ಜಪಾನ್ ರಾಯಭಾರಿಯನ್ನೂ ಕುಣಿಸಿದ ‘ಕಾವಾಲಯ್ಯ’ ಹಾಡು – ಮಿಲ್ಕಿ ಬ್ಯೂಟಿ ತಮನ್ನಾಗಿಂತಲೂ ಸೂಪರ್ ಕುಣಿದ ರಾಯಭಾರಿಯ ವಿಡಿಯೋ ವೈರಲ್..!

ಜಪಾನ್ ರಾಯಭಾರಿಯನ್ನೂ ಕುಣಿಸಿದ ‘ಕಾವಾಲಯ್ಯ’ ಹಾಡು – ಮಿಲ್ಕಿ ಬ್ಯೂಟಿ ತಮನ್ನಾಗಿಂತಲೂ ಸೂಪರ್ ಕುಣಿದ ರಾಯಭಾರಿಯ ವಿಡಿಯೋ ವೈರಲ್..!

ನ್ಯೂಸ್ ಆ್ಯರೋ‌ : ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರ ಬಾಕ್ಸ್ ಆಫೀಸ್ ಅನ್ನು ಅಕ್ಷರಶಃ ಧೂಳೆಬ್ಬಿಸಿದೆ. ಈ ಚಿತ್ರ ಸದ್ಯ ವಿಶ್ವಾದ್ಯಂತ 400 ಕೋಟಿ ರೂ.ಗೂ ಹೆಚ್ಚಿನ ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಭಾರತದಲ್ಲಿ ಮಾತ್ರ 226 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆ ಮೂಲಕ ರಜನಿಕಾಂತ್ ಹವಾ ಇನ್ನೂ ತಣ್ಣಗಾಗಿಲ್ಲ ಎನ್ನುವುದನ್ನು ಸಾಬೀತು ಪಡಿಸಿದೆ.

‘ಕಾವಾಲಯ್ಯ’ ಮೋಡಿ

ಬಿಡುಗಡೆಗೂ ಮುನ್ನ ‘ಜೈಲರ್’ ಚಿತ್ರ ನಿರೀಕ್ಷೆ ಮೂಡಿಸಲು ರಜನಿಕಾಂತ್ ಜೊತೆಗೆ ‘ಕಾವಾಲಯ್ಯ’ ಹಾಡು ಕೂಡ ಕಾರಣವಾಗಿತ್ತು. ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದ ಈ ಹಾಡಿಗೆ ಮಿಲ್ಕ್ ಬ್ಯೂಟಿ ತಮನ್ನಾ ಹೆಜ್ಜೆ ಹಾಕಿದ ರೀತಿಗೆ ಪ್ರೇಕ್ಷಕರು ಮನ ಸೋತಿದ್ದರು.

ಯೂ ಟ್ಯೂಬ್ ನಲ್ಲಿ ಬಿಡುಗಡೆಯಾದ ದಿನವೇ ಈ ಹಾಡು 80 ದಶಲಕ್ಷ ವೀಕ್ಷಣೆ ಕಂಡು ದಾಖಲೆ ನಿರ್ಮಿಸಿತ್ತು. ಅಲ್ಲಿಂದ ಬಳಿಕ ಅದರ ಮೋಡಿ ಇನ್ನೂ ನಿಂತಿಲ್ಲ. ಸೆಲೆಬ್ರಿಟಿಗಳಿಂದ ಹಿಡಿದು ಜನ ಸಾಮಾನ್ಯರವರೆಗೆ ಬಹುತೇಕರು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ.

ಇದೀಗ ಭಾರತದಲ್ಲಿರುವ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಈ ಹಾಡಿಗೆ ಸ್ಟೆಪ್ ಹಾಕಿ ಗಮನ ಸೆಳೆದಿದ್ದಾರೆ. ಹಿರೋಶಿ ಜಪಾನ್ ನ ಜನಪ್ರಿಯ ಯೂಟ್ಯೂಬರ್ ಮೇಯೊ ಸ್ಯಾನ್ ಜೊತೆ ಹೆಜ್ಜೆ ಹಾಕಿದ್ದು, ವೀಡಿಯೋ ವೈರಲ್ ಆಗಿದೆ. ಆದರೆ ಕೆಲವರು ಇದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎ.ಐ.) ಮಾಡಿರುವ ವೀಡಿಯೋದಂತಿದೆ ಎಂದಿದ್ದಾರೆ.

ಟ್ರೈಬಲ್ ಥೀಮ್ ನಲ್ಲಿ ಈ ಹಾಡು ತಯಾರಾಗಿದೆ. ‘ಕಾವಾಲಯ್ಯ’ ಹಾಡಿಗೆ ಬಾಲಿವುಡ್ ಗಾಯಕಿ ಶಿಲ್ಪಾ ರಾವ್ ಧ್ವನಿ ನೀಡಿದ್ದು, ಜಾನಿ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ. ಇನ್ನು ಚಿತ್ರದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅತಿಥಿ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *