
ಶ್ರೀಲಂಕಾದಲ್ಲಿ ಇಂದಿಗೂ ಇದೆ ರಾವಣನ ಮೃತದೇಹ? – ವೈಭವೋಪೇತ ಅರಮನೆಯ ಸಾಕ್ಷಿ ಹೇಳುತ್ತವೆ ಕುರುಹುಗಳು..!
- ಕೌತುಕ-ವಿಜ್ಞಾನ
- September 11, 2023
- No Comment
- 130
ನ್ಯೂಸ್ ಆ್ಯರೋ : ಶ್ರೇಷ್ಠ ಕಾವ್ಯಗಳಲ್ಲಿ ‘ರಾಮಾಯಣ’ವೂ ಒಂದು. ಇದು ಸಾಹಿತ್ಯ ಪ್ರಕಾರಕ್ಕಿಂತ ಹೆಚ್ಚಾಗಿ ಜೀವನ ದರ್ಶನ ಮಾಡಿಸುವ ಕೃತಿ. ಪ್ರಾಚೀನ ಭಾರತದ ಜನ ಜೀವನಕ್ಕೆ ಕನ್ನಡಿ ಹಿಡಿಯುವ ಇದರಲ್ಲಿ ಹೇಳಿರುವ ಕೆಲವು ಘಟನೆಗಳಿಗೆ ಇಂದಿಗೂ ಸಾಕ್ಷಿಗಳು ಸಿಗುತ್ತವೆ.
ರಾವಣನ ಅರಮನೆ

ಚಿನ್ನದ ಲಂಕೆಯ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ. ಅಲ್ಲಿನ ರಾವಣದ ವೈಭವೋಪೇತ ಅರಮನೆ ಇಂದಿಗೂ ಶ್ರೀಲಂಕಾದ ಸಿಗಿರಿಯಾದಲ್ಲಿದೆ.
ವೈಶಿಷ್ಟ್ಯ
ರಾವಣನ ಅರಮನೆಗೆ ಸಾಗಲು ಸಾವಿರ ಮೆಟ್ಟಿಲುಗಳಿದ್ದವು. ಆದರೂ ಜನರು ರಾವಣನ ಬಳಿಗೆ ತೆರಳಲು ಲಿಫ್ಟ್ ಉಪಯೋಗಿಸುತ್ತಿದ್ದರಂತೆ. ಈ ಅರಮನೆಯನ್ನು ಕುಬೇರ ಕಟ್ಟಿಸಿದ್ದ. ಬಳಿಕ ರಾವಣ ವಶಪಡಿಸಿ ತನ್ನದಾಗಿಸಿಕೊಂಡಿದ್ದ ಎನ್ನಲಾಗುತ್ತಿದೆ. ಈ ಅರಮನೆ ದೊಡ್ಡದಾದ ಬಂಡೆಯ ಮೇಲೆ ನಿಂತಿದೆ.
ಕೆಲವು ದಿನಗಳವರೆಗೆ ರಾವಣನು ಸೀತೆಯನ್ನು ಇದೇ ಅರಮನೆಯಲ್ಲಿ ಇರಿಸಿದ್ದನಂತೆ. ಇಲ್ಲಿ ಭದ್ರವಾದ ತಾರಸಿ ತೋಟ, ಕೊಳ, ಕಾಲುವೆ, ಕಾರಂಜಿಗಳಿವೆ. ಬಹಳ ಎತ್ತರದಲ್ಲಿದ್ದರೂ ಇಲ್ಲಿನ ನೀರಿನ ವ್ಯವಸ್ಥೆ ಉತ್ತಮವಾಗಿತ್ತು ಎನ್ನುವುದಕ್ಕೆ ಕುರುಹುಗಳು ಸಿಗುತ್ತವೆ.
ಇಂದಿಗೂ ಇದೆ ರಾವಣನ ಮೃತದೇಹ?

ಸ್ಥಳೀಯರ ನಂಬಿಕೆ ಪ್ರಕಾರ ಇಂದಿಗೂ ರಾವಣನ ಮೃತದೇಹವನ್ನು ಸಂಗ್ರಹಿಸಿ ಇಡಲಾಗಿದೆಯಂತೆ. ರಾಗೇಲಾ ಅರಣ್ಯದಲ್ಲಿ ಸುಮಾರು 8 ಸಾವಿರ ಅಡಿ ಎತ್ತರದಲ್ಲಿ ಮಮ್ಮಿಯಾಗಿ ರಾವಣನ ಮೃತದೇಹ ಕೆಡದಂತೆ ವಿಶಿಷ್ಟ ಲೇಪ ಹಾಕಿ ಇರಿಸಲಾಗಿದೆ ಎಂದು ಕೆಲವರು ಹೇಳುತ್ತಾರಾದರೂ ಸೂಕ್ತ ಪುರಾವೆಗಳಿಲ್ಲ.