
Chandrayan 3 : ವಿಕ್ರಮ್ ಲ್ಯಾಂಡರ್ ನ ಚಿತ್ರ ಸೆರೆಹಿಡಿದ ಚಂದ್ರಯಾನ 2ರ ಆರ್ಬಿಟರ್ – ಟ್ವಿಟರ್ ನಲ್ಲಿ ಚಿತ್ರ ಹಂಚಿಕೊಂಡ ಇಸ್ರೋ
- ಕೌತುಕ-ವಿಜ್ಞಾನ
- September 10, 2023
- No Comment
- 79
ನ್ಯೂಸ್ ಆ್ಯರೋ : ಭಾರತೀಯ ಬಾಹ್ಯಾಕಾಶ ಸಂಸ್ಥೆಯು ಶನಿವಾರ ಚಂದ್ರಯಾನ- 2ರ ಆರ್ಬಿಟರ್ ಸೆರೆ ಹಿಡಿದಿರುವ ಚಂದ್ರಯಾನ- 3ರ ವಿಕ್ರಮ್ ಲ್ಯಾಂಡರ್ ಚಿತ್ರ ವನ್ನು ಬಿಡುಗಡೆ ಮಾಡಿದೆ.
ಸೆ. 6ರಂದು ಚಂದ್ರಯಾನ-2 ಆರ್ಬಿಟರ್ ನಲ್ಲಿ ಡ್ಯುಯೆಲ್- ಫ್ರಿಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಕರಣದಿಂದ ಚಂದ್ರಯಾನ- 3 ಲ್ಯಾಂಡರ್ ನ ಚಿತ್ರವನ್ನು ಸೆರೆ ಹಿಡಿದಿದೆ.
ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಕರಣವು ನಿರ್ದಿಷ್ಟ ತರಂಗಾಂತರ ಬ್ಯಾಂಡ್ ನಲ್ಲಿ ಸೂಕ್ಷ್ಮ ತರಂಗಗಳನ್ನು ರವಾನಿಸುತ್ತದೆ. ಮೇಲ್ಮೈ ಯಿಂದ ಚದುರಿದ ಅದೇ ತರಂಗಗಳನ್ನು ಸ್ವೀಕರಿಸುತ್ತದೆ. ಇದೊಂದು ರಾಡಾರ್ ಆಗಿರುವುದರಿಂದ ಸೌರ ಪ್ರಕಾಶವಿಲ್ಲದೆಯೂ ಚಿತ್ರೀಕರಣ ನಡೆಸುತ್ತದೆ. ಇದು ಗುರಿಯ ವೈಶಿಷ್ಟ್ಯ ಗಳ ದೂರ ಮತ್ತು ಭೌತಿಕ ಗುಣಲಕ್ಷಣಗಳನ್ನು ಒದಗಿಸುತ್ತದೆ. ಆದ್ದರಿಂದ ಈ ಸಿಂಥೆಟಿಕ್ ಅಪರ್ಚರ್ ರಾಡಾರ್ ಅನ್ನು ಭೂಮಿ ಮತ್ತು ಇತರ ಆಕಾಶಕಾಯಗಳ ರಿಮೋಟ್ ಸೆನ್ಸಿಂಗ್ ಗಾಗಿ ಬಳಸಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.
ಡಿಎಫ್ಎಸ್ಎಆರ್ ಚಂದ್ರಯಾನ- 2 ಆರ್ಬಿಟರ್ ನಲ್ಲಿರುವ ಪ್ರಮುಖ ವೈಜ್ಞಾನಿಕ ಸಾಧನವಾಗಿದೆ. ಇದು ಎಲ್ ಮತ್ತು ಎಸ್ ಬ್ಯಾಂಡ್ ಗಳಲ್ಲಿ ಸೂಕ್ಷ್ಮ ತರಂಗಗಳನ್ನು ಬಳಸಿಕೊಳ್ಳುತ್ತದೆ. ಈ ಅತ್ಯಾ ಧುನಿಕ ಉಪಕರಣವು ಯಾವುದೇ ಗ್ರಹಗಳ ಕಾರ್ಯಾಚರಣೆಯಲ್ಲಿ ಅತ್ಯು ತ್ತಮ ರೆಸಲ್ಯೂ ಶನ್ ಪೋಲಾರ್ ಮೆಟ್ರಿಕ್ ಚಿತ್ರ ಗಳನ್ನು ನೀಡುತ್ತಿದೆ ಎಂದುಮಾಹಿತಿ ನೀಡಿದೆ.
ದೀರ್ಘವಾದ ರಾಡಾರ್ ತರಂಗಾಂತರವು ಡಿಎಫ್ಎಸ್ಎಆರ್ ಅನ್ನು ಕೆಲವು ಮೀಟರ್ ಗಳವರೆಗೆ ಚಂದ್ರ ನ ಉಪಮೇಲ್ಮೈ ವೈಶಿಷ್ಟ್ಯ ಗಳನ್ನು ಅನ್ವೇಷಿಸಲು ಶಕ್ತಗೊಳಿಸುತ್ತದೆ. ಡಿಎಫ್ಎಸ್ಎಆರ್ ಕಳೆದ ನಾಲ್ಕು ವರ್ಷಗಳಿಂದ ಚಂದ್ರನ ಧ್ರುವ ವಿಜ್ಞಾನದ ಮೇಲೆ ಮುಖ್ಯವಾಗಿ ಗಮನಹರಿಸುತ್ತಿದೆ. ಜೊತೆಗೆ ಚಂದ್ರನ ಮೇಲ್ಮೈಯನ್ನು ಚಿತ್ರಿಸುವ ಮೂಲಕ ಉತ್ತಮ ಗುಣಮಟ್ಟದ ದತ್ತಾಂಶವನ್ನು ಒದಗಿಸುತ್ತದೆ ಎಂದು
ಇಸ್ರೋ ವಿವರಿಸಿದೆ.