ವ್ಯಕ್ತಿಯ ತುಟಿ ನೋಡಿ ಸ್ವಭಾವ ಕಂಡು ಹಿಡಿಯಬಹುದು – ನಿಮ್ಮ ಅಧರಗಳೇ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ ಗೊತ್ತಾ?

ವ್ಯಕ್ತಿಯ ತುಟಿ ನೋಡಿ ಸ್ವಭಾವ ಕಂಡು ಹಿಡಿಯಬಹುದು – ನಿಮ್ಮ ಅಧರಗಳೇ ನಿಮ್ಮ ವ್ಯಕ್ತಿತ್ವವನ್ನು ಹೇಳುತ್ತೆ ಗೊತ್ತಾ?

ನ್ಯೂಸ್‌ ಆ್ಯರೋ : ಮುಖ ನೋಡಿ ಲಕ್ಷಣ ಹೇಳುವುದುಂಟು, ಕೆಲವರು ಕೈಯ ರೇಖೆ ನೋಡಿ ಭವಿಷ್ಯ ಹೇಳುವುದನ್ನು ಕೇಳಿದ್ದೇವೆ. ಹಾಗೆಯೇ ತುಟಿಯ ಆಕಾರ ನೋಡಿಯೂ ಅವರ ಗುಣನಡತೆ ಹಾಗೂ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು.

ಮೇಲಿನ ತುಟಿ ದೊಡ್ಡ/ದಪ್ಪ

ಕೆಳಗಿನ ತುಟಿಗೆ ಹೋಲಿಸಿದರೆ ಮೇಲಿನ ತುಟಿ ದೊಡ್ಡ ಇದ್ದರೆ ಅಂತವರು ಪ್ರತಿ ವಿಚಾರಕ್ಕೂ ನಾಟಕ ಜಾಸ್ತಿ ಮಾಡುತ್ತಾರಂತೆ ಮತ್ತು ಮತ್ತೊಬ್ಬರ ಗಮನವನ್ನು ತಮ್ಮತ್ತ ಗಮನ ಸೆಳೆಯಲು ಬಯಸುತ್ತಾರೆ. ಅವರನ್ನೇ ತುಂಬಾ ಪ್ರೀತಿಸುತ್ತಾರೆ. ಇಂತವರ ಲವ್​ ಲೈಫ್​ ಚೆನ್ನಾಗಿರುತ್ತದೆ.

ದಪ್ಪದಾದ ಕೆಳತುಟಿ

ದೊಡ್ಡದಾದ ಕೆಳ ತುಟಿಯನ್ನು ಹೊಂದಿರುವ ಕಚೇರಿ ಕೆಲಸವನ್ನು ಮಾಡಲು ಇಷ್ಟ ಪಡುವುದಿಲ್ಲ. ಇಂತವರು ಮೋಜು-ಮಸ್ತಿ ಜೀವನ ಇಷ್ಟಪಡುತ್ತಾರೆ. ಹೊಸ ಸ್ಥಳಗಳಿಗೆ ಭೇಟಿ ನೀಡಲು, ಹೊಸ ಸ್ನೇಹಿತರನ್ನು ಹುಡುಕಲು ಮತ್ತು ಹೊಸ ಜನರನ್ನು ಭೇಟಿ ಮಾಡುವ ವ್ಯಕ್ತಿತ್ವವುಳ್ಳವರಾಗಿರುತ್ತಾರೆ. ಕುತೂಹಲಕಾರಿ ವಿಷಯಗಳನ್ನು ತಿಳಿಯಲು ಆಸಕ್ತಿ ಹೊಂದಿರುತ್ತಾರೆ.

ತೆಳ್ಳ/ಸಣ್ಣ ತುಟಿಗಳು

ತೆಳ್ಳಗಿನ ತುಟಿಗಳನ್ನು ಹೊಂದಿರುವವರು ಹೆಚ್ಚಾಗಿ ಒಂಟಿಯಾಗಿರಲು ಬಯಸುತ್ತಾರೆ. ಅವರು ಎಲ್ಲ ವಿಚಾರದಲ್ಲಿ ಸ್ವತಂತ್ರರಾಗಿರಲು ಬಯಸುತ್ತಾರೆ ಮತ್ತು ಯಾವುದೇ ರೀತಿಯ ಸಮಸ್ಯೆಯನ್ನು ನಿಭಾಯಿಸಬಲ್ಲರು. ಅವರು ಏಕಾಂತತೆಯನ್ನು ಹೆಚ್ಚು ಇಷ್ಟ ಪಡುತ್ತಾರೆ.

ತೆಳ್ಳಗಿನ ಮೇಲ್ದುಟಿ

ಮೇಲಿನ ತುಟಿ ತುಂಬಾ ತೆಳ್ಳಗೆ ಇರುವವರು ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಇತರರನ್ನು ಮನವೊಲಿಸುವಲ್ಲಿ ಅತ್ಯುತ್ತಮರು. ಇವರಲ್ಲಿರುವ ಒಂದು ಸಮಸ್ಯೆಯೆಂದರೆ ಇವರು ಸಂಬಂಧವನ್ನು ಮುಂದುವರಿಸಲು ಪರದಾಡುತ್ತಾರೆ. ಹೀಗೇ ಒಬ್ಬೊಬ್ಬರ ತುಟಿಯ ಆಕಾರ ಅವರ ವ್ಯಕ್ತಿತ್ವವನ್ನು ಹೇಳುತ್ತದೆ.

Related post

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ – ಇಲ್ಲಿದೆ ಸಂಪೂರ್ಣ ಮಾಹಿತಿ

ಕೆಪಿಎಸ್‌ಸಿ ನೇಮಕಾತಿ: 230 ಗ್ರೂಪ್​ ಸಿ ಹುದ್ದೆಗೆ ಅರ್ಜಿ ಆಹ್ವಾನ –…

ನ್ಯೂಸ್‌ ಆ್ಯರೋ : ಕರ್ನಾಟಕ ಲೋಕ ಸೇವಾ ಆಯೋಗದಿಂದ ಗ್ರೂಪ್​ ಸಿ ಖಾಲಿ ಇರುವ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ…
ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್ ಆಯ್ತು ಅಪರೂಪದ ವಿಡಿಯೋ..!

ಸೈನ್ಸ್ ಸಿಟಿಯಲ್ಲಿ ಪ್ರಧಾನಿಗೆ ಚಹಾ ತಂದು ಕೊಟ್ಟ ರೋಬೊಟ್ – ವೈರಲ್…

ನ್ಯೂಸ್ ಆ್ಯರೋ : ಪ್ರಧಾನಿ ನರೇಂದ್ರ ಮೋದಿ ಬುಧವಾರ ಗುಜರಾತ್‌ ನ ಅಹಮದಾಬಾದ್‌ ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಈ ವೇಳೆ ರೋಬೊಟ್ ಪ್ರಧಾನ…

Leave a Reply

Your email address will not be published. Required fields are marked *