನ. 21ರಂದು ರಾತ್ರಿ 9.30ರ ಸುಮಾರಿಗೆ ನೀಲಿ ಬಣ್ಣದ ಬಟ್ಟೆ ಹಾಕಿದ್ದ ನಾಲ್ಕು ಜನ ಪುರುಷರು ಹಾಗೂ ಪೊಲೀಸ್ ಡ್ರೆಸ್ ಹಾಕಿದ್ದ ಒಬ್ಬ ಮಹಿಳಾ ಪೊಲೀಸ್ ಆಗಮಿಸಿ ಬಾಗಿಲು ಬಡಿದಿದ್ದರು. ಯಾರು ಎಂದು ಕೇಳಿದಾಗ, ‘ನಾವು ವೇಣೂರು ಪೊಲೀಸ್ ಠಾಣೆಯಿಂದ ಆಗಮಿಸಿದ್ದು, ನಿಮ್ಮೊಂದಿಗೆ ಮಾತನಾಡುವುದಿದೆ ಬಾಗಿಲು ತೆರೆಯಿರಿ’ ಎಂದಿದ್ದರು. ಇದೇ ವೇಳೆ ಜೋಸಿ ವೇಣೂರು ಠಾಣೆಗೆ ಕರೆ ಮಾಡಿದಾಗ, ‘ನಮ್ಮ ಪೊಲೀಸರು ಬಂದಿಲ್ಲ’ ಎಂದಿದ್ದಾರೆ.

ಇದರಿಂದ ಅನುಮಾನಗೊಂಡ ಮನೆ ಮಾಲೀಕರು ತಕ್ಷಣವೇ 112 ಕಂಟ್ರೋಲ್ ರೂಂ ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಈ ವಿಚಾರ ಮನೆಯ ಹೊರಗಿದ್ದ ಐದು ಜನರಿಗೆ ಕೇಳಿಸಿ ಅವರು ಅಲ್ಲಿಂದ ಪಲಾಯನಗೈದಿದ್ದಾರೆ ಎಂದು ಆರೋಪಿಸಲಾಗಿತ್ತು. ಕೆಲ ಸಮಯದ ನಂತರ ಸ್ಥಳಕ್ಕೆ 112 ಕಂಟ್ರೋಲ್ ರೂಂ ಸಿಬ್ಬಂದಿಗಳು, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ವೇಣೂರು ಪೋಲಿಸರು ಆಗಮಿಸಿ ಮಾಹಿತಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಜೋಸಿ ಆಂಟೋನಿ, ‘ಮನೆಗೆ ಬಂದ ಐದು ಜನ ಪೊಲೀಸರಲ್ಲ ಅವರು ನಕ್ಸಲರು ಎಂಬ ಅನುಮಾನವಿದೆ’ ಎಂದು ಸುಳ್ಳು ಹೇಳಿದ್ದಲ್ಲದೆ, ಈ ವಿಚಾರವನ್ನು ಮಾಧ್ಯಮಗಳಿಗೂ ತಿಳಿಸಿದ್ದಾರೆ. ಇದು ಜಿಲ್ಲೆಯಾದ್ಯಂತ ಭಾರೀ ಕೋಲಾಹಲ ಸೃಷ್ಟಿಸಿತ್ತು.

ಬಯಲಾಯ್ತು ಅಂಟೋನಿಯ ನಾಟಕ..!

