ವಿಮಾನದಲ್ಲಿ ಕೆಜಿ ಗಟ್ಟಲೆ ಲಗೇಜ್ ಒಯ್ದರೂ 100ml ಗಿಂತ ಜಾಸ್ತಿಯ ನೀರಿನ ಬಾಟಲ್ ನಿಷೇಧ – ಕಾರಣ ಏನು ಗೊತ್ತಾ?

ವಿಮಾನದಲ್ಲಿ ಕೆಜಿ ಗಟ್ಟಲೆ ಲಗೇಜ್ ಒಯ್ದರೂ 100ml ಗಿಂತ ಜಾಸ್ತಿಯ ನೀರಿನ ಬಾಟಲ್ ನಿಷೇಧ – ಕಾರಣ ಏನು ಗೊತ್ತಾ?

ನ್ಯೂಸ್ ಆ್ಯರೋ : ವಿಮಾನದಲ್ಲಿ ಹಾರುವ ಅಸೆ ಎಲ್ಲರಿಗೂ ಇರುತ್ತದೆ. ಆದರೆ ಚೆಕ್ಕಿಂಗ್ ನ ನಿಯಮಗಳು ಕೆಲವೊಮ್ಮೆ ಬೇಸರ ಉಂಟು ಮಾಡುವುದಿದೆ. ಆದರೆ ಅದು ನಮ್ಮ ಸುರಕ್ಷತೆಗಾಗಿ ಎಂದುಕೊಂಡರೆ ಬಹುಶ ಸ್ವಲ್ಪ ನಿರಾಳವಾಗಬಹುದು.

ವಿಮಾನದಲ್ಲಿ ಪ್ರಯಾಣಿಸುವಾಗ ನೀರು ತುಂಬಿದ ಬಾಟಲಿಗಳನ್ನೂ ಕೊಂಡೊಯ್ಯಲು ಅವಕಾಶವಿಲ್ಲ.

ತೀರಾ ಅನಿವಾರ್ಯ ಎಂದಾದರೆ ಖಾಲಿ ಸ್ಟೇನ್‌ಲೆಸ್ ಸ್ಟೀಲ್ ನ ಬಾಟಲಿಗಳನ್ನು ತೆಗೆದುಕೊಂಡು ಹೋಗಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಖಾಲಿ ಬಾಟಲಿಗೆ ನೀರು ತುಂಬಿಸಲು ಅವಕಾಶವಿದೆ. ಅದು ಕೇವಲ 100 ಮಿಲಿಗಿಂತ ಕಡಿಮೆ. ಇದರಲ್ಲಿ ಬಾಟಲಿಯ ಗಾತ್ರ ಮಾತ್ರ ಎಣಿಕೆ ಮಾಡಲಾಗುತ್ತದೆ. 3.4 ಔನ್ಸ್ ಅಂದರೆ 100 mlಗಿಂತ ದೊಡ್ಡದಾದ ನೀರಿನ ಬಾಟಲಿಗಳನ್ನು ಕೊಂಡೊಯ್ಯಲು ಅನುಮತಿ ಇಲ್ಲ.

ವಿಮಾನ ನಿಲ್ದಾಣದೊಳಗೆ ಸ್ಟೇನ್‌ಲೆಸ್ ಸ್ಟೀಲ್ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗಲು ಅನುಮತಿ ಇದೆ. ಆದರೆ ಇದು ಭದ್ರತಾ ಚೆಕ್‌ಪಾಯಿಂಟ್ ನಲ್ಲಿ ಹೋಗುವಾಗ ಖಾಲಿಯಾಗಿದ್ದು, ಕೈ ಬ್ಯಾಗ್ ನಲ್ಲಿ ಇರಿಸಿಕೊಳ್ಳಬಹುದು.

ಯಾವ ಬಾಟಲಿಗಳಿಗೆ ಅನುಮತಿ ಇಲ್ಲ?

ವಿಮಾನ ಪ್ರಯಾಣಿಕರಿಗೆ 100 ಮಿಲಿ ಲೀಟರ್‌ಗಳಿಗಿಂತ ದೊಡ್ಡದಾದ ಬಾಟಲಿಯಲ್ಲಿರುವ ವಸ್ತುಗಳು, ಸ್ಕ್ರೀನಿಂಗ್ ಸಮಯದಲ್ಲಿ ಎಚ್ಚರಿಕೆ ನೀಡುವ ಯಾವುದೇ ದ್ರವ, ಏರೋಸಾಲ್, ಜೆಲ್, ಕ್ರೀಮ್ ಅಥವಾ ಪೇಸ್ಟ್ ಗಳನ್ನು ಕೊಂಡೊಯ್ಯುವಂತಿಲ್ಲ.

