ಕೆಪಿಎಸ್‌ಸಿ ಯಿಂದ ನೇಮಕ ಅಧಿಸೂಚನೆ – ವಿವಿಧ ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ವಿವರ ಇಲ್ಲಿದೆ. ‌

ಕೆಪಿಎಸ್‌ಸಿ ಯಿಂದ ನೇಮಕ ಅಧಿಸೂಚನೆ – ವಿವಿಧ ಟೆಕ್ನಿಕಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ವಿವರ ಇಲ್ಲಿದೆ. ‌

ನ್ಯೂಸ್ ಆ್ಯರೋ : ಕರ್ನಾಟಕ ಲೋಕಸೇವಾ ಆಯೋಗದಿಂದ (ಕೆಪಿಎಸ್‌ಸಿ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜ್ಯೂನಿಯರ್ ಪ್ರೋಗ್ರಾಮರ್, ಡಾಟಾಬೇಸ್ ಆಡ್ಮಿನ್ ನೆಟ್ವರ್ಕ್ ಆಡ್ಮಿನ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹಾರ್ಡ್‌ವೇರ್ ಟೆಕ್ನಿಷಿಯನ್ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುತ್ತಿದೆ.

ಹುದ್ದೆಗಳ ವಿವರ:
ಜೂನಿಯರ್ ಪ್ರೋಗ್ರಾಮರ್-1, ಡಾಟಾ ಬೇಸ್ ಆಡ್ಮಿನ್-1, ನೆಟ್ವರ್ಕ್ ಆಡ್ಮಿನ್-1, ಹಾರ್ಡ್ವೇರ್ ಟೆಕ್ನಿಷಿಯನ್-1 ಸೇರಿದಂತೆ ಒಟ್ಟು 4 ಹುದ್ದೆಗಳು ಖಾಲಿ ಇವೆ.

ವಿದ್ಯಾರ್ಹತೆ:
ಕಂಪ್ಯೂಟರ್ ಸೈನ್ಸ್ ಅಥವಾ ಮಾಹಿತಿ ತಂತ್ರಜ್ಞಾನ, ಇ & ಸಿನಲ್ಲಿ ಇಂಜಿನಿಯರಿಂಗ್ ಪದವಿ ಅಥವಾ ಎಂಎಸ್ಸಿಯಲ್ಲಿ ಸಿಎಸ್, ಐಟಿ, ಐಎಸ್ ಐಚ್ಚಿಕ ವಿಷಯಗಳಲ್ಲಿ ಪದವಿ ಪಡೆದಿರಬೇಕು.

ಆಯ್ಕೆ ಹೇಗೆ?
ಅಭ್ಯರ್ಥಿಗಳನ್ನು ಕಿರು ಪರೀಕ್ಷೆ ನಡೆಸಿದ ಬಳಿಕ ಶಾರ್ಟ್ಲಿಸ್ಟ್ ಮಾಡಿ ಸಂದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನದಲ್ಲಿ ಎನ್ಐಸಿ ಸಂಸ್ಥೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಇರಲಿದೆ. ಅಭ್ಯರ್ಥಿಗಳನ್ನು 3 ವರ್ಷದ ಅವಧಿಗೆ ಗುತ್ತಿಗೆ ಆಧಾರದಡಿ ಆಯ್ಕೆ ಮಾಡಲಾಗುತ್ತದೆ. 1 ವರ್ಷದ ನಂತರ ಕಾರ್ಯದಕ್ಷತೆ ಪರಿಶೀಲಿಸಿ ನಂತರದ ಅವಧಿಯ ಬಗ್ಗೆ ನಿರ್ಧರಿಸಲಾಗುತ್ತದೆ. ಮೊದಲ ಮೂರು ತಿಂಗಳು ಪ್ರೊಬೇಷನರಿ ಅವಧಿ ಇರಲಿದೆ. ಕೆಪಿಎಸ್ಸಿ ನಿಯಮದ ಅನುಸಾರ ವೇತನ ಮತ್ತು ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಕೆ:
ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ನಿಗದಿತ ವಿದ್ಯಾರ್ಹತೆ ಮತ್ತು ಅಗತ್ಯ ಸೇವಾನುಭವದ ದಾಖಲೆ, ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ವಿವರಗಳನ್ನೊಳಗೊಂಡ ಸಂಪೂರ್ಣ ಮಾಹಿತಿ ಕುರಿತ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 7 ದಿನಗಳೊಳಗಾಗಿ ಈ ಕೆಳಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ:

ಸುರಳ್ಕರ್ ವಿಕಾಸ್ ಕಿಶೋರ್, ಭಾ.ಆ.ಸೇ, ಕಾರ್ಯದರ್ಶಿಗಳು, ಕರ್ನಾಟಕ ಲೋಕ ಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001. ಜುಲೈ 24ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 31 ಕಡೆಯ ದಿನಾಂಕ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *