ಕೇನ್ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆ; ಕೊಹ್ಲಿಯನ್ನು ಹಿಂದಿಕ್ಕಿದ ವಿಲಿಯಮ್ಸನ್

kane-williamson
Spread the love

ನ್ಯೂಸ್ ಆ್ಯರೋ: ನ್ಯೂಝಿಲೆಂಡ್ ತಂಡದ ಸ್ಟಾರ್ ಬ್ಯಾಟರ್ ಕೇನ್ ವಿಲಿಯಮ್ಸನ್ ತಮ್ಮ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಗೊಳಿಸಿದ್ದಾರೆ. ಅದು ಕೂಡ ನ್ಯೂಝಿಲೆಂಡ್​​ನ ಯಾವುದೇ ಬ್ಯಾಟರ್​​​ಗೂ ಸಾಧ್ಯವಾಗದ ದಾಖಲೆ ಬರೆಯುವ ಎಂಬುದು ವಿಶೇಷ. ಕ್ರೈಸ್ಟ್​ ಚರ್ಚ್​​ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ವಿಲಿಯಮ್ಸನ್ 93 ರನ್ ಬಾರಿಸಿದ್ದರು.

ಇನ್ನು ದ್ವಿತೀಯ ಇನಿಂಗ್ಸ್​​ನಲ್ಲಿ 61 ರನ್​​ಗಳ ಕೊಡುಗೆ ನೀಡಿದ್ದಾರೆ. ಈ ಎರಡು ಅರ್ಧಶತಕಗಳೊಂದಿಗೆ ಕೇನ್ ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್​ನಲ್ಲಿ 9000 ರನ್ ಪೂರೈಸಿದ್ದಾರೆ. ಇದರೊದಿಗೆ ಈ ಸಾಧನೆ ಮಾಡಿದ ನ್ಯೂಝಿಲೆಂಡ್​​ನ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

ವಿಶೇಷ ಎಂದರೆ ಕೇನ್ ವಿಲಿಯಮ್ಸನ್ ಈ ಸಾಧನೆ ಮಾಡಲು ತೆಗೆದುಕೊಂಡಿರುವುದು ಕೇವಲ 182 ಟೆಸ್ಟ್ ಇನಿಂಗ್ಸ್​ ಮಾತ್ರ. ಅಂದರೆ ವಿರಾಟ್ ಕೊಹ್ಲಿ ಹಾಗೂ ಜೋ ರೂಟ್​​ಗಿಂತ ಕಡಿಮೆ ಪಂದ್ಯಗಳ ಮೂಲಕ ವಿಲಿಯಮ್ಸನ್ 9000 ರನ್ ಕಲೆಹಾಕಿದ್ದಾರೆ.

ಕಿಂಗ್ ಕೊಹ್ಲಿ ಟೆಸ್ಟ್ ಕ್ರಿಕೆಟ್​​ನಲ್ಲಿ 9000 ರನ್ ಕಲೆಹಾಕಲು 197 ಇನಿಂಗ್ಸ್ ತೆಗೆದುಕೊಂಡಿದ್ದರು. ಹಾಗೆಯೇ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ 196 ಇನಿಂಗ್ಸ್​ಗಳ ಮೂಲಕ ಈ ಸಾಧನೆ ಮಾಡಿದ್ದರು. ಇದೀಗ 182 ಇನಿಂಗ್ಸ್​​ಗಳಲ್ಲಿ 9 ಸಾವಿರ ರನ್ ಪೂರೈಸಿ ಕೇನ್ ವಿಲಿಯಮ್ಸನ್ ಕೊಹ್ಲಿ-ರೂಟ್​​ರನ್ನು ಹಿಂದಿಕ್ಕಿದ್ದಾರೆ.

ಇನ್ನು ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲಿ ಅತೀ ವೇಗವಾಗಿ 9000 ರನ್ ಕಲೆಹಾಕಿದ ವಿಶ್ವ ದಾಖಲೆ ಶ್ರೀಲಂಕಾದ ಕುಮಾರ ಸಂಗಾಕ್ಕರ ಹೆಸರಿನಲ್ಲಿದೆ. ಸಂಗಕ್ಕಾರ ಕೇವಲ 172 ಇನಿಂಗ್ಸ್​​ಗಳ ಮೂಲಕ ಈ ಸಾಧನೆ ಮಾಡಿದರೆ, ಸ್ಟೀವ್ ಸ್ಮಿತ್ 174 ಇನಿಂಗ್ಸ್​​​ಗಳಲ್ಲಿ 9000 ರನ್ ಕಲೆಹಾಕಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!