ಯಾವುದೇ ದ್ರವ ಪದಾರ್ಥಗಳಾಗಿರಲಿ ಅದು 100 ಮಿಲಿ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರಬೇಕು. ವಿಮಾನ ನಿಲ್ದಾಣದ ಒಳಗೆ ಸಿಗುವ ನೀರನ್ನು ಚೆಕ್ಕಿಂಗ್ ಎಲ್ಲ ಮುಗಿದ ಮೇಲೆ ಭದ್ರತೆಯಲ್ಲಿ ಬಾಟಲಿಗೆ ತುಂಬಿಸಿಕೊಳ್ಳಲು ಅವಕಾಶವಿದೆ. ಇಲ್ಲಿ ಮುಖ್ಯವಾದ ವಿಷಯ ಎಂದರೆ 100 ಮಿಲಿಗಿಂತ ಹೆಚ್ಚು ತೂಕವನ್ನು ನಿಮ್ಮ ಬಾಟಲಿ ನೀರು ಹೊಂದಿರಬಾರದು. 100 ಮಿಲಿಗಿಂತ ಹೆಚ್ಚು ಅಗತ್ಯವಿರುವ ಯಾವುದೇ ದ್ರವ ಪದಾರ್ಥವನ್ನು ಲಗೇಜ್‌ ಬ್ಯಾಗ್ ನಲ್ಲಿ ಪ್ಯಾಕ್ ಮಾಡಬಹುದು.

ವಿಮಾನ ಪ್ರಯಾಣಿಕರಿಗೆ ಬಂದೂಕು, ಮದ್ದುಗುಂಡು, ಪಟಾಕಿಗಳನ್ನು ತೆಗೆದುಕೊಂಡು ಹೋಗಲು ನಿಷೇಧವಿದೆ. ಎಲ್ಲಾ ಚಾಕು ಮತ್ತು ಸುರಕ್ಷತಾ ರೇಜರ್‌ಗಳಿಗೂ ಅನುಮತಿ ಇಲ್ಲ. ಇವುಗಳನ್ನು ಕ್ಯಾರಿ-ಆನ್ ಲಗೇಜ್‌ ಬ್ಯಾಗ್ ನಲ್ಲೂ ಪ್ಯಾಕ್ ಮಾಡಲು ಬಿಡುವುದಿಲ್ಲ. ಯಾಕೆಂದರೆ ಇದರಿಂದ ಹಾನಿಯಾಗುವ ಸಾಧ್ಯತೆ ಇದೆ.

ಇನ್ನು ವಿಮಾನದಲ್ಲಿ ಘನ ಆಹಾರ ಪದಾರ್ಥಗಳನ್ನು ಕ್ಯಾರಿ-ಆನ್ ಅಥವಾ ಚೆಕ್ಡ್ ಬ್ಯಾಗೇಜ್‌ನಲ್ಲಿ ಸಾಗಿಸಬಹುದು. ಆದರೆ ಇಲ್ಲಿ ಗಮನಿಸಬೇಕಾದ ಒಂದು ಸಂಗತಿ ಎಂದರೆ ಯಾವುದೇ ವಸ್ತುಗಳು ಸಂಶಯಾಸ್ಪದವಾಗಿ ಕಂಡು ಬಂದರೆ ಅಥವಾ ಎಕ್ಸ್-ರೇ ಯಂತ್ರದಲ್ಲಿ ಸ್ಪಷ್ಟವಾಗಿ ಚಿತ್ರ ತೋರಿಸಲು ಅಡ್ಡಿಯಾದರೆ ಅವುಗಳನ್ನು ತೆಗೆಯಲು ಭದ್ರತಾ ಅಧಿಕಾರಿಗಳು ಸೂಚಿಸುತ್ತಾರೆ.