ಅಂಟೋನಿ ಹೇಳಿದ ನಕ್ಸಲ್ ಕತೆಯನ್ನು ನಂಬದ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿದಾಗ ಅಂಟೊನಿಯ ಬಣ್ಣ ಬಯಲಾಗಿದೆ. ಪೂಂಜಾಜೆ ನಿವಾಸಿಯಾದ ಅಂಟೋನಿ ತನ್ನಲ್ಲಿರುವ ಒಂದೇ ಜಾಗವನ್ನು ಬೆಂಗಳೂರಿನ ಸುಹನಾ ಅವರಿಗೆ 45 ಲಕ್ಷಕ್ಕೆ ಹಾಗೂ ಶರತ್ ಎಂಬವರಿಗೆ 48 ಲಕ್ಷಕ್ಕೆ ಅಗ್ರಿಮೆಂಟ್ ಮಾಡಿಸಿ ಕ್ರಮವಾಗಿ ಎರಡು ಪಾರ್ಟಿಯಿಂದ 24 ಮತ್ತು 19ಲಕ್ಷದ ಚೆಕ್ ಪಡೆದುಕೊಂಡಿದ್ದ. ಅಲ್ಲದೇ ಇದೇ ರೀತಿ ಒಟ್ಟು 12 ಜನರಿಗೆ ವಂಚಿಸಿದ್ದ ಎನ್ನಲಾಗಿದೆ. ಅಂಟೋನಿ ಮಾಡಿದ ವಂಚನೆ ತಿಳಿಯುತ್ತಿದ್ದಂತೆ ಸುಹಾನಾ ಹಾಗೂ ಶರತ್ ಮೂಡಬಿದಿರೆ ಪೊಲೀಸರ ಮೊರೆ ಹೋಗಿದ್ದಾರೆ.

ಹಗಲುವೇಷ ಹಾಕ್ತಿದ್ದ ಅಂಟೋನಿ..!!

ಹಲವರಿಗೆ ವಂಚಿಸಿದ ಅಂಟೋನಿ ಬಳಿಕ ಹಗಲಿನಲ್ಲಿ ಮನೆಯಲ್ಲಿ ಇರದೇ ಪರಾರಿಯಾಗುತ್ತಿದ್ದ.‌ ಅಲ್ಲದೇ ಯಾವುದೇ ನೋಟೀಸ್ ಕಳುಹಿಸಿದರೂ ಸ್ವೀಕರಿಸುತ್ತಿರಲಿಲ್ಲ.‌ ಅಲ್ಲದೇ ರಾತ್ರಿ ವೇಳೆ ಆತ ಮನೆಗೆ ಬರುವ ಬಗ್ಗೆ ಪೋಲಿಸರು ಮಾಹಿತಿ ಕಲೆಹಾಕಿದ್ದರು. ಈ ಹಿನ್ನೆಲೆಯಲ್ಲಿ ಮೂಡಬಿದಿರೆ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಅವರು ಅಂಟೋನಿ ಮನೆಗೆ ರಾತ್ರಿ ದಾಳಿ ಮಾಡುವ ಪ್ಲ್ಯಾನ್ ಮಾಡಿದ್ದರು. ಅದರಂತೆ ಮೂಡಬಿದಿರೆ ಠಾಣೆಯ ಪೋಲಿಸ್ ಸಿಬ್ಬಂದಿಗಳಾದ ಅಯ್ಯಪ್ಪ, ನಾಗರಾಜ್ ಹಾಗೂ ಮಹಿಳಾ ಸಿಬ್ಬಂದಿ ಭಾಗ್ಯಮ್ಮ ಮತ್ತು ದೂರುದಾರೆ ಸುಹಾನಾ ಅವರ ತಂದೆ ಸಮದ್ ಅವರು ಅಂಟೋನಿ ಮನೆಗೆ ಹೋಗಿದ್ದರು.

ಬುರುಡೆ ಬಿಟ್ಟ ಅಂಟೋನಿ..!!

ನ.21ರ ರಾತ್ರಿಯ ಅಂಟೋನಿ ಮನೆಗೆ ಮೂಡಬಿದಿರೆ ಪೊಲೀಸರ ಆಗಮಿಸಿದ್ದು, ಇದೇ ಘಟನೆಯನ್ನು ಈತ ನಕ್ಸಲ್ ದಾಳಿ ಎಂದು ಜನರನ್ನು, ಪೊಲೀಸರನ್ನು ಹಾಗೂ ಮಾಧ್ಯಮಗಳನ್ನು ನಂಬಿಸಿದ್ದ. ಸದ್ಯ, ಅಂತಿಮವಾಗಿ ಅಂಟೋನಿಯ ನಾಟಕ ಬಯಲಾಗಿದ್ದು, ಈತನ ವಿರುದ್ಧವೇ ಪ್ರಕರಣ ದಾಖಲಾಗಿದೆ. ಈ ಸತ್ಯಾಂಶವನ್ನು ಮೂಡಬಿದಿರೆ ಮೂಡಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಸ್ಪಷ್ಟಪಡಿಸಿದ್ದಾರೆ.

