‘ಯುಗಾದಿ’ಹಿಂದೂಗಳಿಗೆ ಹೊಸ ವರ್ಷದ ಸಂಭ್ರಮ: ಆಚರಣೆ ಹೇಗೆ, ಬೇವು– ಬೆಲ್ಲವನ್ನು ಏಕೆ ಸೇವಿಸುವುದು?

‘ಯುಗಾದಿ’ಹಿಂದೂಗಳಿಗೆ ಹೊಸ ವರ್ಷದ ಸಂಭ್ರಮ: ಆಚರಣೆ ಹೇಗೆ, ಬೇವು– ಬೆಲ್ಲವನ್ನು ಏಕೆ ಸೇವಿಸುವುದು?

ನ್ಯೂಸ್‌ ಆ್ಯರೋ : ದಕ್ಷಿಣ ಭಾರತದ ಜನರಿಗೆ ಯುಗಾದಿ ಹೊಸ ವರ್ಷದ ಆರಂಭವನ್ನು ಸೂಚಿಸುವ ಹಬ್ಬವಾಗಿದೆ. ದೇಶದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಯುಗಾದಿಯನ್ನು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಯುಗಾದಿ ಹಬ್ಬದ ಒಟ್ಟು ಚಿತ್ರಣವನ್ನು ಈ ಲೇಖದಲ್ಲಿ ಕಟ್ಟಿಕೊಡಲಾಗಿದೆ.

ಯುಗಾದಿ ಎನ್ನುವ ಪದವು ಎರಡು ಪದಗಳ ಜೋಡಣೆಯಾಗಿದೆ. ಯುಗಾದಿ ಎನ್ನುವ ಪದದಲ್ಲಿ ‘ಯುಗ’ ಎಂದರೆ ಅವಧಿ ಮತ್ತು ‘ಆದಿ’ ಎಂದರೆ ಪ್ರಾರಂಭ ಎಂಬ ಅರ್ಥವನ್ನು ಹೇಳುತ್ತದೆ. ಯುಗಾದಿ ಎಂದರೆ ”ಹೊಸ ಯುಗದ ಆರಂಭ” ಎಂದರ್ಥ.

2023ರ ಯುಗಾದಿ ಹಬ್ಬವನ್ನು 22ರಂದು ಆಚರಿಸಲಾಗುತ್ತದೆ. ಯುಗಾದಿಯಲ್ಲಿ ಚಂದ್ರಮಾನ ಹಾಗೂ ಸೌರಮಾನ ಯುಗಾದಿ ಎಂಬ ಎರಡು ವಿಧಗಳಿವೆ. ಚಂದ್ರಮಾನ ಯುಗಾದಿ ಎಂದರೆ ಚಂದ್ರನ ಚಲನೆಯ ಆಧಾರ ಮೇಲೆ ದಿನ, ಕಾಲವನ್ನು ನಿಗದಿ ಮಾಡುವುದು ಹಾಗೂ ಸೂರ್ಯನ ಚಲನೆ ಮೇಲೆ ದಿನ, ಕಾಲವನ್ನು ನಿಗದಿ ಮಾಡುವುದನ್ನು ಸೌರಮಾನ ಯುಗಾದಿ ಎಂದು ಕರೆಯುತ್ತಾರೆ. ಸೌರಮಾನ ಮಾನ ಯುಗಾದಿಯನ್ನು ಕೇರಳ ಹಾಗೂ ಕರಾವಳಿ ಭಾಗದಲ್ಲಿ ಆಚರಿಸುತ್ತಾರೆ. ಇನ್ನು ಚಂದ್ರಮಾನ ಯುಗಾದಿಯನ್ನು ಬೇರೆಲ್ಲ ಕಡೆ ಸಂಭ್ರಮಿಸುತ್ತಾರೆ. ಪ್ರಸ್ತುತ ಎರಡು ಯುಗಾದಿಯನ್ನು ಎಲ್ಲರೂ ಸಂಭ್ರಮ, ಸಡಗರಿಂದ ಆಚರಿಸುತ್ತಾರೆ.

ಯುಗಾದಿಯ ಇತಿಹಾಸ:

ಹಿಂದೂ ಪುರಾಣಗಳ ಪ್ರಕಾರ, ಬ್ರಹ್ಮ ದೇವರು ಯುಗಾದಿಯಂದು ಬ್ರಹ್ಮಾಂಡದ ಸೃಷ್ಟಿಯನ್ನು ಪ್ರಾರಂಭಿಸಿದನು ಎನ್ನುವ ಉಲ್ಲೇಖವಿದೆ. ದುರ್ಗಾ ದೇವಿಯ ಒಂಬತ್ತು ರೂಪಗಳನ್ನು ಆಚರಿಸುವ ಒಂಬತ್ತು ದಿನಗಳ ಉತ್ಸವದ ಮೊದಲ ದಿನ – ಚೈತ್ರ ನವರಾತ್ರಿಯು ಈ ದಿನದಿಂದ ಪ್ರಾರಂಭವಾಗುತ್ತದೆ. ಇದು ಚಳಿಗಾಲದ ಕಠೋರವಾದ ಚಳಿಯ ನಂತರ ವಸಂತಕಾಲದ ಆರಂಭ ಮತ್ತು ಸೌಮ್ಯವಾದ ಹವಾಮಾನವನ್ನು ಸೂಚಿಸುವ ಹಬ್ಬವಾಗಿದೆ. ಇದು ವಸಂತ ಋತುವನ್ನು ಸ್ವಾಗತಿಸಲು ಆಚರಿಸುವ ಹಬ್ಬವೂ ಹೌದು.