ವೈದ್ಯಕೀಯ ಉದ್ದೇಶಗಳಿಗಾಗಿ ವಿಶೇಷ ಆಹಾರ, ಮಗುವಿನ ಆಹಾರ, ಹಾಲನ್ನು ತೆಗೆದುಕೊಂಡು ಹೋಗಬೇಕಿದ್ದರೆ ಭದ್ರತೆಯ ಮೂಲಕ 100ml ಗಿಂತ ಹೆಚ್ಚಿನ ದ್ರವದ ಪಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿ ಪ್ರತಿಯೊಂದು ದ್ರವ ಪದಾರ್ಥವು ಗರಿಷ್ಠ ಗರಿಷ್ಟ 100 ಮಿಲಿ ಗಾತ್ರದಲ್ಲಿ ಇರಬೇಕು. 1 ಲೀಟರ್ ನಷ್ಟನ್ನು ಸ್ಪಷ್ಟವಾಗಿ ಕಾಣುವ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಬೇಕು.

ನೀರಿಗೆ ಏಕೆ ನಿರ್ಬಂಧ ?

ಅಟ್ಲಾಂಟಿಕ್ ಸಾಗರದ ವಿಮಾನಗಳಲ್ಲಿ ದ್ರವ ರೂಪದ ಸ್ಫೋಟಕಗಳನ್ನು ಸ್ಫೋಟಿಸುವ ಭಯೋತ್ಪಾದಕರು ಸಂಚನ್ನು ಬ್ರಿಟಿಷ್ ಪೊಲೀಸರು ವಿಫಲಗೊಳಿಸಿದ್ದರು. ಹೀಗಾಗಿ 2006ರಲ್ಲಿ ವಿಮಾನದಲ್ಲಿನ ದ್ರವದ ಮಿತಿಯನ್ನು ನಿಗದಿ ಪಡಿಸಲಾಯಿತು. ಇನ್ನು ಅಮೆರಿಕದಲ್ಲಿ ನಡೆದಿದ್ದ 9/11 ದಾಳಿಯಲ್ಲಿ ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾ ನೈಟ್ರೊ ಗ್ಲಿಸಿರಿನ್ ಬಾಂಬ್ ಮಾಡುವುದು ತಿಳಿಯಿತು. ಇದು ನೀರಿನಂತೆ ಕಾಣುವ ವಸ್ತು. ಹೀಗಾಗಿ ಅಮೆರಿಕದಲ್ಲಿ ವಿಮಾನದಲ್ಲಿ ನೀರು ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಯಿತು. ಬಳಿಕ ಪ್ರಪಂಚದ ಪ್ರತಿಯೊಂದು ದೇಶವು ವಿಮಾನದಲ್ಲಿ ನೀರನ್ನು ಸಾಗಿಸಲು ನಿರ್ಬಂಧ ಹೇರಿದೆ.

ಭದ್ರತೆಯ ಹೆಚ್ಚಿನ ವಿಮಾನಯಾನ ಸಂಸ್ಥೆಗಳು 20 ಔನ್ಸ್ ಸಾಮರ್ಥ್ಯದ ಖಾಲಿ ನೀರಿನ ಬಾಟಲಿಯನ್ನು ತರಲು ಜನರಿಗೆ ಅವಕಾಶ ನೀಡುತ್ತವೆ. ಭದ್ರತೆಯಲ್ಲಿ ಸಾಗಿಸುವ ಪ್ರತಿಯೊಂದು ದ್ರವ, ಏರೋಸಾಲ್‌ ಮತ್ತು ಜೆಲ್‌ಗಳನ್ನು 100 ಮಿಲಿ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ಸಾಗಿಸಬಹುದು. ಅವೆಲ್ಲವೂ ಒಂದು ಪಾರದರ್ಶಕ ವಾದ 20cm x 20cm ಚೀಲದಲ್ಲಿ ತುಂಬಿಕೊಳ್ಳಬೇಕು. ಒಟ್ಟಾರೆಯಾಗಿ ಪ್ರತಿಯೊಬ್ಬ ಪ್ರಯಾಣಿಕರು ಭದ್ರತೆಯ ಮೂಲಕ ಗರಿಷ್ಠ 100 ml ಅನ್ನು ಸಾಗಿಸಲು ಅನುಮತಿ ಇದೆ. ಹೆಚ್ಚಿನ ಏರ್‌ಲೈನ್‌ಗಳು ನೀರನ್ನು ವಿಮಾನದಲ್ಲಿ ಒದಗಿಸುತ್ತವೆ. ಹಾಗೆಯೇ ಬಾಟಲ್ ವಾಟರ್‌ಗೆ ಶುಲ್ಕ ವಿಧಿಸುತ್ತವೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *