ಬೆಂಗಳೂರು ಏರ್‌ಪೋರ್ಟ್ ಕಂಡು ಜಪಾನ್ ಮಹಿಳೆ ಶಾಕ್; ಟರ್ಮಿನಲ್ 2 ಸೊಬಗನ್ನು ಕಂಡು ಮನಸೋತ ವಿಡಿಯೋ ವೈರಲ್
ನ್ಯೂಸ್ ಆ್ಯರೋ: ಗ್ರೀನ್ ಏರ್‌ಪೋರ್ಟ್ ಪರಿಕಲ್ಪನೆಯಲ್ಲಿ ನಿರ್ಮಾಣವಾದ ನಮ್ಮ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣ ಅಂತಾನೇ ಹೇಳಬಹುದು. ಹಚ್ಚ ಹಸಿರಿನಿಂದ ಕೂಡಿದ ಈ ಪರಿಸರ ಸ್ನೇಹಿ ಏರ್‌ಪೋರ್ಟ್ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ.
ಇದೀಗ ಮೊದಲ ಬಾರಿಗೆ ಈ ವಿಮಾನ ನಿಲ್ದಾಣಕ್ಕೆ ಭೇಟಿ ಕೊಟ್ಟಂತಹ ಜಪಾನ್ ಮಹಿಳೆಯೊಬ್ಬರೂ ಕೂಡಾ ಇಲ್ಲಿನ ಸೌಂದರ್ಕ್ಕೆ ಮಾರು ಹೋಗಿದ್ದು, ಅರೇ ಭಾರತದ ವಿಮಾನ ನಿಲ್ದಾಣದಲ್ಲಿ ಇದ್ದೇನೆಂದು ನಂಬಲಾಗುತ್ತಿಲ್ಲ ಎನ್ನುತ್ತಾ ಫುಲ್ ಶಾಕ್ ಆಗಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಜಪಾನಿನ ಟ್ರಾವೆಲ್ ವ್ಲಾಗರ್ ಕಿಕಿ ಚೆನ್ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಬಂದಿಳಿದಾಗ ಇಲ್ಲಿನ ಅದ್ಭುತ ಸೌಂದರ್ಯವನ್ನು ಕಂಡು ದಿಗ್ಭ್ರಮೆಗೊಂಡಿದ್ದಾರೆ. ಈ ಕುರಿತ ವಿಡಿಯೋವನ್ನು ಆಶೇಂದ್ರ ಪಾಟೇಲ್ (IamAshendra) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಜಪಾನ್ ಟ್ರಾವೆಲ್ ವ್ಲೋಗರ್ ಬೆಂಗಳೂರು ಏರ್‌ಪೋರ್ಟ್‌ನ ಟರ್ಮಿನಲ್ 2 ರ ಸೊಬಗನ್ನು ಕಂಡು ಮನಸೋತಂತಹ ದೃಶ್ಯವನ್ನು ಕಾಣಬಹುದು. ಆಕೆ ಏರ್‌ಪೋರ್ಟ್‌ನಲ್ಲಿರುವ ಈವೆಂಟ್ ಸ್ಪೇಸ್, ನಿಕೋಬಾರ್ ಲೌಂಜ್, ಎಂಟರ್ಟೈನ್ಮೆಂಟ್ ಏರಿಯಾಗಳನ್ನೆಲ್ಲಾ ತಿರುಗಾಡುತ್ತಾ ನಾನು ಭಾರತದಲ್ಲಿನ ವಿಮಾನ ನಿಲ್ದಾಣದಲ್ಲಿ ಇದ್ದೇನೆಂದು ನನಗೆ ನಂಬಲಾಗುತ್ತಿಲ್ಲ ಎನ್ನುತ್ತಾ ಏರ್‌ಪೋರ್ಟ್ ಸೌಂದರ್ಯವನ್ನು ಕಂಡು ಮನಸೋತಿದ್ದಾರೆ.
ನವೆಂಬರ್ 13 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼವಾವ್ಹ್ ನಿಜಕ್ಕೂ ಈ ಏರ್‌ಪೋರ್ಟ್ ಅದ್ಭುತವಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ವಿಡಿಯೋವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳುʼ ಎಂದು ಹೇಳಿದ್ದಾರೆ.
https://x.com/IamAshendra/status/1856677591278649723
Leave a Comment