ಬ್ಲ್ಯಾಕ್ಮೇಲ್ ಮಾಡಿ ತಂತ್ರ ಉಪಯೋಗಿಸಿ ರಾಜ್ಯಾಧ್ಯಕ್ಷರ ನೇಮಕವಾಗಿದೆ – ಆಕ್ರೋಶಿತರಾಗಿ ಮತ್ತೆ ಗುಡುಗಿದ ಫೈರ್ ಬ್ರ್ಯಾಂಡ್ ಯತ್ನಾಳ್..!!

ಬ್ಲ್ಯಾಕ್ಮೇಲ್ ಮಾಡಿ ತಂತ್ರ ಉಪಯೋಗಿಸಿ ರಾಜ್ಯಾಧ್ಯಕ್ಷರ ನೇಮಕವಾಗಿದೆ – ಆಕ್ರೋಶಿತರಾಗಿ ಮತ್ತೆ ಗುಡುಗಿದ ಫೈರ್ ಬ್ರ್ಯಾಂಡ್ ಯತ್ನಾಳ್..!!

ನ್ಯೂಸ್ ಆ್ಯರೋ : ರಾಜಕೀಯದಲ್ಲಿ ಒಬ್ಬರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಆಗುತ್ತಲೇ ಇರುತ್ತದೆ. ಪೊಲಿಟಿಕಲ್ ಸಿಸ್ಟಮ್ ನಲ್ಲಿ ಇದೆಲ್ಲಾ ಮಾಮೂಲಿ ಬಿಡಿ. ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದ ಗದ್ದುಗೆಯೇರಿತ್ತು. ಬಿಜೆಪಿ ವಿರೋಧ ಪಕ್ಷ ಎನಿಸಿಕೊಂಡವು. ಆದರೆ ಸರ್ಕಾರ ಬದಲಾಗಿ ಇಷ್ಟು ಸಮಯವಾದರೂ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗಿರಲಿಲ್ಲ. ಜೊತೆಗೆ ವಿರೋಧ ಪಕ್ಷದ ನಾಯಕನ ಆಯ್ಕೆಯೂ ಆಗಿರಲಿಲ್ಲ.

ಆದರೆ ಮೊನ್ನೆ ಮೊನ್ನೆ ತಾನೇ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಆಯ್ಕೆಯಾದರು. ಈ ಬೆನ್ನಲ್ಲೇ ಬಿಜೆಪಿಯ ಫೈರ್ ಬ್ರಾಂಡ್ ಯತ್ನಾಳ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಯತ್ನಾಳ್ ಏನಂದ್ರು…?

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಬಿಜೆಪಿ ಯಾವುದೋ ಒಂದು ಕುಟುಂಬದ ಪಕ್ಷವಲ್ಲ. ಅದನ್ನು ನಾವು ಒಪ್ಪುವುದೂ ಇಲ್ಲ. ಬಿಜೆಪಿಗಾಗಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ನಾನು ಜೀವ ಕೊಡಲೂ ಕೂಡಾ ತಯಾರಾಗಿದ್ದೇನೆ. ಆದರೆ ಕೆಲ ಚೇಲಾಗಳ ಮಾತು ಕೇಳಿ ವರಿಷ್ಠರು ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು.

ಇವರ ರೀತಿ ನಾನು ಥರ್ಡ್ ಕ್ಲಾಸ್ ಮನುಷ್ಯನಲ್ಲ. ಅಧ್ಯಕ್ಷನಾಗಬೇಕು, ವಿರೋಧ ಪಕ್ಷದ ನಾಯಕನಾಗಬೇಕು ಎನ್ನುವ ಅಧಿಕಾರದ ಮೋಹಕ್ಕೆ ನಾನು ಹಲ್ಕಾ ಕೆಲಸ ಮಾಡುವುದಿಲ್ಲ. ಅಟಲ್ ಬಿಹಾರ್ ವಾಜಪೇಯಿ ಹೇಳಿದ ಹಾಗೆ ‘ನಿನ್ನ ಬೆನ್ನು ಯಾರೂ ಹತ್ತಿಲ್ಲ ಅಂದ್ರೆ ನೀನೊಬ್ಬನೇ ಹೋಗು’ ಎಂಬ ವಾಕ್ಯಕ್ಕೆ ಸರಿಯಾಗಿ ನಾನು ಬದುಕುತ್ತಿದ್ದೇನೆ‌. ಸತ್ಯ ಹಿಡಿದು ಒಂಟಿಯಾಗಿ ನಡೆದಿದ್ದಕ್ಕೆ ಉತ್ತರ‌ ಕರ್ನಾಟಕದ ಜನರಿಗೂ ಇದೀಗ ಗೌರವ ಸಿಕ್ಕಿದೆ.

ನಾನೂ ಇವರ ಥರ ಹೊಂದಾಣಿಕೆಯಾಗಿದ್ದರೆ ಬೇಕಾದಷ್ಟು ದುಡ್ಡು ಮಾಡ್ಕೊಳ್ಳಬಹುದಿತ್ತು’ ಎಂದು ಆಕ್ರೋಶಭರಿತರಾಗಿ ನುಡಿದರು. ಬೂಟಾಟಿಕೆ, ದರ್ಪ ಅದಕ್ಕೆಲ್ಲ ನಾನು ಅಂಜಲ್ಲ‌. ನನ್ನ ಧೈರ್ಯದ ಮಾತು ಕೇಳಿ ಅವರಿಗೂ ಖುಷಿಯಾಯ್ತು’ ಎಂದು ಯತ್ನಾಳ್ ಹೇಳಿದರು.

