ಬಾಹ್ಯಾಕಾಶದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು; ಸ್ಪೇಡೆಕ್ಸ್ ರಾಕೆಟ್ ಉಡಾವಣೆ
ನ್ಯೂಸ್ ಆ್ಯರೋ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಮಹತ್ವಾಕಾಂಕ್ಷೆಯ ಮಿಷನ್ PSLV C-60 ಅನ್ನು ಸೋಮವಾರ ರಾತ್ರಿ 10:15 ಕ್ಕೆ ಪರಸ್ಪರ ಜೋಡಿಸುವ ಮತ್ತು ಪ್ರತ್ಯೇಕಿಸುವ ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸುವ ಎರಡು ಬಾಹ್ಯಾಕಾಶ ನೌಕೆಗಳನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾಯಿಸಿದೆ. ಇಸ್ರೋ ಇದನ್ನು ವಿಶೇಷವಾಗಿ ವರ್ಕ್‌ಹಾರ್ಸ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಬಳಸಿ ಸುಮಾರು 220 ಕೆಜಿ ತೂಕದ ಬಾಹ್ಯಾಕಾಶ ನೌಕೆಗಳನ್ನು ಉಡಾವಣೆ ಮಾಡಿದೆ.
ಬಾಹ್ಯಾಕಾಶದಲ್ಲಿ ಜೋಡಣೆಯಾಗುವ ಎರಡು ಉಪಗ್ರಹಗಳ ನಡುವೆ ವಿದ್ಯುತ್ ಶಕ್ತಿಯ ಹಂಚಿಕೆ ನಡೆಸುವುದು ಈ ಯೋಜನೆಯ ಮುಖ್ಯ ಗುರಿಗಳಲ್ಲಿ ಒಂದಾಗಿದೆ. ಭಾರತದ ಭವಿಷ್ಯದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಯೋಜನೆಗಳಾದ ರೋಬೋಟಿಕ್ ಯೋಜನೆಗಳು, ಭಾರತದ ಸ್ವಂತ ಬಾಹ್ಯಾಕಾಶ ನಿಲ್ದಾಣವಾದ ಭಾರತೀಯ ಅಂತರಿಕ್ಷ ಸ್ಟೇಷನ್ (ಬಿಎಎಸ್) ನಿರ್ಮಾಣಗಳಲ್ಲಿ ಈ ಸಾಮರ್ಥ್ಯ ಅತ್ಯಂತ ಅವಶ್ಯಕವಾಗಿದ್ದು, ಇದರಿಂದ ಭಾರತವು ಅಂತಹ ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.
ಈ ಸಾಧನೆಯು ಚಂದ್ರನ ಮಾದರಿಗಳನ್ನು ಹಿಂತಿರುಗಿಸುವುದು ಮತ್ತು ಭಾರತದ ಪ್ರಸ್ತಾವಿತ ಭಾರತೀಯ ಅಂತರಿಕ್ಷ ನಿಲ್ದಾಣವನ್ನು ಸ್ಥಾಪಿಸುವುದು ಸೇರಿದಂತೆ ಮಹತ್ವಾಕಾಂಕ್ಷೆಯ ಪ್ರಯತ್ನಗಳಿಗೆ ದಾರಿ ಮಾಡಿಕೊಡುತ್ತದೆ.
ಈ ಕಾರ್ಯಾಚರಣೆಯ ಕೇಂದ್ರಬಿಂದುವೆಂದರೆ ಟಾರ್ಗೆಟ್ ಮತ್ತು ಚೇಸರ್ ಎಂದು ಹೆಸರಿಸಲಾಗಿರುವ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಹೊತ್ತೊಯ್ದಿದೆ. ಈ ಬಾಹ್ಯಾಕಾಶ ನೌಕೆಗಳನ್ನು 55° ಇಳಿಜಾರಿನಲ್ಲಿ 470 ಕಿಮೀ ವೃತ್ತಾಕಾರದ ಕಕ್ಷೆಗೆ ಉಡಾಯಿಸಲಾಗಿದ್ದು, ಅಲ್ಲಿ ಅವು ಡಾಕಿಂಗ್ ಮತ್ತು ಅನ್‌ಡಾಕಿಂಗ್ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಹಲವಾರು ಕುಶಲತೆಯನ್ನು ನಿರ್ವಹಿಸುತ್ತವೆ.