ಎಸ್ಪಿ ರಿಷ್ಯಂತ್ ಹೇಳಿದ್ದೇನು?

ಬೆಳ್ತಂಗಡಿ ತಾಲೂಕಿನ ಪೂಂಜಾಜೆ ನಿವಾಸಿ ಅಂಟೋನಿ ತನ್ನ ಮನೆಗೆ ನಕ್ಸಲ್ ದಾಳಿಯಾಗಿದೆ ಎಂದು ಕಳ್ಳ ಕತೆ ಕಟ್ಟಿದಾಗ ಪೊಲೀಸರು ಹಾಗೂ ಮಾಧ್ಯಮಗಳು ಮೊದಲು ಇದನ್ನು ಗಂಭೀರವಾಗಿ ಪರಿಗಣಿಸಿದ್ದರು. ಆದರೆ ಇದೀಗ ತನಿಖೆಯಿಂದ ಅಂಟೋನಿಯ ಕಳ್ಳಾಟ ಬಯಲಿಗೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಎಸ್ಪಿ ರಿಷ್ಯಂತ್, ‘ನ.21ರ ರಾತ್ರಿ ಅಂಟೋಬಿ ಅವರ ಮನೆಗೆ ಮೂಡಬಿದಿರೆ ಪೊಲೀಸರು ಭೇಟಿ ನೀಡಿದ್ದರು. ಈ ವಿಚಾರ ವೇಣೂರು ಪೊಲೀಸರಿಗೆ ತಿಳಿದಿರಲಿಲ್ಲ. ಇದು ನಕ್ಸಲ್ ದಾಳಿಯಲ್ಲ, ಜೋಸಿ ಅಂಟೋನಿ ತಾನು ಮಾಡಿದ ವಂಚನೆಯಿಂದ ತಪ್ಪಿಸಿಕೊಳ್ಳಲು ಮಾಡಿದ ನಾಟಕ’ ಎಂದಿದ್ದಾರೆ.

Related post

ದಿನ‌ ಭವಿಷ್ಯ 10-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 10-04-2024 ಶುಕ್ರವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಾಧ್ಯವಾದರೆ ದೀರ್ಘ ಪ್ರಯಾಣವನ್ನು ತಪ್ಪಿಸಿ. ಏಕೆಂದರೆ ನೀವು ಪ್ರಯಾಣಿಸು ತುಂಬಾ ದುರ್ಬಲರಾಗಿದ್ದೀರಿ ಹಾಗೂ ಇದು ಮತ್ತಷ್ಟು ನಿಮ್ಮನ್ನು ದುರ್ಬಲಗೊಳಿಸುತ್ತದೆ. ಇಂದು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವವರು ತಮ್ಮ…
7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್. ಡಿ. ರೇವಣ್ಣ; ಮೇ 14 ರವರೆಗೆ ನ್ಯಾಯಾಂಗ ಬಂಧನ

7 ದಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾದ ಮಾಜಿ ಸಚಿವ ಎಚ್.…

ನ್ಯೂಸ್ ಆ್ಯರೋ : ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು…
TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

TECH TIPS: ಕಿರಿಕಿರಿ ನೀಡುವ ಸ್ಪ್ಯಾಮ್ ಕರೆಗಳಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ..!

ನ್ಯೂಸ್ ಆ್ಯರೋ : ಮನಸ್ಸಿಗೆ ಕಿರಿಕಿರಿ ನೀಡುವ ಮತ್ತು ತಮ್ಮ ಕೆಲಸದ ವೇಳೆಯಲ್ಲಿ ಅಡಚಣೆ ಉಂಟು ಮಾಡುವ ಸ್ಪ್ಯಾಮ್ ಕರೆಗಳನ್ನು (Spam call) ತಡೆಯುವುದು ಇಂದು ದೊಡ್ಡ ಸಾಹಸ…

Leave a Reply

Your email address will not be published. Required fields are marked *