ಉತ್ತರ ಕರ್ನಾಟಕದವರಿಗೆ ಸ್ಥಾನ ಸಿಗಬೇಕು….

ನಾನು ಶಾಸಕಾಂಗ ಪಕ್ಷದ ಸಭೆಗೆ ಹೋಗ್ತೇನೆ, ವಿಪಕ್ಷ ನಾಯಕ ಸ್ಥಾನ ಉತ್ತರ ಕರ್ನಾಟಕಕ್ಕೆ ಸಿಗಬೇಕು. ಅದರಲ್ಲಿ ರಾಜಿ ಇಲ್ಲ. ಇನ್ನು ಅದೂನೂ ದಕ್ಷಿಣ ಕರ್ನಾಟಕದವರೇ ಅಗಬೇಕಾ..? ಮಂಗಳೂರು ಬಿಟ್ಟರೆ ದಕ್ಷಿಣ ಕರ್ನಾಟಕದ ಎಷ್ಟು ಶಾಸಕರರಿದ್ದಾರೆ. ಬಹಳಷ್ಟು ಶಾಸಕರು ನಮ್ಮ ಜೊತೆಗಿದ್ದಾರೆ ಆದರೆ ಅವರಿಗೆ ಮಾತಾಡಲು ಧಮ್ ಇಲ್ಲ. ಅವರಲ್ಲಿ ಬಹಳಷ್ಟು ಜನ ತಮ್ಮ ಮಕ್ಕಳನ್ನು ಲೋಕಸಭೆಗೆ ನಿಲ್ಲಿಸಬೇಕೆಂದು ಇದ್ದಾರೆ.

ಉತ್ತರ ಕರ್ನಾಟಕಕ್ಕೆ ಅವಕಾಶ ಕೊಡದಿದ್ದರೆ ಜನ ತೀರ್ಮಾನ ಮಾಡುತ್ತಾರೆ, ಆಗ ನಾವೂ ತೀರ್ಮಾನ ಮಾಡುತ್ತೇವೆ ಎಂದು ಯತ್ನಾಳ್ ಹೇಳಿದರು.
ಉ.ಕರ್ನಾಟಕಕ್ಕೆ ಅನ್ಯಾಯ ಮಾಡಿದರೆ ಕೆಲವೇ ದಿನಗಳಲ್ಲಿ ಜನ ಪ್ರತಿಫಲ ಕೊಡುತ್ತಾರೆ. ಜೀ ಹುಜೂರ್ ಸಂಸ್ಕೃತಿ ನನ್ನದಲ್ಲ. ಪಂಚಮಸಾಲಿ ಸಮುದಾಯವನ್ನು ಯಾವಾಗಲೂ ನಿರ್ಲಕ್ಷ್ಯ ಮಾಡಿದ್ದಾರೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ಎಲ್ಲ ಈ ಕಡೆಯವರೇ ಆದರೆ ನಾವು ಸರ್ ಸರ್ ಅಂತಾ ಅವರ ಬಾಲ ಹಿಡಿದುಕೊಂಡು ಅವರ ಮನೆಗೆ ಹೋಗಬೇಕೇ ಎಂದು ಮಾಧ್ಯಮದ ಎದುರು ಯತ್ನಾಳ್ ಖಾರವಾಗಿ ಪ್ರಶ್ನಿಸಿದರು.

Related post

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ : ಎಲ್ಲಾ ಕಛೇರಿಗಳಿಗೂ ಬೀಳುತ್ತೆ ಬೀಗ..!

ಲೋಕಸಭಾ ಚುನಾವಣೆ ದಿನ ಸಾರ್ವತ್ರಿಕ ರಜೆ – ರಾಜ್ಯ ಸರ್ಕಾರದಿಂದ ಆದೇಶ…

ನ್ಯೂಸ್ ಆ್ಯರೋ : ಇನ್ನೆರಡೇ ದಿನಗಳು ಅಂದರೆ ಏಪ್ರಿಲ್ 26ರಂದು ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ನಡೆಯಲಿದ್ದು, ಅಂದು ಎಲ್ಲಾ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ…
ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 24-04-2024 ಬುಧವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮ ಹೂಡಿಕೆಗಳು ಬಗ್ಗೆ ನಿಮ್ಮ ಭವಿಷ್ಯದ ಗುರಿಗಳ ಬಗ್ಗೆ ರಹಸ್ಯಮಯವಾಗಿರಿ. ಮನೆ ಅಥವಾ ಸಾಮಾಜಿಕ…
ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 23-04-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷನಿಮ್ಮ ಕೋಪ ಕಡ್ಡಿಯನ್ನು ಗುಡ್ಡ ಮಾಡಬಹುದು-ಇದು ನಿಮ್ಮ ಕುಟುಂಬದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗುತ್ತದೆ. ಕೋಪವನ್ನು ನಿಯಂತ್ರಣದಲ್ಲಿಡುವುದನ್ನು ಕಲಿತ ಆ ಮಹಾನ್ ಆತ್ಮಗಳೇ ಅದೃಷ್ಟಶಾಲಿಗಳು. ನಿಮ್ಮ ಕೋಪ ನಿಮ್ಮನ್ನು ಸುಡುವ…

Leave a Reply

Your email address will not be published. Required fields are marked *