ಇನ್ನು ಉಪಗ್ರಹದಲ್ಲಿ ಒಟ್ಟು 24 ಪೇಲೋಡ್‌ಗಳಲ್ಲಿದ್ದು, ಅವುಗಳಲ್ಲಿ 14 ವಿವಿಧ ಇಸ್ರೋ ಕೇಂದ್ರಗಳಿಂದ ಬಂದಿದ್ದರೆ, 10 ವಿವಿಧ ಸ್ಟಾರ್ಟ್‌ಅಪ್ ಹಾಗೂ ಶೈಕ್ಷಣಿಕ ಸಂಸ್ಥೆಗಳಿಂದ ಬಂದಿವೆ. ಇದು ಕಳದೆ ಇಸ್ರೋ ಮಿಷನಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಾಗಿದೆ. ಯಾಕೆಂದರೆ ಕಳದೆ ಬಾರಿ ಇಸ್ರೋ ಕೇವಲ ಎಂಟು ಪೇಲೋಡ್‌ಗಳನ್ನು ಮಾತ್ರ ಕೊಂಡ್ಯದಿತ್ತು.
ಇನ್ನು ಪೇಲೋಡ್‌ಗಳಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಚಿಕ್ಕಬಳ್ಳಾಪುರ ಎಸ್‌ಜೆಸಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೆಂಗಳೂರಿನ ಆರ್‌ವಿ ಇಂಜಿನಿಯರಿಂಗ್ ಕಾಲೇಜುಗಳು ಒಂದು ಪೇಲೋಡ್‌ಯಿದ್ದು, ಅದರಲ್ಲಿ ಬಿಜಿಎಸ್ ಅರ್ಪಿತ್ ಪೇಲೋಡ್ ಧ್ವನಿ, ಸಂದೇಶ ಮತ್ತು ಛಾಯಾಚಿತ್ರಗಳನ್ನು ಬಾಹ್ಯಾಕಾಶದಿಂದ ಎಫ್ಎಂ ಸಂಕೇತಗಳು ಮತ್ತು ವಿಎಚ್ಎಫ್ ಬ್ಯಾಂಡ್ ಮೂಲಕ ಭೂಮಿಗೆ ಕಳುಹಿಸುವ ಸಲುವಾಗಿ ವಿನ್ಯಾಸಗೊಂಡಿದ್ದು, ಇದು ಜಾಗತಿಕ ಅಮೆಚೂರ್ ರೇಡಿಯೋ ಸೇವೆಗಳಿಗೂ ಉತ್ತೇಜನ ನೀಡಲಿದೆ. ಹಾಗೂ ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್ ಸಹ ಸ್ಪೇಡೆಕ್ಸ್ ಯೋಜನೆಯಲ್ಲಿ ಮಹತ್ವದ ಜೀವಶಾಸ್ತ್ರೀಯ ಅಧ್ಯಯನ ನಡೆಸಲಿದೆ.
ಆರ್‌ವಿ ಸಂಸ್ಥೆ ಬಾಹ್ಯಾಕಾಶದ ವಿಶಿಷ್ಟ ವಾತಾವರಣದಲ್ಲಿ ಕರುಳಿನ ಬ್ಯಾಕ್ಟೀರಿಯಾಗಳು ಹೇಗೆ ಬೆಳೆಯುತ್ತವೆ ಎಂಬುದರ ಅಧ್ಯಯನ ನಡೆಸಲಿದ್ದು, ಇದರ ಫಲಿತಾಂಶಗಳು ಗಗನಯಾತ್ರಿಗಳ ಆರೋಗ್ಯ ರಕ್ಷಣೆ ಮತ್ತು ಆಧುನಿಕ ಜೈವಿಕ ಪ್ರಕ್ರಿಯೆಗಳಿಗೆ ಬಹಳಷ್ಟು ನೆರವು ನೀಡಲಿವೆ.
Leave a Comment