ಯುಗಾದಿಯಲ್ಲಿ ಬೇವು–ಬೆಲ್ಲ ಸವಿಯುವುದರ ಹಿಂದಿದೆ ಕಾರಣ:

ಯುಗಾದಿಯಂದು ಹಂಚಿಕೊಳ್ಳುವ ಬೇವು – ಬೆಲ್ಲವು ನಮ್ಮ ಜೀವನದ ಸುಖ-ದುಃಖವನ್ನು, ಸೋಲು – ಗೆಲುವನ್ನು ಸೂಚಿಸುತ್ತದೆ. ಬೇವು – ಬೆಲ್ಲದ ಸಿಹಿ ಮತ್ತು ಕಹಿಯ ಆಸ್ವಾದದಂತೆ ನಮ್ಮ ಜೀವನವೂ ಏರಿಳಿತ ನೋವು ನಲಿವುಗಳಿಂದ ತುಂಬಿರುತ್ತದೆ ಎನ್ನುವ ಅರ್ಥವವನ್ನು ಹೇಳುತ್ತದೆ. ಅದಲ್ಲದೆ ವೈಜ್ಞಾನಿಕ ಕಾರಣವೂ ಇದ್ದು, ಬೇವು ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು , ಔಷಧಿ ಉಪಯುಕ್ತ ಸಸ್ಯವಾಗಿದೆ. ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ಬೆಲ್ಲವೂ ಖನಿಜಾಂಶವನ್ನು ಹೊಂದಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಯುಗಾದಿ ಆಚರಣೆ ಹೇಗೆ:

ಯುಗಾದಿ ಹಬ್ಬಕ್ಕೆ ವಾರದ ಮೊದಲೇ ತಯಾರಿಗಳು ಜೋರಾಗಿ ನಡೆಯುತ್ತದೆ. ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ, ಕಾರ್ತಿಕೇಯ ಮತ್ತು ಗಣೇಶನನ್ನು ಮೆಚ್ಚಿಸಲು ಮನೆಗಳ ಪ್ರವೇಶದ್ವಾರವನ್ನು ಅಲಂಕರಿಸಲು ಮಾವಿನ ಎಲೆಗಳನ್ನು ಬಳಸುತ್ತಾರೆ. ಹಬ್ಬದ ದಿನದಂದು ಜನರು ತಮ್ಮ ಮನೆಯ ಸುತ್ತಲಿನ ಸ್ಥಳಗಳನ್ನು ಹಸುವಿನ ಸಗಣಿಯ ನೀರನ್ನು ಸಿಂಪಡಿಸಿ ಶುದ್ಧ ಮಾಡುತ್ತಾರೆ. ನಂತರ ಮನೆಯನ್ನು ಹೂವುಗಳಿಂದ ಮತ್ತು ರಂಗೋಲಿಗಳಿಂದ ಅಲಂಕರಿಸುತ್ತಾರೆ. ತಮ್ಮ ದೇವರಿಗೆ ಪೂಜೆ ಸಲ್ಲಿಸಿದ ನಂತರ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿ, ಭಕ್ತರು ಎಣ್ಣೆ ಸ್ನಾನದಿಂದ ದಿನವನ್ನು ಪ್ರಾರಂಭಿಸುತ್ತಾರೆ. ಹೊಸ ಬಟ್ಟೆಯನ್ನು ಧರಿಸಿ ದೇವಸ್ಥಾನಗಳಿಗೆ ಭೇಟಿ ಕೊಡುತ್ತಾರೆ.

ಇನ್ನೂ ಹಬ್ಬ ಎಂದರೆ ಹಬ್ಬದೂಟ ಅಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ. ವಿಶೇಷ ಪಾನೀಯ ಪಚಡಿ ತಯಾರಿಸುವುದು ಸಹ ವಾಡಿಕೆ. ಪಚಡಿ ಎಂಬ ಈ ಪಾನೀಯವನ್ನು ಹೊಸ ಹುಣಸೆಹಣ್ಣು, ಮಾವು, ತೆಂಗಿನಕಾಯಿ, ಬೇವಿನ ಹೂವುಗಳು, ಬೆಲ್ಲದಂತಹ ವಸ್ತುಗಳನ್ನು ಬೆರೆಸಿ ಮಡಕೆಯಲ್ಲಿ ತಯಾರಿಸಲಾಗುತ್ತದೆ. ಈ ಪಾನೀಯವನ್ನು ಕುಟುಂಬದ ಸದಸ್ಯರು ಕುಡಿಯುವುದು ಮಾತ್ರವಲ್ಲದೇ, ಎಲ್ಲರಿಗೂ ಹಂಚಲಾಗುತ್ತದೆ. ಅದಲ್ಲದೆ ಸಿಹಿ ಹಾಗೂ ಖಾರ ಮಿಶ್ರಿತ ಭೋಜನವನ್ನು ಮಾಡಿ ಸವಿಯಲಾಗುತ್ತದೆ.

ಸಂಬಂಧಿಕರು ಒಟ್ಟಿಗೆ ಸೇರಿ ಈ ದಿನವನ್ನು ಸಂಭ್ರಮಿಸುತ್ತಾರೆ. ಇನ್ನೂ ಈ ಸಂಭ್ರಮ ಸ್ಥಳದಿಂದ ಸ್ಥಳಕ್ಕೆ ತುಂಬಾನೇ ವಿಭಿನ್ನವಾಗಿರುತ್ತದೆ. ಒಟ್ಟಾರೆ ಹಿಂದೂತ್ವದ ಪ್ರಕಾರ ಯುಗಾದಿ ಹಬ್ಬ ಹಿಂದೂಗಳ ಹೊಸ ವರ್ಷವನ್ನು ಬರಮಾಡಿಕೊಳ್ಳುವ ಹಬ್ಬವಾಗಿದೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *