Chandrayan 3 : ಇಂದು ಚಂದ್ರನಲ್ಲಿ ಮತ್ತೆ ಸೂರ್ಯೋದಯ – ವಿಕ್ರಮ್ ಮತ್ತು ಪ್ರಗ್ಯಾನ್ ನನ್ನು ನಿದ್ರೆಯಿಂದ ಎಬ್ಬಿಸಲಿದೆ ಇಸ್ರೋ..!!

Chandrayan 3 : ಇಂದು ಚಂದ್ರನಲ್ಲಿ ಮತ್ತೆ ಸೂರ್ಯೋದಯ – ವಿಕ್ರಮ್ ಮತ್ತು ಪ್ರಗ್ಯಾನ್ ನನ್ನು ನಿದ್ರೆಯಿಂದ ಎಬ್ಬಿಸಲಿದೆ ಇಸ್ರೋ..!!

ನ್ಯೂಸ್ ಆ್ಯರೋ : ಚಂದ್ರಯಾನ 3 ಯಶಸ್ವಿ ಉಡ್ಡಯನದ ಬಳಿಕ ಚಂದ್ರನ ದಕ್ಷಿಣ ಧ್ರುವದ ಮೇಲಿಳಿದು ಅಲ್ಲಿ 12 ದಿನಗಳ ಕಾಲ ಕಾರ್ಯ ನಿರ್ವಹಿಸಿ ನಿದ್ರೆಗೆ ಜಾರಿದ್ದ ವಿಕ್ರಂ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ಗಳನ್ನು ಮತ್ತೆ ಎಚ್ಚರಿಸುವ ಕಾರ್ಯವನ್ನು ಇಸ್ರೋ ಇಂದು ಕೈಗೊಳ್ಳಲಿದೆ.

ಒಂದು ವೇಳೆ ಈ ಕಾರ್ಯದಲ್ಲಿ ಇಸ್ರೋ ವಿಜ್ಞಾನಿಗಳು ಯಶಸ್ವಿಯಾದರೆ ಮತ್ತೆ 14 ದಿನಗಳ ಕಾಲ ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಮತ್ತೆ ತಮ್ಮ ಕಾರ್ಯ ಆರಂಭಿಸಲಿವೆ.

ಚಂದ್ರನ ಮೇಲಿನ ರಾತ್ರಿ ಸಮಯ ಸೆ.21ಕ್ಕೆ ಮುಕ್ತಾಯವಾಗಿದ್ದು, ಇಂದು ಅಲ್ಲಿ ಸೂರ್ಯೋದಯವಾಗಲಿದೆ. ಇಂದು ಲ್ಯಾಂಡರ್‌ (Vikram lander) ಮತ್ತು ರೋವರ್‌ಗಳು (Pragyan rover) ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿದರೆ ಇದು ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಬಹುದೊಡ್ಡ ಹೆಜ್ಜೆಯಾಗಲಿದೆ.

ಇದರಲ್ಲಿ ಏನಾದರೂ ಯಶಸ್ವಿ ಆದರೆ ಚಂದ್ರನ ಮೇಲೆ ಮತ್ತಷ್ಟು ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ಚಂದ್ರನ ಮೇಲೆ ಮತ್ತಷ್ಟು ಆವಿಷ್ಕಾರ ನಡೆಯಲಿದೆ. ಚಂದ್ರನ ಮೇಲೆ 1 ಹಗಲಿನಲ್ಲಿ (ಭೂಮಿಯ 14 ದಿನ) ಕೆಲಸ ಮಾಡಲು ಲ್ಯಾಂಡರ್‌ ಮತ್ತು ರೋವರ್‌ಗಳನ್ನು ಕಳುಹಿಸಲಾಗಿತ್ತು. ಆದರೆ ಇವುಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಕಾರಣ 2 ದಿನ ಮೊದಲೇ ಇವುಗಳನ್ನು ಸ್ಲೀಪ್‌ ಮೋಡ್‌ಗೆ ಹಾಕಲಾಗಿತ್ತು.

ಆದರೆ ಚಂದ್ರನಲ್ಲಿ ಸೂರ್ಯನ ಬೆಳಕು ಇಲ್ಲದ ಸಮಯದಲ್ಲಿ ಉಷ್ಣಾಂಶ ಮೈನಸ್‌ 240 ಡಿಗ್ರಿವರೆಗೂ ತಲುಪುತ್ತದೆ. ಹಾಗಾಗಿ ಈ ಉಷ್ಣಾಂಶದಲ್ಲಿ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳು ಉಳಿಯುವುದು ಸಾಹಸವೇ ಆಗಿದೆ. ಹಾಗಾಗಿ ಇಸ್ರೋದ ಈ ಪ್ರಯೋಗಕ್ಕಾಗಿ ಎಲ್ಲಾ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಕಾದು ಕುಳಿತಿವೆ.

Related post

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ ಮದುವೆ

ಚಿಕ್ಕಮಗಳೂರಿನಲ್ಲೊಂದು ಮಂತ್ರ ಮಾಂಗಲ್ಯ; 25 ವರ್ಷ ಪ್ರೀತಿಯಲ್ಲಿದ್ದ ಜೋಡಿಗೆ ಮಾನವ ಮಂಟಪದಲ್ಲಿ…

ನ್ಯೂಸ್ ಆರೋ: ಬರೋಬ್ಬರಿ 25 ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಮಂತ್ರ ಮಾಂಗಲ್ಯ ಮೂಲಕ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ತುಮಕೂರಲ್ಲಿ ನಡೆದಿದೆ. ಹೌದು ಜನಾಂದೋಲನದಲ್ಲಿ…
ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು! ಏನಿದು ವಿಷಯ?

ಪನೀರ್​ ಬಿರಿಯಾನಿ ಆರ್ಡರ್​ ಮಾಡಿದ್ರೆ, ಅದರ ಜೊತೆಗೆ ಚಿಕನ್​ ಕೂಡ ಬಂತು!…

ನ್ಯೂಸ್ ಆರೋ: ಎಷ್ಟೋ ಬಾರಿ ನಾವು ಈ ಹೊಟೇಲ್ ಗಳಿಗೆ ಹೋದಾಗ, ಅಲ್ಲಿ ಜನರು ವೆಜ್ ಮಂಚೂರಿಯನ್ನು ಆರ್ಡರ್ ಮಾಡಿದರೆ ಚಿಕನ್ ಮಂಚೂರಿ ತಂದು ಟೇಬಲ್ ಮೇಲೆ ಇಟ್ಟಿರುವ…
ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ಮದ್ವೆಗೂ ಮುಂಚೆಯೇ ಐದು ಮಂದಿ ತಾರೆಯರ ಜೊತೆ ಡೇಟ್ ಮಾಡಿದ್ದ ವಿರಾಟ್..!

ನ್ಯೂಸ್ ಆರೋ: ಬಾಲಿವುಡ್‌ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪರಿಚಯ ಯಾರಿಗೂ ಅಗತ್ಯವಿಲ್ಲ. ಇತ್ತೀಚೆಗಷ್ಟೇ ಅಂದರೆ ಮೇ…

Leave a Reply

Your email address will not be published. Required fields are marked *