ಸರಕಾರಿ ಕೆಲಸಕ್ಕೆ ಐಫೋನ್ ಬಳಸುವಂತಿಲ್ಲ – ಎಲ್ಲಿ ಈ ನಿಯಮ? ಯಾಕಾಗಿ?

ಸರಕಾರಿ ಕೆಲಸಕ್ಕೆ ಐಫೋನ್ ಬಳಸುವಂತಿಲ್ಲ – ಎಲ್ಲಿ ಈ ನಿಯಮ? ಯಾಕಾಗಿ?

ನ್ಯೂಸ್ ಆ್ಯರೋ‌ : ಸರಕಾರಿ ಉದ್ಯೋಗಿಗಳು ಇನ್ನು ಮುಂದೆ ಕೆಲಸದ ಉದ್ದೇಶಗಳಿಗೆ ಐಫೋನ್ ಅಥವಾ ಐಪ್ಯಾಡ್ ಬಳಸುವಂತಿಲ್ಲ. ಅರೇ ಅದ್ಯಾಕೆ ಹಾಗೆ? ಇನ್ನೇನು ಮಾಡೋದು? ಎಂಬ ಚಿಂತೆ ಬೇಡ. ಯಾಕೆಂದರೆ ಈ ನಿಯಮ ಜಾರಿಯಾಗಿರುವುದು ರಷ್ಯಾದಲ್ಲಿ.

ಯಾಕಾಗಿ ಈ ನಿಯಮ?

ರಷ್ಯಾದ ಡಿಜಿಟಲ್ ಅಭಿವೃದ್ದಿ ಸಚಿವಾಲಯ ಇಂತಹ ಆದೇಶ ಹೊರಡಿಸಿದೆ. ಅಮೆರಿಕದ ಬೇಹುಗಾರಿಕೆ ಕಾರ್ಯಾಚರಣೆಯ ಪರಿಣಾಮವಾಗಿ ಆ್ಯಪಲ್ ರಾಜಿ ಮಾಡಿಕೊಂಡಿದೆ ಎಂದು ರಷ್ಯಾದ ಭದ್ರತಾ ಸಂಸ್ಥೆ ಎಫ್.ಎಸ್.ಬಿ. ಹೇಳಿದ 2 ತಿಂಗಳ ಬಳಿಕ ಈ ಆದೇಶ ಹೊರಡಿಸಲಾಗಿದೆ. ಇತ್ತ ಅಮೆರಿಕ ಆರೋಪವನ್ನು ತಳ್ಳಿ ಹಾಕಿದೆ.

ಸರಕಾರಿ ಕೆಲಸದ ಅಪ್ಲಿಕೇಷನ್ ಬಳಸಲು, ಇಮೇಲ್ ವಿನಿಮಯ ಮಾಡಿಕೊಳ್ಳಲು ಐಫೋನ್ ಬಳಸುವಂತಿಲ್ಲ. ವೈಯಕ್ತಿಕ ಅಗತ್ಯಗಳಿಗೆ ಐಫೋನ್ ಬಳಕೆಗೆ ನಿರ್ಬಂಧವಿಲ್ಲ ಎಂದು ಸಚಿವ ಮಕ್ಸುತ್ ಶಾದೇವ್ ತಿಳಿಸಿದ್ದಾರೆ.

ಅಮೆರಿಕ ಬೇಹುಗಾರಿಕೆ ನಡೆಸುತ್ತಿದೆ, ಐಫೋನ್ ಮೂಲಕ ಕದ್ದಾಲಿಕೆ ಮಾಡುತ್ತಿದೆ ಎಂಬ ಸಂಶಯ ರಷ್ಯಾವನ್ನು ಕಾಡುತ್ತಿರುವುದರಿಂದ ಆದೇಶ ಹೊರಡಿಸಿ ಎಚ್ಚರಿಕೆ ನೀಡಿದೆ.

Related post

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ದಿನ‌ ಭವಿಷ್ಯ 21-05-2024 ಮಂಗಳವಾರ| ಇಂದಿನ ರಾಶಿಫಲ ಹೀಗಿದೆ..

ಮೇಷಸಂತೃಪ್ತಿಯ ಜೀವನಕ್ಕಾಗಿ ನಿಮ್ಮ ಮಾನಸಿಕ ದೃಢತೆಯನ್ನು ಸುಧಾರಿಸಿ. ನೀವು ಇಂದು ಗಣನೀಯ ಪ್ರಮಾಣದ ಹಣವನ್ನು ಸಹ ಹೊಂದಿರುತ್ತೀರಿ ಮತ್ತು ಅದರೊಂದಿಗೆ ಮನಸ್ಸಿನ ಶಾಂತಿ ಇರುತ್ತದೆ. ಸ್ನೇಹಿತರು ಸಂತೋಷದ ಸಂಜೆಗಾಗಿ…
ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…

Leave a Reply

Your email address will not be published. Required fields are marked *