ಇಲ್ಲಿ ಕೇವಲ 3 ರೂ.ಗೆ ಬಿರಿಯಾನಿ ಮಾರಾಟ; ಅಚ್ಚರಿ ಎನಿಸಿದ್ರು ಸತ್ಯ, ಎಲ್ಲಿ ಗೊತ್ತಾ?
ನ್ಯೂಸ್ ಆ್ಯರೋ: ಬಿರಿಯಾನಿಯನ್ನು ಇಷ್ಟಪಡದವರೇ ಇಲ್ಲ. ಬಿರಿಯಾನಿ ಹೆಸರು ಹೇಳಿದರೆ ಸಾಕು ಜನ ಉತ್ಸುಕರಾಗಿ ಅದನ್ನು ತಿನ್ನಲು ಕಾಯುತ್ತಿರುತ್ತಾರೆ. ಇಷ್ಟು ಕಡಿಮೆ ಬೆಲೆಗೆ ಬಿರಿಯಾನಿ ಎಂದರೇ ನೀವು ಆಶ್ಚರ್ಯ ಪಡುತ್ತೀರಾ? ಕೇಳಲು ಕೊಂಚ ಅಚ್ಚರಿ ಎನಿಸಿದ್ರು ಕೂಡಾ ಇದು ನಿಜ.
ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಜಂಗಾರೆಡ್ಡಿ ಗುಡೆಮ್‌ನಲ್ಲಿ ಹೊಸದಾಗಿ ತೆರೆದಿರುವ ರೆಸ್ಟೋರೆಂಟ್‌ವೊಂದರಲ್ಲಿ ಕೇವಲ 3 ರೂ.ಗೆ ಬಿರಿಯಾನಿ ನೀಡಲಾಗುತ್ತದೆ. ಜಂಗಾರೆಡ್ಡಿ ಗುಡೆಮ್‌ನಲ್ಲಿ ಹೊಸ ಶಾಖೆಯನ್ನು ಪ್ರಾರಂಭಿಸಿದೆ. ಈ ರೆಸ್ಟೋರೆಂಟ್ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ, ರೆಸ್ಟೋರೆಂಟ್ ಮ್ಯಾನೇಜರ್ ಖಾದ್ಯ ಪ್ರಿಯರಿಗೆ ಕಣ್ಮನ ಸೆಳೆಯುವ ಬಂಪರ್ ಕೊಡುಗೆಯನ್ನು ಘೋಷಿಸಿದ್ದಾರೆ.
ಕೇವಲ 3 ರೂಪಾಯಿ ಕೊಟ್ಟರೆ ಸಾಕು, ಒಂದು ವಾರದವರೆಗೆ ಸುತ್ತಲಿನ ಪ್ರದೇಶಗಳಲ್ಲಿ ಪ್ರಚಾರ ಮಾಡಿದರು. ಬಿರಿಯಾನಿ ಆಫರ್‌ನಿಂದಾಗಿ ನಿರೀಕ್ಷೆಗೂ ಮೀರಿ ಜನರು ರೆಸ್ಟೋರೆಂಟ್‌ಗೆ ಆಗಮಿಸಿದ್ದಾರೆ. ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ರೆಸ್ಟೋರೆಂಟ್ ಹೊರಗೆ ಸರತಿ ಸಾಲುಗಳನ್ನು ವಿಶೇಷವಾಗಿ ಸ್ಥಾಪಿಸಿದೆ.
ಈ ಕೊಡುಗೆಯು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಈ ಬಂಪರ್ ಆಫರ್ ಕೇವಲ ಮೂರು ತಾಸಿಗೆ ಸಿಗುತ್ತಿದ್ದಂತೆ ಸಾವಿರಾರು ಜನ ಅಲ್ಲಿಗೆ ಬಂದಿದ್ದರು. ಸುಮಾರು 5 ಸಾವಿರ ಮಂದಿ ಈ ಆಫರ್ ಪಡೆದುಕೊಂಡಿದ್ದಾರೆ ಎಂದು ರೆಸ್ಟೋರೆಂಟ್ ಮಾಲೀಕರು ತಿಳಿಸಿದ್ದಾರೆ.
Leave a Comment