ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ; ಮೇಯರ್ ಸೇರಿದಂತೆ 5 ಮಂದಿ ಸಾವು

Israel Gaza
Spread the love

ನ್ಯೂಸ್ ಆ್ಯರೋ: ದಕ್ಷಿಣ ಲೆಬನಾನಿನ ಪಟ್ಟಣವಾದ ನಬಾತಿಯೆಹ್‌ನಲ್ಲಿರುವ ಪುರಸಭೆಯ ಕಟ್ಟಡದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಐದು ಜನರು ಸಾವಿಗೀಡಾಗಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ. ದಕ್ಷಿಣ ನಗರದ ಮಾರುಕಟ್ಟೆಯನ್ನು ನಾಶಪಡಿಸಿದ ದಿನಗಳ ನಂತರ ಇಸ್ರೇಲ್ ನಬಾತಿಯೆಹ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 11 ವೈಮಾನಿಕ ದಾಳಿ ನಡೆಸಿತು ಎಂದು ಲೆಬನಾನಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಇಸ್ರೇಲಿ ಶತ್ರುಗಳ ದಾಳಿ ನಬಾತಿಯೆಹ್ ಪುರಸಭೆ ಮತ್ತು ಪುರಸಭೆಗಳ ಒಕ್ಕೂಟದ ಎರಡು ಕಟ್ಟಡಗಳ ಮೇಲೆ ದಾಳಿ ನಡೆಸಿದ್ದು, ಐವರನ್ನು ಹತ್ಯೆ ಮಾಡಿದೆ ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ದಾಳಿಯಲ್ಲಿ ಮೃತಪಟ್ಟವರಲ್ಲಿ ನಗರದ ಮೇಯರ್ ಕೂಡ ಸೇರಿದ್ದಾರೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿರುವ ಬದುಕುಳಿದವರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ. ದಾಳಿಯು ಇಸ್ರೇಲ್-ಲೆಬನಾನ್ ಗಡಿಯಲ್ಲಿ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವಾಗ ಈ ವೈಮಾನಿಕ ದಾಳಿ ನಡೆದಿದೆ.

ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಗಳು ತೀವ್ರಗೊಂಡಿದ್ದು, ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವು ನೆರೆಯ ಪ್ರದೇಶಗಳಿಗೆ ಹರಡಿ, ಪ್ರಾದೇಶಿಕ ಯುದ್ಧದ ಭಯವನ್ನು ಹೆಚ್ಚಿಸಿದೆ.

ಲೆಬನಾನ್‌ನಲ್ಲಿನ ಇಸ್ರೇಲಿ ಆಕ್ರಮಣದ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಮಂಗಳವಾರ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು ಇತ್ತೀಚಿನ ದಾಳಿ ಬಗ್ಗೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸರ್ಕಾರಕ್ಕೆ ವಾಷಿಂಗ್ಟನ್ ತನ್ನ ಕಳವಳವನ್ನು ತಿಳಿಸಿದ್ದಾರೆ ಎಂದು ಹೇಳಿದರು.

Leave a Comment

Leave a Reply

Your email address will not be published. Required fields are marked *

error: Content is protected !!