
ಪುತ್ತೂರು : ಹುಲಿವೇಷಕ್ಕೆ ಸ್ಟಾರ್ ಗಿರಿ ಕೊಡಿಸಿದ್ದ ಅಕ್ಷಯ್ ಕಲ್ಲೇಗ ಭೀಕರ ಕೊಲೆ ಪ್ರಕರಣ – ನಾಲ್ಕು ಆರೋಪಿಗಳಿಗೆ ನ.22ರವರೆಗೆ ನ್ಯಾಯಾಂಗ ಬಂಧನ
- ಕರಾವಳಿ
- November 8, 2023
- No Comment
- 65
ನ್ಯೂಸ್ ಆ್ಯರೋ : ಪುತ್ತೂರಿನಲ್ಲಿ ಹುಲಿವೇಷಕ್ಕೆ ಸ್ಟಾರ್ ಗಿರಿ ಕೊಡಿಸಿದ್ದ ಅಕ್ಷಯ್ ಕಲ್ಲೇಗನನ್ನು ಕೊಲೆ ಮಾಡಿದ ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರೋಪಿಗಳಾದ ಮಂಜುನಾಥ ಹಾಗೂ ಚೇತನ್ ಮತ್ತು ಕೇಶವ, ಮನೀಶ್ ಎಂಬವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನಿನ್ನೆ ಸಂಜೆ ಆರೋಪಿಗಳೊಂದಿಗೆ ಪೋಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಮೂವರು ಆರೋಪಿಗಳನ್ನು ಕೃತ್ಯ ನಡೆದ ಸ್ಥಳಕ್ಕೆ ಕರಕೊಂಡು ಹೋಗಿ ಮಹಜರು ನಡೆಸಿದರು.
ನೆಹರೂ ನಗರಕ್ಕೆ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಕರಕೊಂಡು ಬಂದಾಗ ಆರೋಪಿಗಳನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಮಹಜರು ಸ್ಥಳದಲ್ಲೇ ಅಕ್ಷಯ್ ಕಲ್ಲೇಗ ಗುಂಪು ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದು ನಿಮ್ಮನ್ನು ಬಿಡುವುದಿಲ್ಲ ಎಂದು ಆಕೋಶ ವ್ಯಕ್ತಪಡಿಸಿ ಪರಿಸ್ಥಿತಿ ವಿಕೋಪಕ್ಕೆ ತೆರಳುವುದನ್ನು ಗಮನಿಸಿದ ಪೋಲಿಸರು ಕೂಡಲೇ ಜನರನ್ನು ಚದುರಿಸಿ ಮಹಜರಿಗೆ ಅನುವು ಮಾಡಿಕೊಟ್ಟಿದ್ದರು.
ನ.7 ರಂದು ಅಂದರೆ ನಿನ್ನೆ ರಾತ್ರಿ ನಾಲ್ಕು ಜನ ಆರೋಪಿಗಳನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ಇಂದು ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಇನ್ನು ನ್ಯಾಯಾಧೀಶರು ಆರೋಪಿಗಳನ್ನು ನ.22ರ ತನಕ ನ್ಯಾಯಾಂಗ ಬಂಧನಕ್ಕೊಳಪಡಿಸಿ ಎಂದು ಆದೇಶಿಸಿದ್ದು, ಅತ್ತ ಕೊಲೆಯಾದ ಅಕ್ಷಯ್ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ.