ಪಾಕಿಸ್ತಾನಕ್ಕೆ ತೆರಳಿ ಇಸ್ಲಾಂ ಧರ್ಮ ಸ್ವೀಕರಿಸಿದ ಅಂಜುಗೆ ಭರ್ಜರಿ ಗಿಫ್ಟ್ – ಶ್ರೀಮಂತ ಉದ್ಯಮಿಯಿಂದ ಮನೆ, ಉದ್ಯೋಗದ ಆಫರ್

ಪಾಕಿಸ್ತಾನಕ್ಕೆ ತೆರಳಿ ಇಸ್ಲಾಂ ಧರ್ಮ ಸ್ವೀಕರಿಸಿದ ಅಂಜುಗೆ ಭರ್ಜರಿ ಗಿಫ್ಟ್ – ಶ್ರೀಮಂತ ಉದ್ಯಮಿಯಿಂದ ಮನೆ, ಉದ್ಯೋಗದ ಆಫರ್

ನ್ಯೂಸ್ ಆ್ಯರೋ‌ : ಫೇಸ್ ಬುಕ್ ಗೆಳೆಯ ನಸ್ರುಲ್ಲಾ ಭೇಟಿಗಾಗಿ ಪಾಕಿಸ್ತಾನಕ್ಕೆ ತೆರಳಿದ ರಾಜಸ್ತಾನ ಮೂಲದ ಅಂಜು ಅಲ್ಲಿ ಆತನನ್ನು ಮದುವೆಯಾಗಿ ಮತಾಂತರಗೊಂಡು ಫಾತಿಮಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾಳೆ. ಇದೀಗ ಆಕೆಗೆ ಅಲ್ಲಿನ ಉದ್ಯಮಿಯೊಬ್ಬರು ಭರ್ಜರಿ ಕೊಡುಗೆ ನೀಡಿದ್ದಾರೆ.

ಕೊಡುಗೆ ಏನು?

ಪಾಕ್ ಸ್ಟಾರ್ ಗ್ರೂಪ್ ಕಂಪೆನಿಯ ಸಿಇಒ ಮೊಹ್ಸಿನ್ ಖಾನ್ ಅಬ್ಬಾಸಿ ತಮ್ಮ ಕಂಪೆನಿಯಲ್ಲಿ ಅಂಜುಗೆ ಉದ್ಯೋಗದ ನೀಡುವ ಜೊತೆಗೆ ಸ್ವಂತ ಮನೆ ಸ್ಥಾಪಿಸಲು ನೆರವು ನೀಡಲಿದ್ದಾರೆ.

ಅಂಜು ತನ್ನ ಭಾರತದಲ್ಲಿನ ದಾಖಲೆಗಳ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಪಾಕ್ ಸ್ಟಾರ್ ಗ್ರೂಪ್ ಕಂಪೆನಿಯ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಉದ್ಯೋಗವನ್ನು ನೀಡುತ್ತೇವೆ ಎಂದು ಅಬ್ಬಾಸಿ ಹೇಳಿದ್ದಾರೆ.

ಶ್ರೀಮಂತರಿಗೆ ಕರೆ

ಅಂಜು ಮತ್ತು ನಸ್ರುಲ್ಲಾ ಅವರನ್ನು ಅಬ್ಬಾಸಿ ಭೇಟಿಯಾಗಿ ಉಭಯ ಕುಶಲೋಪರಿ ನಡೆಸಿದರು. ಅಲ್ಲದೆ, ದಂಪತಿಗೆ ನಿವೇಶನ ಭರವಸೆ ನೀಡಿದರು. ಜೊತೆಗೆ ಈ ದಂಪತಿಯನ್ನು ಬೆಂಬಲಿಸುವಂತೆ ಅಬ್ಬಾಸಿ ಪಾಕಿಸ್ತಾನದ ಸರಕಾರ ಮತ್ತು ಇತರ ಶ್ರೀಮಂತ ಉದ್ಯಮಿಗಳನ್ನು ಕೇಳಿಕೊಂಡಿದ್ದಾರೆ. ಅಲ್ಲದೆ ಉಡುಗೊರೆ ನೀಡುವಂತೆಯೂ ಕರೆ ನೀಡಿದ್ದಾರೆ.

ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಮತ್ತು ನಸ್ರುಲ್ಲಾನನ್ನು ಮದುವೆಯಾಗಲು ಭಾರತದಲ್ಲಿರುವ ಮನೆ ಮತ್ತು ತನ್ನವರನನ್ನು ತೊರೆದು ಪಾಕ್ ಗೆ ಆಗಮಿಸಿದ ಅಂಜುವನ್ನು ಸ್ವಾಗತಿಸುವ ಮಹತ್ವವನ್ನು ಅಬ್ಬಾಸಿ ಒತ್ತಿ ಹೇಳಿದರು. ಆಕೆಯ ಪ್ರಯಾಣವು ಇತರರಿಗೆ ಇಸ್ಲಾಂ ಧರ್ಮವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ಅಬ್ಬಾಸಿ ಹೇಳಿದ್ದಾರೆ.

ಈ ಮಧ್ಯೆ ಅಂಜು ಪಾಕಿಸ್ತಾನವನ್ನು ಹೊಳಿದ್ದಾಳೆ. ಬ್ಯೂಟಿಫುಲ್ ಪಾಕಿಸ್ತಾನ ಎಂಬ ಟ್ವಿಟರ್ ಪೇಜ್ ನಲ್ಲಿ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾಳೆ. ಜೊತೆಗೆ ಅಂಜು ಮತ್ತು ನಸ್ರುಲ್ಲಾ ಪಾಕಿಸ್ತಾನದ ವಿವಿಧ ತಾಣಗಳಲ್ಲಿ ಪೋಸ್ ನೀಡಿರುವ ಫೋಟೋ ವೈರಲ್ ಆಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *